Advertisement

ಲೋಕ ಮತದಾನಕ್ಕೆ ಬಿಸಿಲಿನ ತಾಪಮಾನ ಅಡ್ಡಿ?

11:49 AM Apr 12, 2019 | Team Udayavani |

ಹುಣಸಗಿ: ಪ್ರತಿಯೊಂದು ಕಡೆ ಕಡ್ಡಾಯವಾಗಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಅದಾಗ್ಯೂ ಬಿಸಲಿನ ತಾಪಕ್ಕೆ ಜನರು ತತ್ತರಿಸುತ್ತಿದ್ದು, ಮತದಾನ ದಿನದಂದು ಮತಗಟ್ಟೆಗೆ ಬಂದು ಮತಚಲಾಯಿಸಲು ಮತದಾರರಿಗೆ ಬಿಸಿಲು ಅಡ್ಡಿಯಾಗಲಿದೆಯೇ
ಎಂಬ ಅನುಮಾನ ಕಾಡುತ್ತಿದೆ.

Advertisement

2018ರ ವಿಧಾನಸಭಾ ಚುನಾವಣಾ ವೇಳೆ ಸೂರ್ಯನ ತಾಪಮಾನ 41 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಈ ಬಾರಿ ಜಿಲ್ಲೆಯಲ್ಲಿ ಸದ್ಯ 39 ಡಿ.ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಮತದಾನದಂದು ಮತ್ತಷ್ಟು ಹೆಚ್ಚಾಗುವ ಲಕ್ಷಣ ಕಾಣುತ್ತಿದೆ. ಚುನಾವಣಾ ಪ್ರಚಾರ ಮಾಡುವ ನಾಯಕರಿಗೆ ಹಾಗೂ ಕಾರ್ಯಕರ್ತರಿಗೂ ರಣ
ಬಿಸಿಲು ಪರಿಣಾಮ ಬೀರಿದೆ. ಗ್ರಾಮೀಣ, ನಗರ, ಪಟ್ಟಣದ ಜನರು ಸೂರ್ಯನ ತಾಪಕ್ಕೆ ಮನೆ ಬಿಟ್ಟು ಹೊರಗೆ ಬರದೇ ಇರುವ ವಾತಾವರಣ ಸ್ಥಿತಿ ಸೃಷ್ಟಿಯಾಗಿದೆ. ಬಿಸಿಲಿನ ತಾಪಕ್ಕೆ ಮತದಾನ ಮಾಡಲು ಜನರು ಹಿಂಜರಿಯುವೇ ಎಂಬ ಪ್ರಶ್ನೆ ಕಾಡುತ್ತಿದೆ. ಯುವ ಮತದಾರರು ಹೇಗಾದರೂ
ಮಾಡಿ ಮತ ಚಲಾಯಿಸಬಹುದು. ಆದರೆ ವೃದ್ಧರು, ಅಂಗವಿಕಲರು, ಮಹಿಳೆಯರಿಗೆ ಬಿಸಿಲಿನ ಹೊಡೆತ ತಪ್ಪದೇ ಇರದು. ಈ ನಡುವೆ
ಮತದಾನ ಹೆಚ್ಚಿಸುವ ಬಗ್ಗೆ ಸ್ವೀಪ್‌ ಕಮಿಟಿ ಮೇಲೆ ಜವಾಬ್ದಾರಿ ಹೆಚ್ಚಿದೆ. 2014ರಲ್ಲಿ ಶೇ.56ರಷ್ಟು ಮತದಾನವಾಗಿದೆ. ಈ ಬಾರಿ ಶೇ. 100ರಷ್ಟು
ತಲುಪಲು ಸ್ವೀಪ್‌ ಕಮಿಟಿ ಸತತ ಪ್ರಯತ್ನ ನಡೆಸಿದೆ. ಆದರೆ ಮತದಾರರನ್ನು ಕರೆತಂದು ಮತದಾನ ಮಾಡಿಸುವ ಕಸರತ್ತು ನಡೆಸಿದರೆ ಮಾತ್ರ ಉತ್ತಮ ಮತದಾನ ಆಗಬಹುದು ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಹುಣಸಗಿ ತಾಲೂಕಿನಲ್ಲಿ ಒಟ್ಟು 159 ಮತಗಟ್ಟೆಗಳಿವೆ. ದೂರದ ಮತಗಟ್ಟೆಗಳಿಗೆ
ನಡೆದುಕೊಂಡು ಹೋಗಿ ಮತಚಲಾಯಿಸಲು ರಣ ಬಿಸಿಲು ಅಡ್ಡಿ ಯಾಗಬಹುದು ಏನೋ ಎಂಬ ಆತಂಕ ಕಾಡತೊಡಗಿದೆ.

ಮತದಾನಕ್ಕೆ ಬೆಳಗ್ಗೆ 7:00ರಿಂದ ಸಂಜೆ 6:00ರ ವರೆಗೆ ಮಾತ್ರ ಸಮಯ ನಿಗ ದಿ ಮಾಡಲಾಗಿದೆ. ಬೆಳಗ್ಗೆ 11:00ರಿಂದ ಮಧ್ಯಾಹ್ನ 3:00ರ ವರೆಗೂ ಸೂರ್ಯನ ತಾಪ ಹೆಚ್ಚಿಗೆ ಇರುವುದು ಸಹಜ. ಈ ಸಮಯದಲ್ಲಿ ಮತದಾರರು
ಮತದಾನಕ್ಕೆ ಆಸಕ್ತಿ ತೋರುವರೇ? ಮತದಾನದ ಹಕ್ಕು ಚಲಾಯಿಸಲು ಬಿಸಿಲಿನಲ್ಲಿ ಹೆಣಗಾಡಬೇಕಿದೆ. ವಾಸ್ತವ ಹೀಗಿರುವಾಗ ಇದಕ್ಕೆ ಪರ್ಯಾಯ ಕ್ರಮ ಕೈಗೊಳ್ಳಲಾಗುವುದೇ ಎಂಬ ಪ್ರಶ್ನೆ ಎದುರಾಗಿದೆ.

ನಡೆಯಲು ಬಾರದಂತಹ ಅಂಗವಿಕಲರಿಗೆ ಮತ್ತು ವಯೋವೃದ್ಧರಿಗೆ ವಾಹನದ ವ್ಯವಸ್ಥೆ ಮಾಡಲಾಗುವುದು. ಮತಗಟ್ಟೆಗಳಲ್ಲಿ ನೆರಳಿಗಾಗಿ ಟೆಂಟ್‌ ಕಲ್ಪಿಸಲಾಗುತ್ತದೆ. ಮತದಾರರನ್ನು ಕರೆತಂದು ಶೇ.100ರಷ್ಟು ಮತದಾನಕ್ಕೆ ಪ್ರಯತ್ನ ನಡೆಸಲಾಗುತ್ತದೆ.
ಕವಿತಾ ಮನ್ನಿಕೇರಿ,
ಸ್ವೀಪ್‌ ಕಮಿಟಿ ಅಧ್ಯಕ್ಷರು

Advertisement

ಬಾಲಪ್ಪ ಎಂ. ಕುಪ್ಪಿ

Advertisement

Udayavani is now on Telegram. Click here to join our channel and stay updated with the latest news.

Next