Advertisement

ಮಾನವೀಯತೆ ಮೆರೆದ ಆರಕ್ಷಕರು

12:30 PM May 18, 2021 | Team Udayavani |

ಕನಕಪುರ: ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಅನಗತ್ಯವಾಗಿ ಓಡಾಡುವವರಿಗೆ ಲಾಠಿ ಬೀಸುವಪೊಲೀಸರ ನಡುವೆ ಕನಕಪುರ ಮತ್ತು ಹಾರೋಹಳ್ಳಿ ಆರಕ್ಷಕರು ಸಂಕಷ್ಟದಲ್ಲಿರು ‌ವ ಜನರ ನೆರವಿಗೆ ನಿಂತು ಜಿಲ್ಲೆಗೆ ಮಾದರಿ ಎನಿಸಿಕೊಂಡಿದ್ದಾರೆ.

Advertisement

ಕರ್ತವ್ಯದ ಜೊತೆಗೆ ಮಾನವೀಯ ಗುಣಗಳನ್ನು ಬೆಳೆಸಿಕೊಂಡಿರುವ ಜಿಲ್ಲೆಯ ಕನಕಪುರ ಸಾತನೂರು ಕೋಡಿಹಳ್ಳಿಮತ್ತುಹಾರೋಹಳ್ಳಿ ಆರಕ್ಷಕರು ಕೋವಿಡ್‌ ನಂತಹ ಸಂದರ್ಭದಲ್ಲಿ ಕರ್ತವ್ಯದ ನಡೆಯೂ ಕೋವಿಡ್  ವಾರಿಯರ್ಸ್ ಗಳಾಗಿ ಹಗಲಿರುಳು ದುಡಿ ಯುವುದರ ಜೊತೆಗೆ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರು, ನಿರಾಶ್ರಿತರು, ನಿರ್ಗತಿಕರ ನೆರವಿಗೆ ನಿಂತು ಮಾನವೀಯತೆ ಮೆರೆಯುತ್ತಿದ್ದಾರೆ.

ಹಸಿವು ನೀಗಿಸಲು ಮುಂದಾದ ಪೊಲೀಸರು: ವಿಶ್ವವನ್ನೇ ತಲ್ಲಣಗೊಳಿಸುತ್ತಿರುವ ಕೋವಿಡ್ಎರಡನೇಅಲೆ ಜನರನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ಜನತಾಕರ್ಫ್ಯೂ ನಿಂದ ತಾಲೂಕಿನಲ್ಲಿ ಆನೇಕಕಾಡಂಚಿನದಿನಗೂಲಿ ಕಾರ್ಮಿಕರು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ಸಾವಿರಾರುಕುಟುಂಬಗಳು ಸಂಕಷ್ಟದಲ್ಲೇ ದಿನ ದೂಡುತ್ತಿದ್ದಾರೆ.

ಮತ್ತೂಂದೆಡೆ ನಗರ ಪ್ರದೇಶದಲ್ಲಿಚಿಂದಿ ಹಾರಿಸಿಕೊಂಡು ಬದುಕುತ್ತಿದ್ದ ನಿರಾಶ್ರಿತರು, ನಿರ್ಗತಿಕರು, ಭಿಕ್ಷುಕರು ಒಂದು ಹೊತ್ತಿನ ಅನ್ನಕ್ಕೂ ಪರದಾ ಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂಕಷ್ಟದಲ್ಲಿರುವ ಜನರ ಹಸಿವು ನೀಗಿಸಲು ಸಂಘಸಂಸ್ಥೆಗಳು ಮುಂದಾಗಿವೆ.

ಹಸಿದವರಿಗೆ ಅನ್ನ, ಆಹಾರ ಕಾಡಂಚಿನ ಕೂಲಿಕಾರ್ಮಿಕರಿಗೆ ದಿನಬಳಕೆಯ ಅಗತ್ಯ ದಿನಸಿ ಕಿಟ್‌ ವಿತರಣೆ ತಾಲೂಕಾದ್ಯಂತ ಸಮರೋಪಾದಿಯಲ್ಲಿ ನಡೆಯುತ್ತಿದೆ. ಆದರೆ ಇದರಲ್ಲಿ ಸಿಂಹ ಪಾಲು ಆರಕ್ಷರದ್ದು ಎಂಬುದು ಮಾತ್ರ ಗಮನಾರ್ಹ ಸಂಗತಿ.

Advertisement

ನೂರಾರು ಕಾರ್ಮಿಕರಿಗೆ ಆಹಾರ ವಿತರಣೆ:

ಕೋವಿಡ್ ಎರಡನೇ ಅಲೆ ಆರಂಭವಾಗಿ ಕರ್ಫ್ಯೂ ಜಾರಿಯಾದ ದಿನಗಳಿಂದಲೂಹಾರೋಹಳ್ಳಿಆರಕ್ಷಕರು ನಿರಂತರವಾಗಿ ದಾನಿಗಳ ಸಹಾಯವನ್ನು ಪಡೆದು ಉಚಿತವಾಗಿ ಹಸಿದವರಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ. ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಕ್ಷೇತ್ರದಲ್ಲಿ ಬೃಹದಾಕಾರವಾಗಿ ಬೆಳೆಯುತ್ತಿದೆ ಅನೇಕ ನಿರುದ್ಯೋಗಿಗಳು ದೇಶದ ನಾನಾ ಭಾಗಗಳಿಂದಲೂ ವಲಸೆಬಂದುಚಾಲಕ,ಕಾರ್ಮಿಕರಾಗಿ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ನೂರಾರು ಜನರಿಗೆ ಹಾರೋಹಳ್ಳಿ ಸಿಪಿಐ ರಾಮಪ್ಪ ಗುತ್ತೇದಾರ್‌ ಹಾಗೂ ಪಿಎಸ್‌ಐ ಮುರಳಿ ಪ್ರತಿದಿನ ಉಚಿತವಾಗಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ನಿರಂತರವಾಗಿ ನೀಡುತ್ತಾ ಮಾದರಿಯಾಗಿದ್ದಾರೆ.

200 ಕುಟುಂಬಗಳಿಗೆ ದಿನಸಿ ಕಿಟ್‌: ಕಾಡಂಚಿನ ಕೂಲಿ ಕಾರ್ಮಿಕರಿಗೆ ನೆರವಾಗಲು ಸುಮಾರು200 ಕುಟುಂಬಗಳಿಗೆ ಎಸ್‌.ಪಿ ಗಿರೀಶ್‌ ನೇತೃತ್ವದಲ್ಲಿ ‌ ದಿನಬಳಕೆಯ ದಿನಸಿ ಕಿಟ್‌ ವಿತರಣೆ ಮಾಡಿದ್ದಾರೆ. ತಾಲೂಕಿನ ಮರಳವಾಡಿ ಹೋಬಳಿಯ ಯಲಚವಾಡಿ ಗ್ರಾಪಂ ವ್ಯಾಪ್ತಿಯಕಾಡಂಚಿನ ಗಿಣಿಗಿದೊಡ್ಡಿ ಮತ್ತು ಬೆಣಚಕಲ್‌ ದೊಡ್ಡಿಗ್ರಾಮದ ಕೂಲಿ ಕಾರ್ಮಿಕ ಕುಟುಂಬಗಳಿಗೆ ರಾಜ್ಯದ ಗಡಿ ಹಾಗೂ ಕಾಡಂಚಿನಲ್ಲಿ ಇರುವ ಗ್ರಾಮಗಳಲ್ಲಿ ಕೂಲಿಯನ್ನೆ ನಂಬಿ ಬದುಕುತ್ತಿದ್ದ ತೀರ ಹಿಂದುಳಿದ ಹಾಗೂ ಗಿರಿಜನರೇ ವಾಸಿಸುವ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಸುಮಾರು 200 ಕುಟುಂಬಕ್ಕೆ ದಿನ ಬಳಕೆಯ ಅಕ್ಕಿ ಬೆಳೆ ಎಣ್ಣೆ ಸಾಂಬರ್‌ ಪೌಡರ್‌ದಿನಸಿ ಕಿಟ್‌ ವಿತರಣೆ ಮಾಡಿ ನೆರವಾಗಿದ್ದಾರೆ.

ನಿರಾಶ್ರಿತರಿಗೆ ಅಗತ್ಯ ನೆರವು :

ಕನಕಪುರ ಮತ್ತು ಸಾತನೂರು ಹಾಗೂ ಕೋಡಿಹಳ್ಳಿ ಆರಕ್ಷಕರು ಹಿಂದೆ ಬಿದಿಲ್ಲ ಕನಕಪುರ ವೃತ್ತನಿರೀಕ್ಷಕ ಟಿ.ಟಿ.ಕೃಷ್ಣ ತಮ್ಮ ಸಿಬ್ಬಂದಿಗಳೊಂದಿಗೆ ತಾಲೂಕಾದ್ಯಂತ ನಿರಾಶ್ರಿತರು ನಿರ್ಗತಿಕರು ಬೀದಿ ಬದಿಯ ಭಿಕ್ಷುಕರಿಗೆ ಹಸಿವು ನೀಗಿಸುವಕೆಲಸ ಮಾಡುತ್ತಿದ್ದಾರೆ. ಕರ್ತವ್ಯದ ಜೊತೆಜೊತೆಗೆಸಿಬ್ಬಂದಿ ಸಹಾಯ ಪಡೆದು ಜನರಲ್ಲಿ ಜಾಗೃತಿಮೂಡಿಸಲು ತಾಲೂಕಾದ್ಯಂತ ಗಸ್ತು ತಿರುಗುವಾಗ ಬೀದಿ ಬದಿಯಲ್ಲಿಊಟ ಸಿಗದೆ ಹಸಿವಿನಿಂದ ಕಂಗಲಾಗಿದ್ದ ಭಿಕ್ಷುಕರು ನಿರ್ಗತಿಕರ ಪರಿಸ್ಥಿತಿ  ‌ ಕಂಡು ತಾವೇ ಮನೆಯಲ್ಲೆ ತಯಾರಿಸಿದ ಆಹಾರದ ಪೊಟ್ಟಣಗಳನ್ನು ಬಸ್‌ ನಿಲ್ದಾಣಗಳಲ್ಲಿ ಬೀದಿ ಬದಿಗಳಲ್ಲಿ ಫ‌ುಟ್‌ಪಾತ್‌ ಗಳಲ್ಲಿಕಾಲ ಕಳೆಯುತ್ತಿರುವ ಭಿಕ್ಷುಕರಿಗೆ ಗ್ರಾಮೀಣ ಭಾಗದ ನಿರ್ಗತಿಕರಿಗೆ ನೆರವಾಗಿ ಆರಕ್ಷಕರಲ್ಲೂ ಕಷ್ಟಕ್ಕೆ ಮೀಡಿಯುವ ಮನಸ್ಸುಗಳಿವೆ ಎಂಬುದನ್ನು ತಾಲೂಕಿನ ಆರಕ್ಷಕರು ತೋರಿಸಿಕೊಟ್ಟಿದ್ದಾರೆ.

ಕೋವಿಡ್ ತೀವ್ರವಾಗಿಹರಡುತ್ತಿದೆ ಆತಂಕದ ನಡುವೆಕೊರೊನಾ ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜನರಿಗೆಜಾಗೃತಿ ಮೂಡಿಸುವಹೆಚ್ಚಿಹೊಣೆಗಾರಿಕೆಯ ಆರಕ್ಷಕರ ಮೇಲಿದೆಇದರ ನಡುವೆಯುಕಷ್ಟದಲ್ಲಿರುವ ಜನರಿಗೆಕೈಲಾದ ಸಹಾಯ ಮಾಡುತ್ತಿರುವುದು ನಮ್ಮಇಲಾಖೆಗೆಹೆಮ್ಮೆಯ ವಿಷಯ. – ಎಸ್‌. ಗಿರೀಶ್‌, ಪೊಲೀಸ್‌ ವರಿಷ್ಠಾಧಿಕಾರಿ

 

-ಬಿ.ಟಿ.ಉಮೇಶ್‌

Advertisement

Udayavani is now on Telegram. Click here to join our channel and stay updated with the latest news.

Next