Advertisement

ಪ್ರತಿಫಲಾಪೇಕ್ಷೆ ಇಲ್ಲದಿರುವುದೇ ನೈಜ ರಾಷ್ಟ್ರಸೇವೆ

05:59 PM Dec 06, 2019 | Naveen |

ಹುಮನಾಬಾದ: ಪ್ರತಿಫಲಾಪೇಕ್ಷೆ ಇಲ್ಲದಿರುವುದೇ ನೈಜ ರಾಷ್ಟ್ರಸೇವೆ. ನಾನು ನನಗಾಗಿ ಅಲ್ಲ ನಿಮಗಾಗಿ ಎಂಬುದು ಎನ್ನೆಸ್ಸೆಸ್‌ ಧ್ಯೇಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರಲ್ಲಿ ಸ್ವಾರ್ಥರಹಿತ ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ಸರ್ಕಾರ ರಾಷ್ಟ್ರೀಯ ಸೇವಾ ಯೋಜನೆ ಜಾರಿಗೆ ಬಂದಿದೆ ಎಂದು ಪ್ರೊ|ಭಕ್ತರಾಜ ಬಿರಾದಾರ್‌ ಹೇಳಿದರು.

Advertisement

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಸಮೀಪದ ಬಸವತೀರ್ಥ ವೀರಭದ್ರೇಶ್ವರ ದೇವಸ್ಥಾನ ಪ್ರಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿ ಅವರ ಕನಸಿನ ಕೂಸಾಗಿದ್ದ ಇದನ್ನು ಭಾರತ ಸರ್ಕಾರ 1969ರಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಅಧಿಕೃತವಾಗಿ ಜಾರಿಗೆ ತದಿಂತು. ಆರಂಭದಲ್ಲಿ ಭಾರತದ 39ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಯೋಜನೆ ರೂಪಿಸಿತ್ತು.

ಆದಾದ ನಂತರ ರಾಷ್ಟ್ರದ ಪ್ರತಿಯೊಂದು ವಿಶ್ವವಿದ್ಯಾಲಯಗಳು ಈ ಯೋಜನೆ ಅನುಷ್ಠಾನಕ್ಕೆ ತಂದವು. ತದನಂತರದ ವರ್ಷಗಳಲ್ಲಿ ದೇಶದ ಆಯಾ ರಾಜ್ಯಗಳು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೂ ಯೋಜನೆ ವಿಸ್ತರಿಸಿ, ತನ್ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪಾಲನೆ. ಸ್ವಾವಲಂಬನೆ, ತಾಳ್ಮೆ, ಪರೋಪಕಾರ ಮನೋಭಾವ ಹಾಗೂ ವ್ಯಕ್ತಿತ್ವ ವಿಕಸನಗೊಳಿಸುವ ಕಾರ್ಯವನ್ನು ತಡೆರಹಿತವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.

ಹಿರಿಯ ಉಪನ್ಯಾಸಕಿ ಅನ್ನಪೂರ್ಣ ಮಾತನಾಡಿ, ಹೆಣ್ಣು ಮಕ್ಕಳು ನಾಲ್ಕು ಗೋಡೆಗಳಿಗೆ ಸೀಮಿತವಲ್ಲ. ಇದಕ್ಕೂ ಮಿಕ್ಕು  ಪಂಚದಲ್ಲಿ ಏನೆಲ್ಲ ಇದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕು. ಯಾರಿಗಾದರೂ ಆರ್ಥಿಕವಾಗಿ ನೆರವಾಗುವುದು ಮಾತ್ರ ಸೇವೆ ಎಂಬುದನ್ನು ಮನಸ್ಸಿನಿಂದ ಕಿತ್ತೆಸೆದು ವೃದ್ಧರಿಗೆ, ಗರ್ಭಿಣಿಯರಿಗೆ ಬಸ್‌ಗಳಲ್ಲಿ ಆಸನ ಬಿಟ್ಟುಕೊಡುವುದು, ವಿಕಲಚೇತನರಿಗೆ ದಾರಿ ದಾಟಿಸುವುದು, ನೊಂದವರ ಕಣ್ಣೀರೊರೆಸುವುದು ಇದೂ ಕೂಡ ರಾಷ್ಟ್ರಸೇವೆ ಎಂಬುದನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಸಿ.ಗೋಕಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧಿಧೀಜಿ ಅವರ ಜೀವನದ ಮೇಲೆ ಅತ್ಯಂತ ಹೆಚ್ಚು ಪರಿಣಾಮ ಬೀರಿದ್ದು ಸತ್ಯಹರಿಶ್ಚಂದ್ರ ಹಾಗೂ ಶ್ರವಣಕುಮಾರ ನಾಟಕ. ಅದೇ ಕಾರಣಕ್ಕೂ ಜೀವನದುದ್ದಕ್ಕೂ ಸತ್ಯ ತೊರೆಯಲಿಲ್ಲ. ಅಹಿಂಸೆ ಮಾರ್ಗ ಬಿಡಲಿಲ್ಲ. ತಾಯಿ ತಂದೆ ಮೇಲಿನ ಪ್ರೀತಿ ಯಾವತ್ತೂ ಕ್ಷೀಣವಾಗುವಂತೆ ನೋಡಲಿಲ್ಲ. ತಮ್ಮ ಅದ್ಭುತ ಮಾನವೀಯ ಮೌಲ್ಯಗಳ ಮೂಲಕ ಗಾಂಧೀಜಿ ಅವರು ಕೇವಲ ಭಾರತ ಮಾತ್ರವಲ್ಲದೇ ಇಡೀ ವಿಶ್ವದ ಗಮನ ಸೆಳೆಯಲು ಸಾಧ್ಯವಾಯಿತು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸತತ ಪರಿಶ್ರಮ ಮೂಲಕ ಜೀವನದಲ್ಲಿ ಹುದ್ದೆ, ಸ್ಥಾನ ಮಾನ ಎರಡನ್ನೂ ಗಳಿಸಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಉಪನ್ಯಾಸಕಿ ರಾಗಿಣಿ, ವಿದ್ಯಾರ್ಥಿನಿ ಪೂಜಾ ಅವರು ಗಾಯನಮಾಡಿ ಸರ್ವರ ಮನಸೂರೆಗೊಂಡರು. ಈಶ್ವರ ಭೂತಾಳೆ, ಸಂಗೀತಾ, ಜ್ಞಾನೇಶ್ವರಿ, ಪದ್ಮಾವತಿ ಇತರರು ಇದ್ದರು. ಸ್ವಾತಿ ಪ್ರಾರ್ಥಿಸಿದರು. ಸಿದ್ದರಾಜ ಸ್ವಾಗತಿಸಿದರು. ಶಿಬಿರಾಧಿಕಾರಿ ಮಾಣಿಕರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಸಂಜೀವಕುಮಾರ ನಿರೂಪಿಸಿದರು. ಸಿದ್ಧರಾಜ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next