Advertisement

ರೇವಪ್ಪಯ್ಯ ಅಜ್ಜ ಭಕ್ತರ ಸಂಕಷ್ಟ ನಿವಾರಕ

01:17 PM Aug 09, 2019 | Naveen |

ಹುಮನಾಬಾದ: ಪವಾಡ ಪುರುಷ ರೇವಪ್ಪಯ್ಯ ಅಜ್ಜ ಭಕ್ತರ ಸಂಕಷ್ಟ ನಿವಾರಕ. 9 ವರ್ಷಗಳಿಂದ ಗ್ರಾಮದಲ್ಲಿ ನಡೆಸಿಕೊಂಡು ಬರುತ್ತಿರುವ ಮೂರ್ತಿ ಪ್ರತಿಷ್ಠಾಪನಾ ವರ್ಷಾಚರಣೆಯಿಂದ ಗ್ರಾಮಕ್ಕೆ ಒಳಿತಾಗಿದೆ ಎಂದು ರೇವಪ್ಪಯ್ಯ ದೇವಸ್ಥಾನ ಸಮಿತಿ ಅಧ್ಯಕ್ಷ ಬಾಬುರಾವ್‌ ಭುರ್ಕೆ ಹೇಳಿದರು.

Advertisement

ಧುಮ್ಮನಸೂರ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ರೇವಪ್ಪಯ್ಯ ಅಜ್ಜನವರ ಮೂರ್ತಿ ಪ್ರತಿಷ್ಠಾಪನೆ 8ನೇ ವರ್ಷಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಜ್ಜನವರ ಇಚ್ಛೆಯಂತೆ ಉತ್ಸವ ನಿಮಿತ್ತ ಹೋಳಿಗೆ ತುಪ್ಪ, ಹೂರಣ ಕಡುಬುಗಳನ್ನು ಗ್ರಾಮದ ರೇವಪ್ಪಯ್ಯ ಸ್ತ್ರೀಶಕ್ತಿ ಸಂಘದ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಸಿದ್ಧಪಡಿಸಿ ಭಕ್ತಿಸೇವೆ ಸಲ್ಲಿಸುತ್ತಿರುವ ಕಾರಣ ಪ್ರತೀ ವರ್ಷ ಉತ್ಸವದ ಮೆರಗು ದ್ವಿಗುಣಗೊಳ್ಳುತ್ತಿದೆ ಎಂದು ಹೇಳಿದರು.

ದೇವಸ್ಥಾನ ಸಮಿತಿ ಉಪಾಧ್ಯಕ್ಷ ದಿಲೀಪಕುಮಾರ ಭಮಶೆಟ್ಟಿ ಮಾತನಾಡಿ, ರೇವಪ್ಪ ಅಜ್ಜನವರು ಭಾಲ್ಕಿ ತಾಲೂಕು ನಾವದಗಿ ಗ್ರಾಮದವರಾಗಿದ್ದರೂ ಕೂಡ ಧುಮ್ಮಸೂರಿನ ಮಠಪತಿ ಮನೆತನದ ಹೆಣ್ಣನ್ನು ಮದುವೆಯಾಗಿದ್ದರು. ಸಂಸಾರದಲ್ಲಿದ್ದರೂ ಅದಕ್ಕೆ ಅತಿಯಾಗಿ ಅಂಟಿಕೊಳ್ಳದೇ ಇದ್ದೂ ಇಲ್ಲದಂತಿದ್ದರು. ಆಧ್ಯಾತ್ಮದತ್ತ ಚಿತ್ತ ಹರಿಸಿದ ಅವರು ತಮ್ಮ ಅಂತಃಶಕ್ತಿಯಿಂದ ಭಕ್ತರ ಅದೆಷ್ಟೋ ಸಮಸ್ಯೆಗಳನ್ನು ಪವಾಡದಿಂದ ಬಗೆಹರಿದ್ದಾರೆ. ಆ ಮೂಲಕ ಈ ಭಾಗದ ಪ್ರತಿಯೊಬ್ಬರ ಪಾಲಿಗೆ ಕೇವಲ ಮಠಪತಿ ಪರಿವಾರದ ಅಳಿಯನಾಗಿ ಮಾತ್ರ ಇರದೇ, ಈ ಭಾಗದ ಪ್ರರಿಯೊಬ್ಬರಿಗೂ ಮಾರ್ಗದರ್ಶಕರಾಗಿ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ ಎಂದರು.

ಕಾರ್ಯದರ್ಶಿ ಮಡಿವಾಳಪ್ಪ ಈಜಾರಿ ಮಾತನಾಡಿ, ಅಜ್ಜನವರು ಮಾಣಿಕಪ್ರಭು, ಅಕ್ಕಲಕೋಟೆ ಸ್ವಾಮಿ ಸಮರ್ಥ, ಸಿರಡಿ ಸಾಯಿಬಾಬಾ, ಸಿದ್ಧಪ್ರಭು ಮಹಾರಾಜರು, ಹುಡಗಿ ಕರಿಬಸವೇಶ್ವರರು, ಚಿಟಗುಪ್ಪ ಮಡಿವಾಳೇಶ್ವರ, ಕರಕನಳ್ಳಿಯ ಬಕ್ಕಪ್ರಭು ಮಹಾರಾಜರ ಸಮಕಾಲಿನರಾಗಿದ್ದು, ಅವರಂತೆ ಇವರೂ ಸಹ ಆಧ್ಯಾತ್ಮ ಶಕ್ತಿ ಮೂಲಕ ಜನಕಲ್ಯಾಣ ಕೆಲಸ ಮಾಡಿದ್ದಾರೆ ಎಂದರು. ಸಹ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ, ದೇವಸ್ಥಾನ ಸಮಿತಿ ನಿರ್ದೇಶಕ ವೈಜಿನಾಥ ಹಿರೇಮಠ, ವೀರಯ್ಯಸ್ವಾಮಿ, ಸಂಗಮೇಶ ಚಟ್ನಳ್ಳಿ, ಕರಬಸಪ್ಪ, ಮಾಣಿಕರೆಡ್ಡಿ, ಶಾಮರಾವ್‌ ಸಂಗೊಳಗಿ, ಗುರುಬಸಯ್ಯಸ್ವಾಮಿ, ಬಾಬುರೆಡ್ಡಿ ರುಕ್ಮಾ, ಪ್ರವೇಶ ಈಜಾರಿ, ರಾಜಕುಮಾರ ಚೀನಕೇರಿ, ಶ್ರೀಕಾಂತ ಪಾಟೀಲ, ಈಶ್ವರ ಭಮಶೆಟ್ಟಿ, ತಿಪ್ಪಾರೆಡ್ಡಿ ಮತ್ತಿತರರು ಮಾತನಾಡಿದರು. ರೇವಪ್ಪಯ್ಯ ಸ್ತ್ರೀಶಕ್ತಿ ಸಂಘದ ಭಾರತೀಬಾಯಿ ಮಠಪತಿ, ಶೋಭಾವತಿ ಮಠಪತಿ, ಕಮಲಾಬಾಯಿ ಮಠಪತಿ, ವೀರಮ್ಮ ಸಿರಮುಂಡಿ, ಕಲಾವತಿ ಈಜಾರೆ ಇತರರು ಧರ್ಮಸಭೆ ನಂತರ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಇದಕ್ಕೂ ಮುನ್ನ ಬೆಳಗ್ಗೆ ಅಜ್ಜನವರ ಮೂರ್ತಿಗೆ ಮಹಾರುದ್ರಾಭಿಷೇಕ, ಅಲಂಕಾರ ಪೂಜೆ ನೆರವೇರಿಸಿದರು. ಬಳಿದ ಹೂರಣಗಡಬು ತುಪ್ಪದ ದಾಸೋಹ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next