Advertisement
ತಾಲೂಕಿನ ಮುದನೂರ ದೇವರ ದಾಸಿಮಯ್ಯ ಶಾಲಾ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 2019-20ರ ಜಾನಪದ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಮಾತನಾಡಿ, ಜಾತ್ರೆ ಇಲ್ಲದ ದಿನದಲ್ಲಿ ಜನರನ್ನು ಸೇರಿಸಿ ಜಾತ್ರೆ ಮಾಡುವುದೇ ಜಾನಪದ ಜಾತ್ರೆ. ಈಗ ಸ್ವಹಿತ ಹಾಗೂ ಹಣದ ವ್ಯಾಮೋಹಕ್ಕೆ ಒಳಗಾಗಿ ಎಲ್ಲವನ್ನು ಮರೆಯುತ್ತಿದ್ದೇವೆ. ಯುವ ಸಮೂಹ ಜನಪದ ಸಾಹಿತ್ಯಕ್ಕೆ ಒತ್ತು ನೀಡಿ ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಇಲಾಖೆಯಿಂದ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳು, ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹದ ಬಗ್ಗೆ ವಿವರಿಸಿದರು. ಅರಕೇರಾ(ಜೆ)ಜಿಪಂ ಸದಸ್ಯ ಬಸನಗೌಡ ಯಡಿಯಾಪುರ ಮಾತನಾಡಿದರು. ಶ್ರೀ ಸಿದ್ದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹಾಗೂ ಸಣ್ಣಕೆಪ್ಪ ಮುತ್ಯಾ ಬಂಡೆಪ್ಪನಹಳ್ಳಿ ಸಾನ್ನಿಧ್ಯ ವಹಿಸಿದ್ದರು.
ಜಾನಪದ, ದಾಸವಾಣಿ, ಸೋಬಾನೆ ಪದ, ಬೀಸುವ ಕಲ್ಲಿನ ಪದಗಳು, ಜಾನಪದ ಹಾಡು, ಗೀಗೀಪದ, ಭಾವಗೀತೆ, ಪಟ ಕುಣಿತ, ಕೊಂಬು ಕಹಳೆ, ಗಾರಡಿ ಗೊಂಬೆ, ಕರಗ ನೃತ್ಯ, ಹಗಲು ವೇಷ, ಕರಡಿ ಮಜಲು, ಬಂಜಾರ ನೃತ್ಯ, ಝಣಿ ಹಲಗೆ, ಡೊಳ್ಳು ಕುಣಿತ, ಜೋಗತಿ ನೃತ್ಯ, ಕೀಲು ಕುದುರೆ, ತತ್ವಪದಗಳು ಗಮನ ಸೆಳೆದವು. ಇದಕ್ಕೂ ಮೊದಲು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಕಲಾವಿದರ ತಂಡಗಳು ಮುದನೂರಿನ ಪ್ರಮುಖ ಬೀದಿಗಳಲ್ಲಿ ಪ್ರದರ್ಶನ ಮಾಡುತ್ತ ಮುಖ್ಯ ವೇದಿಕೆಗೆ ಆಗಮಿಸಿದವು.
ಸಿದ್ದಬಸಯ್ಯ ಗಜ್ಜಿನಮಠ, ಸಿದ್ರಾಮರಡ್ಡಿ ಯಡಹಳ್ಳಿ, ಭೀಮರಾಯ ಸಾಹು ಹೊಟ್ಟಿ, ಸಿದ್ರಾಮರೆಡ್ಡಿ ಚೌದ್ರಿ, ಸುಭಾಶ್ಚಂದ್ರರಡ್ಡಿ ಚೌದ್ರಿ, ಬಸವರಾಜಪ್ಪಗೌಡ ಮಾಲಿಪಾಟೀಲ, ಶಿವಪ್ಪಗೌಡ ಮಾಲಿಪಾಟೀಲ, ಶರಣಪ್ಪ ಸಾಹು, ಬಸವಂತಪ್ಪ ಹೊಸಮನಿ, ನಿಂಗಾರೆಡ್ಡಿ ಚೌದ್ರಿ, ಬಸಣ್ಣ ನಾಟೆಕಾರ, ಚಂದಪ್ಪಗೌಡ ಪಾಟೀಲ, ಬಸನಗೌಡ ಮಾಲಿಪಾಟೀಲ, ಪ್ರಭುಗೌಡ ಅರನಾಳ, ಮಡಿವಾಳಪ್ಪಗೌಡ ನಾಲವಾರ, ಚನ್ನಪ್ಪಗೌಡ ಬೆಕಿನಾಳ, ರಮೇಶ ಸಾಹು, ಬಸನಗೌಡ, ವಿಜಯರೆಡ್ಡಿ, ಮೇಲಪ್ಪ ಗುಳಗಿ, ಚಂದ್ರೇಖರ ಸುಬೇದಾರ ಇದ್ದರು.
ದೇವರ ದಾಸಿಮಯ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಾಂತರೆಡ್ಡಿ ಚೌದ್ರಿ ಸ್ವಾಗತಿಸಿದರು. ಶಿಕ್ಷಕ ಸೇವು ಜಾಧವ ನಿರೂಪಿಸಿದರು. ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಜಾಲಿಬೆಂಚಿ ವಂದಿಸಿದರು.