ಕನಕಗಿರಿ: ಕೇವಲ ರಡ್ಡಿ ಸಮಾಜ ಉದ್ಧಾರಕ್ಕಾಗಿ ತಪಸ್ಸು ಮಾಡಲಿಲ್ಲ. ಮನುಕುಲದ ಒಳತಿಗಾಗಿ ತಪ್ಪಸ್ಸು ಕೈಗೊಂಡು ಇಡೀ ಸಮಾಜಕ್ಕೆ ಒಳಿತಾಗಲೆಂದು ಬೇಡಿದ್ದಾಳೆ. ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಮಂಜುನಾಥರಡ್ಡಿ ಹೇಳಿದರು.
ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ತನ್ನದೂ ಎಂಬುದು ಯಾವುದು ಇಲ್ಲ. ತನಗಾಗಿ ಏನು ಬೇಡದೆ ಮನುಕುಲವನ್ನು ಶ್ರೀಮಂತವಾಗಿಡುವಂತೆ ಮಲ್ಲಮ್ಮ ಪರಮಾತ್ಮ ನಲ್ಲಿ ತನ್ನ ಭಕ್ತಿಯಿಂದ ಬೇಡಿಕೊಂಡಿದ್ದಾಳೆ. ಅಲ್ಲದೇ ಹೇಮರಡ್ಡಿ ಮಲ್ಲಮ್ಮ ಎಲ್ಲ ವರ್ಗಕ್ಕೂ ಸೀಮಿತವಾಗಿದ್ದು, ಅವರ ವಿಚಾರಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಇಂತಹ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು. ಹೇಮರಡ್ಡಿ ಮಲ್ಲಮ್ಮ ವೃತ್ತ, ಪಟ್ಟಣ ಪಂಚಾಯಿತಿ ಕಾರ್ಯಾಲಯ, ತಹಸೀಲ್ದಾರ್ ಕಾರ್ಯಾಲಯ, ಕೃಷಿ ಇಲಾಖೆ, ಪೋಲಿಸ್ ಠಾಣೆ, ಸರ್ಕಾರಿ ಆಸ್ಪತ್ರೆ, ಎಪಿಎಂಸಿ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಶ್ರದ್ಧಾ
ಭಕ್ತಿಯಿಂದ ಆಚರಿಸಲಾಯಿತು.