Advertisement

ನೌಕರರ ಸಮುದಾಯ ಭವನಕ್ಕೆ 25 ಲಕ್ಷ ಅನುದಾನ: ಷಡಕ್ಷರಿ

06:03 PM Oct 13, 2019 | Team Udayavani |

ಹುಮನಾಬಾದ: ಪಟ್ಟಣದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನದ ಬಾಕಿ ಕೆಲಸವನ್ನು ಪೂರ್ಣಗೊಳಿಸಲು ಸರ್ಕಾರದಿಂದ ರೂ.25 ಲಕ್ಷ ಅನುದಾನ ಕೊಡಿಸುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬಸವಕಲ್ಯಾಣದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ತೆರಳುವ ಮಾರ್ಗಮಧ್ಯ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಲ ಸಮಯ ತಂಗಿದ್ದ ಸಂದರ್ಭದಲ್ಲಿ ನೌಕರರ ಸಂಘದ ವಿವಿಧ ಇಲಾಖೆಗಳ ಪ್ರತಿನಿಧಿ ಗಳಿಂದ ಸನ್ಮಾನ ಸ್ವೀಕರಿಸಿದ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮೃತಪಟ್ಟರೆ ಅಂತ್ಯಕ್ರಿಯೆಗಾಗಿ ಈ ಹಿಂದೆ ನೀಡುತ್ತಿದ್ದ ರೂ.5 ಸಾವಿರ ಬದಲಿಗೆ ರೂ.25 ಸಾವಿರಕ್ಕೆ ಹೆಚ್ಚಿಸಬೇಕೆಂಬ ನೌಕರರ ಬೇಡಿಕೆಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದು ಶೀಘ್ರದಲ್ಲೇ ಆ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ ಎಂದರು.

ಸರ್ಕಾರಿ ನೌಕರರ ಕುಟುಂಬದ ಸಮಸ್ತ ಸದಸ್ಯರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನಡೆಸಿ, ಅದರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ.

ಒಪ್ಪಿಗೆ ಸೂಚಿಸುವ ನಿರೀಕ್ಷೆಯನ್ನು ಸಂಘ ಹೊಂದಿದ್ದಲ್ಲದೇ ಇನ್ನೂ ಅನೇಕ ಬೇಡಿಕಳ ಈಡೇರಿಕೆಗಾಗಿ ಸರ್ಕಾರದೊಂದಿಗೆ ನಿರಂತರ ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದರು.

Advertisement

ನೌಕರರ ಸಂಘದ ಹುಮನಾಬಾದ ತಾಲೂಕು ಘಟಕದ ಅಧ್ಯಕ್ಷ ನಾಗಶಟ್ಟಿ ಡುಮಣಿ ಮಾತನಾಡಿ, ಸಮುದಾಯ ಭವನ ಕಟ್ಟಡಕ್ಕೆ ಈವರೆಗೆ ಆಗಿರುವ ಖರ್ಚು, ಬಾಕಿ, ಕೊರತೆ ಇರುವ ಆರ್ಥಿಕ ಸ್ಥಿತಿಗತಿಯ ಚಿತ್ರಣವನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಕೇಂದ್ರ ಸಮಿತಿ ವತಿಯಿಂದ ಅಗತ್ಯ ನೆರವು ನೀಡುವಂತೆ ಮನವಿ ಮಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶಗೌಡ ಪಾಟೀಲ, ಕೋಶಾಧ್ಯಕ್ಷ ಶ್ರೀನಿವಾಸ, ಗೌರವಾಧ್ಯಕ್ಷ ಶಿವರುದ್ರಯ್ಯ, ಉಪಾಧ್ಯಕ್ಷ
ಸುರೇಶ ಅಪ್ಪಾಜಿಗೌಡ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ರೇವಣಸಿದ್ದಯ್ಯಸ್ವಾಮಿ ಮಠಪತಿ, ರಾಜ್ಯ ಪರಿಷತ್‌ ಸದಸ್ಯ ಮಾಣಿಕ ಸಾಗರ್‌, ಪದಾ ಧಿಕಾರಿಗಳಾದ ಸುಭಾಷ ಪಾಟೀಲ, ಮಹೇಶ, ರಾಜಶೇಖರ ತಂಬಾಕೆ, ಬಸವರಾಜ ಪಂಚಾಳ, ವೆಂಕಟೇಶ ಎಂ.ಹಡಪದ, ಮಾಣಿಕ ನಾಗನಾಯಕ, ಶ್ರೀಶೈಲಸ್ವಾಮಿ ಪರಡಿಮಠ್, ಸಂಗಮೇಶ ಜಂಬಗಿ, ಈಶ್ವರ ತಡೋಳಾ, ಮಲ್ಲಿಕಾರ್ಜುನ ಸಂಗಮಕರ್‌, ಗೋರಖನಾಥ ಎಂ.ದಾಡಗೆ, ಶ್ರೀಕಾಂತ ಸೂಗಿ, ಶ್ರೀಧರ ಚವ್ಹಾಣ, ಮಚೇಂದ್ರ ಜೋಗದ ಮತ್ತಿತರರು ರಾಜ್ಯ ಘಟಕ ಪದಾಧಿಕಾರಿಗಳನ್ನು ಸನ್ಮಾನಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ರವೀಂದ್ರರೆಡ್ಡಿ ಮಾಲಿ ಪಾಟೀಲ, ತಾಲೂಕು ಅಧ್ಯಕ್ಷ ಮರಗೇಂದ್ರ ಸಜ್ಜನಶೆಟ್ಟಿ, ಕೋಶಾಧ್ಯಕ್ಷ ಶಿವರಾಜ ಮೇತ್ರೆ, ಪ್ರಕಾಶ, ಭೀಮಣ್ಣ ದೇವಣಿ, ಶಿವರಾಜರೆಡ್ಡಿ, ಶಶಿಧರ ಪಾಟೀಲ, ತಹಶೀಲ್ದಾರ್‌ ನಾಗಯ್ಯಸ್ವಾಮಿ ಹಿರೇಮs…, ತಾಪಂ ಕಾರ್ಯನಿರ್ವಹಣಾ ಅಧಿಕಾರಿ ಡಾ|ಗೋವಿಂದ, ಬಿಇಒ ಶಿವರಾಚಪ್ಪ ವಾಲಿ, ಕಾಶಿನಾಥ ಕೂಡ್ಲಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಕ ಮೆಹೆಬೂಬ್‌ ಪಟೇಲ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next