Advertisement

ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

12:25 PM Dec 29, 2019 | Naveen |

ಹುಣಸಗಿ: ಪುಸ್ತಕಗಳು ಮನೆಯಲ್ಲಿದ್ದರೆ ಜ್ಞಾನದ ಭಂಡಾರವಿದ್ದಂತೆ, ಯುವ ಪೀಳಿಗೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ಸಾಹಿತಿ ಸಿದ್ರಾಮ ಹೊನ್ಕಲ್‌ ಹೇಳಿದರು.

Advertisement

ಪಟ್ಟಣದ ಡ್ರೀಮ್ಜ್ ಫಂಕ್ಶನ್‌ ಹಾಲ್‌ನಲ್ಲಿ ನಡೆದ “ಕನ್ನಡ ಕವನ-ಹಿತವಾದ ಮಾತುಗಳು’ ಎಂಬ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕಲಿಕೆಗೆ ಪೂರಕ ವಾತಾವರಣ ಇಲ್ಲದಿರುವ ಸಮಯದಲ್ಲಿ ಕನ್ನಡ ಪ್ರೇಮ, ಸಾಹಿತ್ಯ ಆಸಕ್ತಿ ಬೆಳೆಸಿಕೊಂಡು ಕವನ ರಚಿಸಿ ಪುಸ್ತಕ ಬಿಡುಗಡೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಮನದ ಭಾವಗಳು, ಪ್ರಸಂಗಗಳು ಮಶಾಕ ತಾಳಿಕೋಟೆ ಸಾರಥ್ಯದ
“ಕನ್ನಡ ಕವನ-ಹಿತವಾದ ಮಾತುಗಳು’ ಚೊಚ್ಚಲು ಪುಸ್ತಕದಲ್ಲಿ ಅಡಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಶಿಕ್ಷಕ ಸಂಗಯ್ಯ ಬಾಚ್ಯಾಳ ಮಾತನಾಡಿ, ಮಶಾಕ ತಾಳಿಕೋಟಿ ಸಾಧನೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕವಿ ಮಶಾಕ ತಾಳಿಕೋಟೆ ಮಾತನಾಡಿ, ನನ್ನ ಬಾಲ್ಯದ ಜೀವನ ಕಷ್ಟಕರವಾಗಿದ್ದು, ನಾನು ಈ ಮಟ್ಟಕ್ಕೆ ಬರಲು ಕಾರಣರಾದ ಎಲ್ಲರನ್ನು ಅಭಿನಂದಿಸುವುದಾಗಿ ತಿಳಿಸಿದರು. ಹಿರಿಯ ಸಾಹಿತಿ ವೀರೇಶ ಹಳ್ಳೂರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿ.ಪಂ ಮಾಜಿ ಸದಸ್ಯ ಎಚ್‌ .ಸಿ.ಪಾಟೀಲ, ನಾಗಣ್ಣ ದಂಡಿನ್‌, ಜಿ.ಪಂ. ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿ, ಪುಸ್ತಕ ರಚನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಬಸವರಾಜ ಮಲಗಲದಿನ್ನಿ, ಚನ್ನಕುಮಾರ ಚಿಂಚೋಳಿ, ಖಾಸೀಮಸಾಬ ಅವರಾದಿ, ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಸವರಾಜ ಸಿನ್ನೂರು ಸೇರಿದಂತೆ ಸಾಹಿತ್ಯಾಸಕ್ತರು ಇದ್ದರು.
ವಜ್ಜಲ್‌ ಪ್ರೌಢಶಾಲೆ ಶಿಕ್ಷಕಿ ನೀಲಮ್ಮ ನಾಗರಬೆಟ್ಟ ನಿರೂಪಿಸಿದರು. ಮಶಾಖ ಯಾಳಗಿ ಸ್ವಾಗತಿಸಿದರು. ವೀರಣ್ಣ ಬೆಳ್ಳುಬ್ಬಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next