Advertisement
ಪಟ್ಟಣದ ಸಂಡೂರು ವಸತಿ ಶಾಲೆಯ 60ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಆದರ್ಶ ಉಪನ್ಯಾಸ ಕಾರ್ಯಕ್ರಮದಲ್ಲಿ “ಸಾಮಾಜಿಕ ಮೌಲ್ಯಗಳ ಕುಸಿತ ಮತ್ತು ಪರಿಣಾಮ’ ವಿಷಯ ಕುರಿತು ಮಾತನಾಡಿದ ಅವರು, ಸಮಾಜದಲ್ಲಿ ಕಿಂಚಿತ್ತಾದರೂ ಬದಲಾವಣೆ ತರಬಹುದು ಎಂಬ ಆಶಯದೊಂದಿಗೆ 1046 ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಿ ಸ್ವಲ್ಪ ಮಟ್ಟಿಗಾದರೂ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತಹ ಪ್ರಯತ್ನ ಆಗಿದೆ ಎಂದರು.
Related Articles
Advertisement
ಸಂವಿಧಾನದ 2ನೇ ಅಂಗ ಕಾರ್ಯಾಂಗ. ಆದರೆ ಅವರು ಶಾಸಕಾಂಗ ಜಾರಿಗೆ ತಂದ ಯುಪಿಎಸ್ಸಿ, ಕೆಪಿಎಸ್ಸಿಗಳು (ಕಮಿಷನ್ ಕೇಂದ್ರಗಳು) ಕೋಟ್ಯಂತರ ರೂ. ಹಣದಿಂದ ಕಾರ್ಯಾಂಗಕ್ಕೆ ಅಧಿಕಾರಿಗಳಾಗಿ ಆಯ್ಕೆಯಾಗಿ ಬಂದರೆ ಅವರು ಭ್ರಷ್ಟ ರಹಿತನಾಗಿ ಇರಲು ಸಾಧ್ಯವೇ. ಕೇಳಿದರೆ ಸ್ವಾಮಿ ನಾನು ಹಣ ಕೊಟ್ಟು ಬಂದಿದ್ದೇನೆ ಎನ್ನುತ್ತಾನೆ. ಊಹಿಸಿಕೊಳ್ಳಿ ಎಂತಹ ಮೌಲ್ಯ ಕುಸಿದಿದೆ ಎನ್ನುವುದು. 3ನೇ ಪ್ರಮುಖ ಅಂಗ ನ್ಯಾಯಾಂಗ. ಅಲ್ಲಿಯೂ ಸಹ ಭ್ರಷ್ಟಾಚಾರ. ಲಾಲು ಪ್ರಸಾದ್ ಕೇಸ್ ತೆಗೆದುಕೊಂಡಾಗ 14-15 ವರ್ಷಗಳೇ ಬೇಕಾಯಿತು. ಶಿಕ್ಷೆ ನೀಡಲು 5 ರಿಂದ 6 ವರ್ಷ.ಇನ್ನು 25 ವರ್ಷದ ಯುವಕ ಮುದುಕನಾದಾಗ ತೀರ್ಪು ಬಂದರೆ ಉಪಯೋಗವೇನು. ಕಾರಣ ಹಲವಾರು ಹಂತದ ಕೋರ್ಟ್ ಇರುವುದರಿಂದ ಈ ರೀತಿಯಾಗುತ್ತಿದೆ. ಇದಕ್ಕೆ ನಮ್ಮ ವಿರೋಧ ವಿಲ್ಲ. ಆದರೆ ಅನುಷ್ಠಾನ ಸರಿಯಾಗಿ ಆಗಬೇಕೆಂದರು. ಇನ್ನು ನಾಲ್ಕನೇ ಅಂಗ ಮಾಧ್ಯಮ ಕ್ಷೇತ. ಇಂದು ಏನಾಗಿದೆ. ಹಣ ಪಡೆಯುವುದು ಸುಳ್ಳು ಸುದ್ದಿ ಬಿತ್ತರಿಸುವುದು. ಅಂದರೆ ಅಲ್ಲಿಯೂ ಸಹ ಮೌಲ್ಯ ಇಲ್ಲವಾಗಿದೆ. ಹೀಗಾಗಿ ನಾವು ಸಂವಿಧಾನದ ಕರ್ತವ್ಯಗಳನ್ನು ಮರೆಯುತ್ತಿದ್ದೇವೆ.ಆದ್ದರಿಂದ ನಮ್ಮ ಯುವಕರಿಗೆ ಉತ್ತಮ ಮೌಲ್ಯಗಳನ್ನು ನೀಡುವ
ಮೂಲಕ ಉತ್ತಮ ಪ್ರಜೆಗಳಾಗಿ ಮಾಡಬೇಕಾಗಿದೆ. ದುಡಿಯುವುದನ್ನು ಬೇಡ ಎನ್ನುವುದಿಲ್ಲ, ದುಡಿಯಿರಿ. ಆದರೆ ನ್ಯಾಯಯುತವಾಗಿ ದುಡಿಯಿರಿ. ಮೌಲ್ಯಗಳನ್ನು ಅಳವಡಿಸಿಕೊಳ್ಳಿ. ಅದು ಶಿಕ್ಷಕರಿಂದ, ಪಾಲಕರಿಂದ ಅಗಬೇಕಾಗಿದೆ ಹೊರತು ಯಾವುದೇ ಕಾನೂನಿಂದ ಅಲ್ಲ. ಕವಿ ಹೇಳುವಂತೆ ಏನಾದರೂ ಆಗು ಮೊದಲು ಮಾನವನಾಗು ಎನ್ನುವಂತೆ ಮನುಷ್ಯತ್ವ ಅಳವಡಿಸಿಕೊಂಡು ಬದುಕಬೇಕು ಎಂದು ಕಿವಿಮಾತು ಹೇಳಿದರು. ಕಂಪನಿಯ ಛರ್ಮನ್ ಎಸ್. ಘೋರ್ಪಡೆ ಮಾತನಾಡಿದರು. ಲೋಕಾಯುಕ್ತ ವಿಶ್ವನಾಥ್‌ಶೆಟ್ಟಿ, ನಾಜಿಂ ಶೇಖ್, ಎಸ್. ವೈ. ಘೋರ್ಪಡೆ ಹಾಗೂ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ನಮ್ಮ ಪ್ರಜಾಪ್ರತಿನಿಧಿಗಳಿಗೆ ಕನಿಷ್ಠ ಶಿಕ್ಷಣ ಬೇಕು ಎನ್ನುವುದನ್ನು ಅಂಬೇಡ್ಕರ್ ಸಂಸತ್ತಿನಲ್ಲಿ ಇಟ್ಟಾಗ ಯಾರು ಬೆಂಬಲಿಸಲಿಲ್ಲ. ಅಂದರೆ ಶಿಕ್ಷಣದ ಅಗತ್ಯತೆ ಬೇಡವೆಂದರು. ಆದರೆ ಭ್ರಷ್ಟಾಚಾರ ಹಿಂದೆ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಹಿಂದೆ ಕಡಿಮೆ ಇತ್ತು, ಈಗ ಮಿತಿ ಮೀರಿದೆ. ಆಡಳಿತ ನಡೆಸುವ ರಾಜಕಾರಣಿಗಳು ತಮ್ಮ ಕರ್ತವ್ಯ ಮರೆತಿದ್ದಾರೆ.
ಸಂತೋಷ್ ಹೆಗಡೆ, ನಿವೃತ್ತ ಲೋಕಾಯುಕ್ತ.