Advertisement

ಆಧ್ಯಾತ್ಮ ಚಿಂತನೆ ಮೈಗೂಡಿಸಿಕೊಳ್ಳಿ

04:54 PM Mar 12, 2020 | Naveen |

ಹುಣಸಗಿ: ಎಲ್ಲರಿಗೂ ಶಾಂತಿ, ನೆಮ್ಮದಿ, ಉತ್ತಮ ಆರೋಗ್ಯ ಲಭಿಸಬೇಕಾದರೆ ನಿತ್ಯವೂ ಆಧ್ಯಾತ್ಮದ ಚಿಂತನೆ ಮೈಗೊಡಿಸಿಕೊಂಡಲ್ಲಿ ಮನಸ್ಸಿಗೆ ಅಹ್ಲಾದ ಉಂಟಾಗಿ ಧನಾತ್ಮಕ ವಿಚಾರದಾರೆಗಳು ಉತ್ಪತ್ತಿಯಾಗುತ್ತವೆ ಎಂದು ಆಧ್ಯಾತ್ಮಿಕ ಚಿಂತಕ ಮನೋಹರರಾವ ದ್ಯಾಮನಹಾಳ ಹೇಳಿದರು.

Advertisement

ತಾಲೂಕಿನ ಬಲಶೆಟ್ಟಿಹಾಳ ಗ್ರಾಮದ ಬಸವಲಿಂಗ ಶಿವಯೋಗಿ ಮಠದಲ್ಲಿ ಹಮ್ಮಿಕೊಂಡಿದದ್ದ 21ನೇ ಶಿವಾನುಭವ ಚಿಂತನ ಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.

ಆಧ್ಯಾತ್ಮದ ಚಿಂತನೆಗಳಿಂದ ಲೌಕಿಕದ ಕೆಲವು ಭೋಗಗಳನ್ನು ತ್ಯಾಗ ಮಾಡಿದ ತೃಪ್ತಿ ಕುರಿತು ನಿಜಗುಣ ಶಿವಯೋಗಿಗಳು ತಮ್ಮ ಕೈವಲ್ಯ ಪದ್ಧತಿ ಗ್ರಂಥಗಳಲ್ಲಿ ಉಲ್ಲೇಖೀಸಿದ್ದಾರೆ. ಶರಣರು. ಸಂತರು, ದಾಸರು ನುಡಿದಂತೆ ನಡೆ ಎಂಬ ಮಾತಿನಂತೆ ನಡೆದವರು ನುಡಿದಂತೆ ನಡೆ ಎಂದು ಹೇಳುವುದು ಸುಲಭ. ಆದರೆ ಈ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಜನರಿಗೆ ಕಷ್ಟವಾಗುತ್ತದೆ ಎಂದು ಹೇಳಿದರು.

ತ್ಯಾಗದ ಬದುಕು ಕಲಿತುಕೊಂಡಲ್ಲಿ ಅದರ ಆನಂದ ಅನುಭವಿಸಿಬೇಕು. ಬಿಡುವಿಲ್ಲದ ಜೀವನಕ್ಕೆ ಶಿವಾನುಭವ ಕಾರ್ಯಕ್ರಮಗಳು ಅಧ್ಯಾತ್ಮದ ಬೆಳಕನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಅಯ್ಯಣ್ಣ ಹಿರೇಮಠ ಮಾತನಾಡಿ, ಭೋಗ ಮತ್ತು ತ್ಯಾಗದೊಂದಿಗೆ ಜೀವನವನ್ನು ಹೇಗೆ ಭಗವಂತನ ಸಾಮಿಪ್ಯಕ್ಕೆ ಕೊಂಡೊಯ್ಯಬಹುದು ಎಂದು ಹಲವಾರು ಶರಣರ ನುಡಿಗಳ ಕುರಿತು ತಿಳಿಸಿದರು.

Advertisement

ಮಠದ ಬಸವಲಿಂಗ ಶಾಸ್ತ್ರಿಗಳು ಮಾತನಾಡಿ, ಆಧ್ಯಾತ್ಮದ ಅನುಭಾವ ಅನುಭವಿಸುವಂತಾಗಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ವೀರಣ್ಣ ಬೆಳ್ಳುಬ್ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಚ್‌.ಎಸ್‌. ದೊರೆಸ್ವಾಮಿ ರಾಜ್ಯ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಭೀಮಸೇನರಾವ ಕುಲಕರ್ಣಿ ಹಾಗೂ ಭೂ ನ್ಯಾಯ ಮಂಡಳಿ ಸದಸ್ಯ ಪ್ರಕಾಶ ಕುಂಬಾರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ದಾನಪ್ಪ ಅಪ್ಪಾಗೋಳ, ಪ್ರಭುಗೌಡ ಅಂಗಡಿ ಇದ್ದರು. ಬಸಮ್ಮ ಅಂಗಡಿ ಪ್ರಾರ್ಥಿಸಿದರು. ಬಸವರಾಜ ಅಂಗಡಿ ಸ್ವಾಗತಿಸಿ ನಿರೂಪಿಸಿದರು. ಕಸಾಪ ಅಧ್ಯಕ್ಷ ಬಸಣ್ಣ ಗೊಡ್ರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next