Advertisement

ವಸತಿ ಶಾಲೆ ವಿದ್ಯಾರ್ಥಿಗಳಿಗಿಲ್ಲ ಅಗತ್ಯ ಸೌಲಭ್ಯ

11:48 AM Feb 07, 2020 | Naveen |

ಹುಮನಾಬಾದ: 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಕೊನೆ ಹಂತ ತಲುಪಿದರೂ ಇನ್ನೂ ಜಿಲ್ಲೆಯ 29 ವಸತಿ ಶಾಲೆಗಳ ಸುಮಾರು 5,000 ವಿದ್ಯಾರ್ಥಿಗಳಿಗೆ ವಿವಿಧ ವಸ್ತುಗಳು ವಿತರಣೆಯಾಗಿಲ್ಲ. ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಸರೆಯಾಗುವ ಉದ್ದೇಶದಿಂದ ಆರಂಭವಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಬಡ ಮಕ್ಕಳ ಶೈಕ್ಷಣಿಕ ವಿಕಾಸಕ್ಕೆ ನೆಲೆಯಾಗಬೇಕಿತ್ತು. ಆದರೆ, ಕೆಲ ವರ್ಷಗಳಿಂದ ವಸತಿ ಶಾಲಾ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ವಿವಿಧ ವಸ್ತುಗಳನ್ನು ಪೂರೈಕೆ ಮಾಡುವಲ್ಲಿ ಸರ್ಕಾರ ವಿಫಲವಾಗುತ್ತಿದ್ದು, ಮಕ್ಕಳು ವಿದ್ಯಾಭ್ಯಾಸಕ್ಕೆ ತೊಂದರೆ ಅನುಭವಿಸುವಂತಾಗುತ್ತಿದೆ.

Advertisement

ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುವ ವಸತಿ ಶಾಲೆಗಳಲ್ಲಿ 6ರಿಂದ 10ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಎರಡು ಜೊತೆ ಶೊ, ಎರಡು ಜೊತೆ ಸಾಕ್ಸ್‌, ಟೈ, ಬೆಲ್ಟ್, ಟ್ರಂಕ್‌, ಹಾಸಿಗೆ ಸೇರಿದಂತೆ ಇತರೆ ವಸ್ತುಗಳನ್ನು ಇಂದಿಗೂ ಕೂಡ ವಿತರಣೆ ಮಾಡಿಲ್ಲ. ಇದರಿಂದ ಪ್ರತಿಭಾವಂತ ಮಕ್ಕಳಿಗಾಗಿ ಸರ್ಕಾರ ಸ್ಥಾಪಿಸಿದ ವಸತಿ ಶಾಲೆಯಲ್ಲಿ ಬಡ ಮಕ್ಕಳ ಪರಿಸ್ಥಿತಿ ಅಧ್ವಾನಕ್ಕೀಡಾಗಿದೆ.

ವಿವಿಧ ಸಾಮಗ್ರಿಗಳನ್ನು ಖರೀದಿಸಿ ಮಕ್ಕಳಿಗೆ ಒದಗಿಸಬೇಕಾದ ಅನಿವಾರ್ಯತೆಯಲ್ಲಿ ಪೋಷಕರಿದ್ದಾರೆ. ಅಲ್ಲದೆ, ಕಳೆದ ತಿಂಗಳ ಹಿಂದೆ ವಿವಿಧ ವಸತಿ ಶಾಲೆಗಳಿಗೆ ನೋಟ್‌ ಬುಕ್‌ ಸೇರಿದಂತೆ ಕಲಿಕಾ  ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದ್ದು, ಸರ್ಕಾರದವ್ಯವಸ್ಥೆಗಳ ವಿರುದ್ಧ ಪಾಲಕರು ಆಕ್ರೋಶ ವ್ಯಕ್ತಪಡಿಸುವಂತಾಗಿದೆ.

6ನೇ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳಿಂದ ಪೆಟ್ಟಿಗೆ, ಹಾಸಿಗೆ ವಿತರಣೆ ಆಗುತ್ತಿಲ್ಲ. ಹಳೆ ವಿದ್ಯಾರ್ಥಿಗಳ ಹಾಸಿಗೆ ಅಥವಾ ಮನೆಗಳಿಂದ ತಂದ ಹಾಸಿಗೆ ಬಳಸುವ ಸ್ಥಿತಿ ನಿರ್ಮಾಣವಾಗಿದೆ. ವಸತಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಪೂರ್ಣ ಹೊಣೆಯನ್ನು ಸರ್ಕಾರವೇ ನಿಭಾಯಿಸಬೇಕಾಗಿದ್ದು, ವಸತಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ನೀಡಬೇಕಾದ ಸೌಕರ್ಯಗಳ ಕುರಿತು ಸರ್ಕಾರ ಮುಂಜಾಗ್ರತೆ ವಹಿಸಬೇಕಾಗಿದೆ.

ಮೊರಾರ್ಜಿ ವಸತಿ ಶಾಲೆಗೆ ಸೇರ್ಪಡೆ ಆಗುವ ಮಕ್ಕಳಿಗೆ ಕಲಿಕೆ ಮತ್ತು ವಾಸ್ತವ್ಯಕ್ಕೆ ಬೇಕಾದ ಅಗತ್ಯ ಸಾಮಗ್ರಿ ನೀಡುವಲ್ಲಿ ವಿಳಂಬವನ್ನು ಸರ್ಕಾರ ಗಂಭೀರವಾಗಿ ಪರಿಗಣಿಡಸಬೇಕು. ಮಕ್ಕಳಿಗೆ ಸಿಗಬೇಕಾದ ಅಗತ್ಯ ಸೌಕರ್ಯಗಳು ಮಕ್ಕಳು ಶಾಲೆಗೆ ಸೇರುವ ಸಂದರ್ಭದಲ್ಲೇ ಸಿಗಬೇಕು. ಆಗ ಮಾತ್ರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಮಕ್ಕಳ ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಜಿಲ್ಲೆಯಲ್ಲಿ 29 ಮೊರಾರ್ಜಿ ವಸತಿ ಶಾಲೆಗಳಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯ ಮಟ್ಟದಲ್ಲಿ ನಡೆಯಬೇಕಿರುವ ಟೆಂಡರ್‌ ಪ್ರಕ್ರಿಯೆಗಳು ವಿಳಂಬವಾಗಿರುವ ಹಿನ್ನೆಲೆಯಲ್ಲಿ ವಸತಿ ಶಾಲಾ ಮಕ್ಕಳಿಗೆ ವಿತರಣೆ ಆಗಬೇಕಿದ ಶೂ, ಸಾಕ್ಸ್‌, ಟೈ, ಬೆಲ್ಟ್ ಈ ವರಗೆ ವಿತರಣೆ ಆಗಿಲ್ಲ. ಇದೀಗ ಕೆಲ ದಿನಗಳ ಹಿಂದೆ ಟೆಂಡರ್‌ ಕಾರ್ಯ ಪೂರ್ಣಗೊಂಡಿದ್ದು, ಇದೀಗ ಮುಂದಿನ ಕೆಲ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಬೇಕಿದ್ದ ಎಲ್ಲ ವಸ್ತುಗಳನ್ನು ವಿತರಣೆ ಮಾಡಲಾಗುವುದು.
ರಣಪ್ಪ ಬಿರಾದರ,
ವಸತಿ ಶಾಲೆಗಳ ಜಿಲ್ಲಾ ಕೋಆರ್ಡಿನೇಟರ್‌

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next