Advertisement

ಮಾನವೀಯತೆ ಮೆರೆದ ಪೊಲೀಸ್‌ ಸಿಬಂದಿ

05:35 AM Jul 21, 2017 | |

ಮಹಾನಗರ: ಪೊಲೀಸ್‌ ಎಂದಾಕ್ಷಣ ಅವರ ಬಗ್ಗೆ ನೇತ್ಯಾತ್ಮಕವಾಗಿಯೇ ಯೋಚಿಸುವುದು ಹೆಚ್ಚು. ಆದರೆ ಅವರಲ್ಲೂ ಮಾನವೀಯ ಮೌಲ್ಯಗಳಿವೆ ಎಂಬುದಕ್ಕೆ ಬರ್ಕೆಯ ಪೊಲೀಸ್‌ ಕಾನ್‌ಸ್ಟೆಬಲ್‌ ಕಿಶೋರ್‌ ಪೂಜಾರಿ ಉದಾಹರಣೆಯಾಗಿದ್ದಾರೆ. 

Advertisement

ಜು. 19ರಂದು ಠಾಣಾ ವ್ಯಾಪ್ತಿಯ ಬೊಕ್ಕಪಟ್ಣದಲ್ಲಿ  ತಾತ್ಕಾಲಿಕ ತಪಾಸಣ  ಕೇಂದ್ರದಲ್ಲಿ  ಕಿಶೋರ್‌ ಕರ್ತವ್ಯ ನಿರತರಾಗಿದ್ದರು. ಈ ವೇಳೆ ಬೊಕ್ಕಪಟ್ಣ ಶಾಲಾ ವಿದ್ಯಾರ್ಥಿಯೋರ್ವ ಕುಂಟುತ್ತಾ ನಡೆದು ತನ್ನ ಮನೆಯತ್ತ ಸಾಗಲು ಬಸ್‌ ಗಾಗಿ ಕಾಯುತ್ತಿದ್ದ. ಈತ ಮೂಲತಃ ಬಾಗಲಕೋಟೆಯವನಾಗಿದ್ದು, ಕಂಕ ನಾಡಿಯಲ್ಲಿ ನೆಲೆಸಿದ್ದವನು. 

ವಿದ್ಯಾರ್ಥಿ ಎಲ್ಲೋ ಬಿದ್ದ ಪರಿಣಾಮ ಕಾಲಿಗೆ ಗಾಯವಾಗಿ ರಕ್ತ ಸುರಿಯುತ್ತಿರುವುದು ಕಿಶೋರ್‌ ಅವರ ಗಮನಕ್ಕೆ ಬಂದಿತು. ಕೂಡಲೇ ಅವನಲ್ಲಿಗೆ ಹೋದ ಕಿಶೋರ್‌, ಪಕ್ಕದ ಮನೆಯಿಂದ ನೀರು ತಂದು ಗಾಯದಲ್ಲಿ ಸೇರಿದ್ದ ಮರಳು, ಮಣ್ಣನ್ನು ತೆಗೆದು, ಗಾಯವನ್ನು ಸ್ವತ್ಛಗೊಳಿಸಿದರು. ಮೆಡಿಕಲ್‌ ಸ್ಟೋರ್‌ನಿಂದ ಪ್ಲಾಸ್ಟರ್‌ ತಂದು ಗಾಯಕ್ಕೆ ಹಚ್ಚಿ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಿದರು.
 
ಸುರಕ್ಷತೆ ಒದಗಿಸುವ ಇಲಾಖೆಯ ಕರ್ತವ್ಯದೊಂದಿಗೆ, ಮಾನವೀಯತೆಯ ಪ್ರತಿನಿಧಿ ಯಾಗಿಯೂ ಮೆರೆದ ಕಿಶೋರ್‌ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ಕಂಡ ಉನ್ನತ ಪೊಲೀಸ್‌ ಅಧಿಕಾರಿಗಳು ಕಿಶೋರ್‌ ಅವರ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next