Advertisement

ಎಲ್ಲರೂ ಸಸಿ ಬೆಳೆಸಲು ಆದ್ಯತೆ ನೀಡಿ: ಶಾಂತರಡ್ಡಿ

11:28 AM Jun 07, 2019 | Team Udayavani |

ಹುಣಸಗಿ: ಮಾನವನ ದುರಾಸೆಯಿಂದ ಪರಿಸರ ಅಳಿವಿನ ಅಂಚಿನಲ್ಲಿದ್ದು, ಆದ್ದರಿಂದ ಎಲ್ಲರೂ ಸಸಿಗಳನ್ನು ಬೆಳೆಸಲು ಒತ್ತು ನೀಡಬೇಕಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಶಾಂತರಡ್ಡಿ ಹೇಳಿದರು.

Advertisement

ಸಮೀಪದ ಕಲ್ಲದೇವನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಿ ಅವರು ಮಾತನಾಡಿದರು.

ನಿಮ್ಮ ಕುಟುಂಬದ ಯಾವುದೇ ಕಾರ್ಯಕ್ರಮ ಇರಲಿ ಅದರ ನೆನಪಿಗೋಸ್ಕರ ಒಂದು ಗಿಡ ನೆಟ್ಟು ಪಾಲನೆ ಪೋಷಣೆ ಮಾಡಿ ಅದರಿಂದ ನಿಮಗೂ ಅನುಕೂಲ ಮತ್ತು ಸಾಮಾಜಿಕ ಕಳಕಳಿ ತೋರಿಸಿದಂತಾಗುತ್ತದೆ ಎಂದರು.

ನಮ್ಮಲ್ಲಿ ಕೂಡ ಪರಮಾನಂದ ಗುಡ್ಡ, ಕಲ್ಲದೇವನಹಳ್ಳಿ, ಕಚನೂರು, ವಜ್ಜಲ, ಬೈಲಾಪುರ, ದ್ಯಾಮನಾಳ, ಮಾಳನೂರು, ರಾಜನಕೋಳುರು, ನಾರಾಯಣಪುರ ಎಡದಂಡೆ ವಿತರಣಾ ಕಾಲುವೆ, ಕೃಷ್ಣೆಯ ನದಿ ದಂಡೆಯ ಭಾಗದಲ್ಲಿ ಅನೇಕ ಹಸಿರು ಗಿಡಗಳ ಬೀಜದ ನಾಟಿ ಆಗಬೇಕು. ಅದನ್ನು ಹತ್ತು ವರ್ಷಗಳ ಕಾಲ ನಾವೆಲ್ಲರೂ ನಿಗಾ ವಹಿಸಿದಲ್ಲಿ ನಾವು ಕುಡ ಕಾಡು ಬೆಳೆಸಿದಂತಾಗುತ್ತದೆ ಎಂದು ಹೇಳಿದರು.

ಇನ್ನೋರ್ವ ವಲಯ ಅರಣ್ಯಾಧಿಕಾರಿ ಪುಷ್ಪಲತಾ, ಯುವ ಸಾಹಿತಿ ಅಮರಯ್ಯಸ್ವಾಮಿ ಜಾಲಿಬೆಂಚಿ ಮಾತನಾಡಿ, ಗಿಡ ಮರಗಳ ಬೆಳೆಸುವುದರಿಂದ ಮಾನವರಿಗೆ ಮಾತ್ರವಲ್ಲದೆ ಪ್ರಕೃತಿಯ ಎಲ್ಲ ಜೀವ ಸಂಕುಲಗಳಿಗೂ ಆಹಾರ, ನೀರು, ನೆರಳು, ಗಾಳಿ ದೊರೆಯುತ್ತದೆ. ಅದಕ್ಕಾಗಿ ನಮ್ಮ ಪ್ರತಿ ಚಲನವಲನ ಪರಿಸರ ಮುಖೀಯಾಗಿರಬೇಕು ಎಂದರು.

Advertisement

ಮುಖ್ಯ ಶಿಕ್ಷಕ ಹಸನಸಾ ಬೆಕಿನಾಳ್‌ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪರಮಾನಂದ ಚೆಟ್ಟಿ, ಮುತ್ತಣ್ಣ ಮೇಟಿ, ಶ್ರೀಕಾಂತ ಗಣಾಚಾರಿ, ನಾಗೇಶ ದೊರೆ, ಸಂಜೀವಪ್ಪ, ಶಿವಪ್ಪ ಬಡಿಗೇರ್‌, ಈರಣ್ಣ ದೇಸಾಯಿ ಇದ್ದರು. ನಂತರ ಶಾಲಾ ಮಕ್ಕಳು ಸೇರಿದಂತೆ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕನಕಪ್ಪ ವಾಗಿಣಗೇರಾ ನಿರೂಪಿಸಿದರು. ಶಾರದಾ ಸ್ವಾಗತಿಸಿದರು. ಹುಲಗಪ್ಪ ಹಡಗಿನಾಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next