Advertisement

ಗ್ರಾಮ ದೇವತೆ ಪೂಜೆಗೆ ಹೊಳೆಯಿಂದ ನೀರು ತರಲು ಹೋದ ಯುವಕ ನೀರುಪಾಲು: ಮುಗಿಲು ಮುಟ್ಟಿದ ಆಕ್ರಂದನ

08:15 PM Apr 26, 2022 | Team Udayavani |

ಹುನಗುಂದ : ಗ್ರಾಮ ದೇವತೆಯ ಪೂಜೆಗಾಗಿ ಹೊಳೆಯಿಂದ ನೀರು ತರಲು ಹೋದ ಯುವಕ ಈಜು ಬರದೇ ಮಲಪ್ರಭೆ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಹುನಗುಂದ ತಾಲೂಕಿನ ಗಂಗೂರ ಗ್ರಾಮದಲ್ಲಿ ನಡೆದಿದೆ.

Advertisement

ಶಿವಸಂಗಪ್ಪ ಮುದ್ದಣ್ಣ ಚೌಡಾಪೂರ (29) ನದಿಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿ ಯುವಕನಾಗಿದ್ದಾನೆ.

ಘಟನೆಯ ವಿವರ : ಮುಂಗಾರು ಬಿತ್ತನೆಯ ಪೂರ್ವದಲ್ಲಿ ಸಮೃದ್ದಿ ಮಳೆ ಮತ್ತು ಬೆಳೆಗಾಗಿ ಉತ್ತರ ಕರ್ನಾಟಕದ ಪ್ರತಿಯೊಂದು ಹಳ್ಳಿಗಳಲ್ಲಿ ಗ್ರಾಮ ದೇವತಿಗಳನ್ನು ಶಾಂತಗೊಳಿಸಲು ಮಂಗಳವಾರ ಮತ್ತು ಶುಕ್ರವಾರ ಐದು ವಾರಗಳ ಪರಿಯಂತ ಮಡಿಯುಡಿಯಿಂದ ಹೊಳೆಯಿಂದ ನೀರು ತಂದು ಗ್ರಾಮ ದೇವತೆಗಳ ಪೂಜಿಸುವುದು ವಾಡಿಕೆ ಅದರಂತೆ ಗಂಗೂರ ಗ್ರಾಮದಲ್ಲಿ ಕಳೆದ ನಾಲ್ಕು ವಾರಗಳಿಂದ ಹೊಳೆಯ ನೀರಿನಿಂದ ಗ್ರಾಮದ ದೇವತೆಗೆ ಪೂಜೆಸುತ್ತಾ ಬಂದಿದ್ದರು. ಆದರೆ ನಾಲ್ಕನೆಯ ವಾರದ ಮಂಗಳವಾರ ದೇವತೆಗೆ ಹೊಳೆಯ ನೀರು ತರಲು ಗ್ರಾಮಸ್ಥರು ಮಲಪ್ರಭೆ ನದಿಗೆ ಹೋದಾಗ ಈಜು ಬರುವ ಯುವಕರು ನದಿಗೆ ಹಾರಿದ್ದಾರೆ ಅದನ್ನು ಕಂಡ ಮೃತ ಯುವಕ ಶಿವಸಂಗಪ್ಪ ಚೌಡಾಪೂರ ಪ್ಲಾಸ್ಟಿಕ್ ಕೊಡವನ್ನು ಹೊಟ್ಟೆಗೆ ಇಟ್ಟುಕೊಂಡು ನದಿಗೆ ಹಾರಿದ್ದಾನೆ. ಪ್ಲಾಸ್ಟಿಕ್ ಕೊಡದ ಮೇಲೆ ಈಜುತ್ತಾ ಮುಂದೆ ಹೋದಂತೆ ಪ್ಲಾಸ್ಟಿಕ್ ಕೊಡವು ನೀರು ತುಂಬಿಕೊಂಡು ಯುವಕನ ಕೈಗೆ ಸಿಗದೇ ಹೋಗಿದೆ ಆಗ ಈಜು ಬರದೇ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ.

ಇದನ್ನೂ ಓದಿ : ಪುತ್ತೂರು : ಕೋಮು ಪ್ರಚೋದಕ ಸಂದೇಶ ರವಾನೆ : ಗೃಹರಕ್ಷಕ ಸಿಬಂದಿ ಅಮಾನತು

ಕುಟುಂಬಸ್ಥರ ಆಕ್ರಂದನ : ದೇವರಿಗೆ ನೀರು ತರಲು ಹೊಳೆಗೆ ಹೋದ ಮಗ ನದಿಯಲ್ಲಿ ಮುಳುಗಿದ್ದಾನೆ ಎನ್ನುವ ಸುದ್ದಿಯನ್ನು ತಿಳಿದ ತಂದೆ ತಾಯಿ ಮತ್ತು ಆತನ ಹೆಂಡತಿ ಮಕ್ಕಳು ಓಡೋಡಿ ನದಿಯ ದಡಕ್ಕೆ ಬಂದ ದೇವರಿಗೆ ನೀರು ಹಾಕಿ ಮನೆಗೆ ಬರಬೇಕಾದ ಮಗ ಹೊಳೆಯಲ್ಲಿ ಮುಳಗಿರೋದ್ದನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ಇನ್ನು ಬಾಳಿ ಬದುಕಬೇಕಾಗಿದ್ದ ಮಗ ಸಣ್ಣ ವಯಸ್ಸಿನ ಮಡದಿ ಚಿಕ್ಕ ಚಿಕ್ಕ ವಯಸ್ಸಿನ ಎರಡು ಗಂಡು, ಒಂದು ಹೆಣ್ಣು ಮಗುವನ್ನು ಬಿಟ್ಟು ಸಾವನ್ನಪ್ಪಿದ್ದಾನೆ ಎನ್ನುವ ಸುದ್ದಿ ಅರಗಿಸಿಕೊಳ್ಳುಲು ಆಗದೇ ಇರುವ ಕುಟುಂಬಸ್ಥರು ನದಿಯ ದಂಡಯ ಮೇಲೆ ಮಗನನ್ನು ನೆನೆಸಿಕೊಂಡು ಉರಳಾಡಿ ಅಳುವುದು ಎಂತಹ ಕಲ್ಲು ಹೃದಯವು ಕರಗುವಂತಿತ್ತು.ಇತ್ತ ಹೆಂಡತಿ ಗಂಡನ್ನು ನೆನೆಸಿಕೊಂಡು ಮಕ್ಕಳನ್ನು ತೋರಿಸಿ ಬಿಕ್ಕಿ ಬಿಕ್ಕಿ ಅಳುವುದು ನೋಡಿದ ಅಲ್ಲಿದ್ದ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿದ್ದವು.

Advertisement

ಶವ ಪತ್ತೆಗಾಗಿ ಅಗ್ನಿ ಶಾಮಕದಿಂದ ಕಾರ್ಯಾಚರಣೆ : ಯುವಕ ನದಿಯಲ್ಲಿ ಮುಳಗಿ ಮೇಲೆ ಏಳದೇ ಇದ್ದಾಗ ತಾಲೂಕಿನ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಬೋಟ್ ಮುಖಾಂತರ ಶವ ಪತ್ತೆಗೆ ನಿರತರಾಗಿದ್ದರು. ಇನ್ನು ನುರಿತ ಈಜುಗಾರರಿಂದಲೂ ಶವ ಪತ್ತೆ ಕಾರ್ಯಾಚರಣೆ ನಡೆಯಿತು. ಬೆಳಗ್ಗೆ ೧೦ ಗಂಟೆಗೆ ಶವ ಪತ್ತೆ ಕಾರ್ಯಾಚರಣೆ ಪ್ರಾರಂಭವಾಗಿ ಮಧ್ಯಾಹ್ನ ೨ ಗಂಟೆಗೆ ಶವ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

Advertisement

Udayavani is now on Telegram. Click here to join our channel and stay updated with the latest news.

Next