Advertisement

ಬಿಇಒ ಸರ್ವಾಧಿಕಾರಿ ಧೋರಣೆ ಸಹಿಸಲಾಗದು: ಸಜ್ಜನಶೆಟ್ಟಿ

02:50 PM Jul 05, 2019 | Naveen |

ಹುಮನಾಬಾದ: ಶಿಕ್ಷಕರ ಸಂಘದ ಪ್ರಮುಖರ, ಪ‌ದಾಧಿಕಾರಿಗಳ ಮಾತಿಗೆ ಮಾನ್ಯ ಮಾಡದೇ ಬಿಇಒ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ಕರ್ನಾ‌ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಮುರಗೇಂದ್ರ ಸಜ್ಜನಶೆಟ್ಟಿ ಹೇಳಿದರು.

Advertisement

ಪಟ್ಟಣದ ಗುರು ಭವನದಲ್ಲಿ ಗುರುವಾರ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವಾರ್ಷಿಕ ಕ್ರಿಯಾಯೋಜನೆ, ಹೋಬಳಿ-ವಲಯ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟ ಆಯೋಜನೆ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ನಿವೃತ್ತ ಶಿಕ್ಷಕರು ಪಿಂಚಣಿಗಾಗಿ ಪ್ರತಿನಿತ್ಯ ಅಲೆದಾಡುತ್ತಿದ್ದರೂ ಅವರ ಕಷ್ಟ ಅರ್ಥ ಮಾಡಿಕೊಳ್ಳುವ ಕನಿಷ್ಟ ಸೌಜನ್ಯ ತೋರಿಸದಿರುವುದು ಆಡಳಿತದ ಬೇಜವಾಬ್ದಾರಿಗೆ ನಿದರ್ಶನವಾಗಿದೆ. ಅಧಿಕಾರಿಗಳು ಅವರ ಸ್ಥಾನದಲ್ಲಿದ್ದುಕೊಂಡು ಚಿಂತಿಸಬೇಕು. ತಾಲೂಕಿನಲ್ಲಿ ಆಡಳಿತ ಸುಧಾರಣೆಯಾಗುತ್ತಿದೆ ಎಂದು ಪ್ರತಿಯೊಬ್ಬರಲ್ಲೂ ಸಂತಸ ಮೂಡಿತ್ತು. ಅದೀಗ ಹುಸಿಯಾದ ಅನುಭವಾಗುತ್ತಿದೆ ಎಂದು ಬೇಸರದಿಂದ ನುಡಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರರೆಡ್ಡಿ ಮಾಲಿ ಪಾಟೀಲ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು ನೊಂದ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿ ತಾಲೂಕು ಮೆಚ್ಚುವ ಅಧಿಕಾರಿಯಾಗಬೇಕು ಎಂದು ಸಲಹೆ ನೀಡಿದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರವಣಕುಮಾರ ಮಾತನಾಡಿ, ವಿವಿಧ ಹಂತದ ಕ್ರೀಡಾಕೂಟ ನಡೆಯುವ ದಿನಾಂಕವನ್ನು ಜುಲೈ 5ರಂದು ಪ್ರಕಟಿಸಲಾಗುವುದು ಎಂದರು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಮಾತನಾಡಿ, ಎಲ್ಲ ಶಿಕ್ಷಕರ ಸಂಘಟನೆಗಳು ಸಹಕರಿಸುತ್ತಿರುವ ಕಾರಣ ಪಾರದರ್ಶಕ ಆಡಳಿತ ನೀಡುತ್ತಿರುವ ನನಗೆ ಸುಧಾರಣೆ ಮಾಡಲು ಸಾಧ್ಯವಾಗಿದೆ. ಕಣ್ತಪ್ಪಿ ಆಗಿರುವ ತಪ್ಪುಗಳನ್ನು ಸುಧಾರಿಸಿಕೊಂಡು ಮುಂದಿನ ದಿನಗಳಲ್ಲಿ ಹಾಗಾದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ದೈಹಿಕ ಶಿಕ್ಷಣ ಗ್ರೇಡ್‌(1) ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸಂಜೀವಕುಮಾರ ಸೂರ್ಯವಂಶಿ ಮಾತನಾಡಿ, ಜು.30ಕ್ಕೆ ತಾಲೂಕು ದೈಹಿಕ ಶಿಕ್ಷಕ ಶಿಕ್ಷಣ ಶಿಕ್ಷಕರ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆ.10ಕ್ಕೆ ತಾಲೂಕು ಪದಾಧಿಕಾರಿಗಳ ನೇಮಕ ನಡೆಯುವುದು. ಆ.20ಕ್ಕೆ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿಸಿದರು.

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖ್‌ ಮೆಹೆಬೂಬ್‌ ಪಟೇಲ ಮತ್ತಿತರರು ಮಾತನಾಡಿದರು.

ನಿವೃತ್ತ ಶಿಕ್ಷಣಾಧಿಕಾರಿ ಕಾಶೀನಾಥ ಪಾಟೀಲ, ಪಜಾ-ಪಪಂ ಶಿಕ್ಷಕರ ಸಂಘದ ಅಧ್ಯಕ್ಷ ರಾಜಕುಮಾರ ಹರನಾಳ, ಕಾರ್ಯದರ್ಶಿ ತಾತ್ಯಾರಾವ್‌ ಕಾಂಬ್ಳೆ, ಕೋಶಾಧ್ಯಕ್ಷ ಶಿವರಾಜ ಮೇತ್ರೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next