Advertisement

ಮತ ಚಲಾವಣೆ ಹಕ್ಕಿನಿಂದ ವಂಚಿತರಾಗದಿರಿ: ಷಣ್ಮುಖ

02:41 PM Apr 10, 2019 | Naveen |

ಹುಮನಾಬಾದ: ಮತದಾನ ಸಂವಿಧಾನ ನಮಗೆ ನೀಡಿರುವ ಅತ್ಯಂತ ಮಹತ್ವದ ಹಕ್ಕು. ಯಾರೊಬ್ಬರೂ ಯಾವುದೇ ಕಾರಣಕ್ಕೂ ಅದರಿಂದ ವಂಚಿತರಾಗದೇ ಕಡ್ಡಾಯವಾಗಿ
ಚಲಾಯಿಸಬೇಕು ಎಂದು ಲೋಕಸಭೆ ಚುನಾವಣೆ ಸಹಾಯಕ ಚುನಾವಣಾ ಅಧಿಕಾರಿ ಡಿ.ಷಣ್ಮುಖ ಹೇಳಿದರು.

Advertisement

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಬೈಕ್‌ರ್ಯಾಲಿ ಮೂಲಕ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾನ ಕೇಂದ್ರದಲ್ಲಿ ಅಂಗವಿಕಲರಿಗಾಗಿ ತ್ರಿಚಕ್ರವಾಹನ ಸೌಲಭ್ಯ ಕಲ್ಪಿಸಲಾಗಿದೆ.

ಮತದಾನ ಕೇಂದ್ರ ಸಮೀಪ ಬಿಸಿಲಿನಿಂದ ಬಚಾವ್‌ ಆಗಲು
ಶಾಮಿಯಾನ ಅಳವಡಿಕೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸಕಲ ಸೌಲಭ್ಯ ಕಲ್ಪಿಸಲಾಗಿದೆ. ಯಾವುದೇ ಶುಭ ಸಮಾರಂಭಕ್ಕೆ ಅನ್ಯ ಊರುಗಳಿಗೆ ಹೋಗುವುದಿದ್ದಲ್ಲಿ ಬೆಳಗ್ಗೆ ಮತ ಹಕ್ಕು ಚಲಾಯಿಸಿದ ನಂತರವೇ ತೆರಳಬೇಕು ಎಂದರು. ಯಾರಿಗೆ ಮತ ಹಾಕಿ ಏನೂ ಪ್ರಯೋಜನವಿಲ್ಲ, ಎಲ್ಲರೂ ಅಂಥವರೇ
ಎಂದು ನಿರ್ಲಕ್ಷಿಸದೇ ಇರುವವರಲ್ಲೇ ಸಂವಿಧಾನ ನಿಮಗೆ ಕೊಟ್ಟ ಅತ್ಯಂತ ಮಹತ್ವದ ಈ ಹಕ್ಕು ಸೂಕ್ತ ಎನಿಸುವ ವ್ಯಕ್ತಿಗಳಿಗೆ
ಚಲಾಯಿಸಬೇಕು. ಊರಲ್ಲೇ, ಮನೆಯಲ್ಲೇ ಇದ್ದು ಮತ ಚಲಾಯಿಸದಿದ್ದರೆ ಇದ್ದೂ ಸತ್ತಂತೆ. ಈ ನಿಟ್ಟಿನಲ್ಲಿ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.

ತಹಶೀಲ್ದಾರ್‌ ನಾಗಯ್ಯಸ್ವಾಮಿ ಹಿರೇಮಠ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಅನೀತಾ ಕುಂದಾಪುರ, ಬಿಇಒ ಶಿವರಾಚಪ್ಪ ವಾಲಿ, ಪಶುವೈದ್ಯಾಧಿ ಕಾರಿ
ಡಾ|ಗೋವಿಂದ, ತಾಪಂ ಯೋಜನಾ ಅಧಿಕಾರಿ ಶಂಕರ ಕನಕ, ವ್ಯವಸ್ಥಾಪಕ ದಯಾನಂದ ಲಾಖೆ ಮತದಾನದ ಮಹತ್ವ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದರು.

ವಿಷ್ಣು ಕುಲಕರ್ಣಿ, ಬಿಆರ್‌ಸಿ ಶಿವಕುಮಾರ ಪಾರಶಟ್ಟಿ, ಮಾಣಿಕಪ್ಪ ಬಕ್ಕನ್‌, ಶರದ್‌ ಕುಮಾರ ನಾರಾಯಣಪೇಟಕರ್‌, ವೀರಂತರೆಡ್ಡಿ ಜಂಪಾ, ಶಿವಕುಮಾರ, ಬಸವರಾಜ, ಜೈಶ್ರೀ, ಪಂಚಾಯಿತಿ ಅಭಿವೃದ್ಧಿ ಅಧಿ ಕಾರಿಗಳಾದ ಮಹಾದೇವ್‌, ವಿಜಯಕುಮಾರ ಚಾಂಗ್ಲೇರಿ, ಶಿವರಾಜ ಮಂಗಲಗಿ, ಗಣೇಶ ನಿರ್ಣಾ, ವೀರಣ್ಣ
ಬಿರಾದಾರ ಮೊದಲಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next