Advertisement

ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ

01:19 PM Jan 15, 2020 | Naveen |

ಹುಮನಾಬಾದ: ಪಟ್ಟಣದ ಕುಲದೇವರಾದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ದೇವಸ್ಥಾನ ಆವರಣದಿಂದ ಸಂಗೀತ ವಾದ್ಯಗಳೊಂದಿಗೆ ದೇವರ ಪಲ್ಲಕ್ಕಿ ಮೆರವಣಿಗೆ ಆರಂಭಗೊಂಡು ಜೇರಪೇಟ್‌ ಬಡಾವಣೆ ಹನುಮಾನ್‌ ದೇವಸ್ಥಾನದ ಹತ್ತಿರ ತಲುಪಿ, ವಿವಿಧ ಧಾರ್ಮಿಕ ಪೂಜಾ  ವಿಧಾನಗಳು ನಡೆದವು.

Advertisement

ನಂತರ ವೀರಭದ್ರೇಶ್ವರ ದೇವರ ಶಲ್ಯ ಸುಡುವ ಕಾರ್ಯಕ್ರಮ ನಡೆಯಿತು.
ಶಲ್ಯ ನೈವೇದ್ಯ: ಪಲ್ಲಕ್ಕಿ ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಭಕ್ತರು ವೀರಭದ್ರ ದೇವರಿಗೆ ಶಾಲು ಹೊದಿಸಿ, ನೈವೇದ್ಯ ಅರ್ಪಿಸಿ ದರ್ಶನ ಪಡೆದರು. ಜೇರಪೇಟ್‌ ಬಡಾವಣೆಯಿಂದ ಹೊರಟ ಮೆರವಣಿಗೆ ಪಟ್ಟಣದ ಬಾಲಾಜಿ ವೃತ್ತ, ಪಟೇಲ್‌ ವೃತ್ತದ ಮೂಲಕ ಅಗ್ನಿ ಕುಂಡಕ್ಕೆ ಆಗಮಿಸಿತು. ನಂತರ ದೇವರಿಗೆ ವಿಶೇಷ ಪೂಜೆಗಳು ಸಲ್ಲಿಸಲಾಯಿತು. ಅಲ್ಲಿಯೂ ಕೂಡ ಶಲ್ಯ ಸುಡುವ ಕಾರ್ಯಕ್ರಮ ನಡೆಯಿತು. ಮೆರವಣಿಗೆಯುದ್ದಕ್ಕೂ ಪಟ್ಟಣದ ಮಹಿಳೆಯರು ರಂಗೋಲಿ ಬಿಡಿಸಿ ದೇವರ ಪಲ್ಲಕ್ಕಿಗೆ ಸ್ವಾಗತಿಸಿದರು.

ಹಿರೇಮಠ ಸಂಸ್ಥಾನದ ವೀರ ರೇಣುಕ ಗಂಗಾಧರ ಶಿವಾಚಾರ್ಯರು, ಶಾಸಕ
ರಾಜಶೇಖರ ಪಾಟೀಲ, ಎಂಎಲ್‌ಸಿ ಡಾ| ಚಂದ್ರಶೇಖರ ಪಾಟೀಲ, ಜಿಪಂ ಮಾಜಿ
ಸದಸ್ಯ ವೀರಣ್ಣಾ ಪಾಟೀಲ, ತಹಶೀಲ್ದಾರ್‌ ನಾಗಯ್ನಾ ಹಿರೇಮಠ, ಪ್ರಮುಖರಾದ ಮಲ್ಲಿಕಾರ್ಜುನ ಮಾಶೇಟ್ಟಿ, ಶರಣಪ್ಪಾ ರೆಚಟ್ಟಿ, ದತ್ತಕುಮಾರ ಚಿದ್ರಿ, ಅರವಿಂದ ಅಗಡಿ, ಗಿರೀಶ ಪಾಟೀಲ, ಮಲ್ಲಿಕಾರ್ಜುನ ಮುಗುಳಿ, ಬಾಬುರಾವ್‌ ಪೊಚಂಪಳ್ಳಿ, ಸಿದ್ದು ಚಕಪಳ್ಳಿ, ರಾಚಣ್ಣಾ ಧುಮನಸೂರೆ, ವಿಜಯಕುಮಾರ ಕೋರಿ, ಶ್ರೀನಿವಾಸ ಚವ್ಹಾಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next