Advertisement

ಹಂದಿ ಜ್ವರ ಜನರಿಗೆ ಬರುವ ರೋಗವಲ್ಲ

04:11 PM Mar 21, 2020 | Team Udayavani |

ಹುಮನಾಬಾದ: ನಂದಗಾಂವ ಗ್ರಾಮದಲ್ಲಿ ಹಂದಿಗಳ ಸಾವು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಶಾಸಕ ರಾಜಶೇಖರ ಪಾಟೀಲ ಶುಕ್ರವಾರ ಬೆಂಗಳೂರಿನಿಂದ ನೇರವಾಗಿ ನಂದಗಾಂವ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಅಲ್ಲದೆ, ಹಂದಿಗಳು ಜ್ವರದಿಂದ ಮೃತಪಟ್ಟಿದ್ದು ಇದು ಜನರಿಗೆ ಬರುವ ರೋಗವಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

Advertisement

ಪಶು ಇಲಾಖೆಯ ಉಪನಿದೇರ್ಶಕ ಡಾ|ಗೋವಿಂದ ಅವರು ಗ್ರಾಮದಲ್ಲಿ ಹಂದಿಗಳು ಮೃತಪಡುತ್ತಿರುವ ಕುರಿತು ಶಾಸಕ ರಾಜಶೇಖರ ಪಾಟೀಲ ಅವರಿಗೆ ಮಾಹಿತಿ ನೀಡಿದರು. ಗ್ರಾಮದಲ್ಲಿ ಈವರೆಗೆ ನೂರಕ್ಕೂ ಅಧಿ ಕ ಹಂದಿಗಳು ಮೃತಪಟ್ಟಿವೆ. ಗ್ರಾಮಕ್ಕೆ ವಿಜ್ಞಾನಿಗಳ ತಂಡ ಭೇಟಿ ನೀಡಿದೆ. ಹಂದಿಯ ಮಾದರಿ ಪರೀಕ್ಷೆಗೆ ಕಳುಹಿಸಿದ್ದು, ಹಂದಿಗಳು ಜ್ವರದಿಂದ ಮೃತಪಟ್ಟಿವೆ ಎಂದು ವರದಿ ಬಂದಿದೆ. ಅಲ್ಲದೆ, ಗ್ರಾಮದಲ್ಲಿನ ಜನರಿಗೆ ಅರಿವು ಮೂಡಿಸುವ ಕೆಲಸ ಕೂಡ ಮಾಡಲಾಗಿದೆ ಎಂದು ತಿಳಿಸಿದರು.

ಶಾಸಕ ರಾಜಶೇಖರ ಪಾಟೀಲ ಅವರು, ಗ್ರಾಮದಲ್ಲಿ ಹಂದಿಗಳು ಮೃತಪಟ್ಟಿರುವುದು ಜ್ವರದಿಂದ ಎಂಬುವುದು ವರದಿ ಬಂದಿದ್ದು, ಗ್ರಾಮಸ್ಥರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಒಂದು ಕಡೆ ಕೊರೊನಾ ಇಡೀ ವಿಶ್ವಕ್ಕೆ ಕಂಟಕ್ಕವಾಗಿ ಕಾಡುತ್ತಿದೆ. ಈ ಮಧ್ಯದಲ್ಲಿ ನಂದಗಾಂವ ಗ್ರಾಮದಲ್ಲಿ ನಿತ್ಯ ಹಂದಿಗಳು ಸಾಯುತ್ತಿರುವ ಸುದ್ದಿ ತಿಳಿದು ಆತಂಕ ಉಂಟಾಗಿತ್ತು.

ಈ ಕುರಿತು ಸದನದಲ್ಲಿ ಕೂಡ ಚರ್ಚೆ ನಡೆಸಿ ಸಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದೇನೆ. ಗ್ರಾಮಸ್ಥರು ಯಾವುದೇ ಕಾರಣಕ್ಕೂ ಹೆದರಬೇಡಿ. ಹಂದಿ ಜ್ವರ ಮನುಷ್ಯರಿಗೆ ಬರುವುದಿಲ್ಲ ಎಂದು ವಿಜ್ಞಾನಿಗಳು ವರದಿ ನೀಡಿದ್ದಾರೆ ಎಂದು ತಿಳಿಸಿದರು.

ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಶಾಸಕ ಪಾಟೀಲ, ಹಂದಿ ಜ್ವರದಿಂದ ನಂದಗಾಂವ ಗ್ರಾಮಸ್ಥರು ಭಯಪಟ್ಟಿದ್ದರು. ಯಾವ ಕಾರಣಕ್ಕೆ ಹಂದಿಗಳು ಸಾಯುತ್ತಿವೆ ಎಂಬುದನ್ನು ತಿಳಿಯದೇ ಅನೇಕ ರೀತಿಯ ಆತಂಕಕ್ಕೆ ಒಳಗಾಗಿದ್ದರು. ಆದರೆ, ಇದೀಗ ವರದಿ ಬಂದಿದ್ದು, ಹಂದಿ ಜ್ವದಿಂದ ಮೃತಪಟ್ಟಿವೆ ಎಂಬುದು ತಿಳಿದು ಎಲ್ಲರು ನೆಮ್ಮದಿಯಾಗಿದ್ದಾರೆ.

Advertisement

ಹಂದಿಗಳ ಜ್ವರ ಜನರಿಗೆ ಬರುವುದಿಲ್ಲ, ಹರಡುವುದಿಲ್ಲ ಎಂದು ಮನವರಿಕೆ ಮಾಡಲಾಗಿದೆ. ಗ್ರಾಮಸ್ಥರನ್ನು ಭೇಟಿ ಮಾಡಿ ಸ್ಥಿತಿಗತಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಕಲಾಪ ಬಿಟ್ಟು ಬಂದಿದ್ದೇನೆ ಎಂದರು.

ಗ್ರಾಮದಲ್ಲಿ ಸಭೆ: ಗ್ರಾಮದ ಪಂಚಾಯತ ಕಚೇರಿಯಲ್ಲಿ ಸಭೆ ನಡೆಸಿದ ಶಾಸಕ ರಾಜಶೇಖರ ಪಾಟೀಲ, ಗ್ರಾಮದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಗ್ರಾಮದಲ್ಲಿನ ಚರಂಡಿಗಳ ಸ್ವಚ್ಛತೆ ಜೊತೆಗೆ ಕುಡಿಯುವ ನೀರಿಗಾಗಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಶಾಸಕರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಅಂಬಿಕಾ ಅವರಿಗೆ ಸೂಚಿಸಿದರು.

ಗ್ರಾಮದ ಜನರು ಕೂಡ ಸ್ವತ್ಛತೆಗೆ ಆದ್ಯತೆ ನೀಡುವ ಮೂಲಕ ಕೊರೊನಾ ವೈರಸ್‌ ಹರಡದಂತೆ ನೋಡಿಕೊಳ್ಳಬೇಕು. ವಿದೇಶದಿಂದ ಬಂದ ಜನರು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next