Advertisement

ಟಿಕೆಟ್ ಆಕಾಂಕ್ಷಿಗಳ ಚಟುವಟಿಕೆ ಚುರುಕು

10:47 AM May 06, 2019 | Team Udayavani |

ಹುಮನಾಬಾದ: ಪುರಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ವಿವಿಧ ರಾಜಕೀಯ ಪಕಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಚಟುವಟಿಕೆ ಕಳೆದ ನಾಲ್ಕೈದು ದಿನಗಳಿಂದ ಚುರುಕುಗೊಂಡಿದೆ.

Advertisement

ಈ ಮೊದಲು 23 ವಾರ್ಡ್‌ಗಳಿದ್ದ ಪಟ್ಟಣದಲ್ಲಿ ಈಗ ವಾರ್ಡ್‌ಗಳ ಸಂಖ್ಯೆ 27ಕ್ಕೆ ಹೆಚ್ಚಿದೆ. ವಾರ್ಡ್‌ಗಳ ಸಂಖ್ಯೆಗೆ ಅನುಗುಣವಾಗಿ ಸಹಜವಾಗಿಯೇ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಲ್ಲಿನ ಆಕಾಂಕ್ಷಿಗಳ ಸಂಖ್ಯೆ ಸಹ ಹೆಚ್ಚಿದೆ. ವಾರ್ಡ್‌ಗಳ ಮರುವಿಂಗಡಣೆ ಟಿಕೆಟ್ ಆಕಾಂಕ್ಷಿಗಳು ಮಾತ್ರವಲ್ಲದೇ ಮತದಾರರನ್ನು ಗೊಂದಲಕ್ಕೆ ಸಿಲುಕಿಸಿದೆ. ಮರು ವಿಂಗಡಣೆಯಾದ ಬಳಿದ ಮೀಸಲಾತಿ ವಾರ್ಡ್‌ನಲ್ಲಿ ಜಾತಿ ಜನರು ಕೇವಲ ಶೇ.10ರಿಂದ 20 ಮಾತ್ರ ಇದ್ದಾರೆ. ಆದರೆ ಈಗಿನ ಬದಲಾವಣೆಯಿಂದ ಪಟ್ಟಣದ 27 ವಾರ್ಡ್‌ಗಳ ಶೇ.75ರಷ್ಟು ಆಕಾಂಕ್ಷಿಗಳ ತಲೆ ಬಿಸಿಯಾಗಿದೆ.

ಈ ಹಿಂದಿನ ಬಲಾಬಲ: ಪುರಸಭೆಯಲ್ಲಿ ಈ ಹಿಂದೆ ಕಾಂಗ್ರೆಸ್‌ ಪಕ್ಷದ 14 ಸದಸ್ಯರು, ಜೆಡಿಎಸ್‌ 9 ಸದಸ್ಯರು ಇದ್ದರು. ಹಾಗಾಗಿಯೇ ಸಹಜವಾಗಿ ಅಧಿಕಾರ ಚುಕ್ಕಾಣಿ ಕಾಂಗ್ರೆಸ್‌ ಮುಡಿಗೇರಿತ್ತು. 1994ರಲ್ಲಿ ಮೀರಾಜುದ್ದಿನ್‌ ಎನ್‌. ಪಟೇಲ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಜೆಡಿಎಸ್‌ ಕೈಯಲ್ಲಿತ್ತು. ಆ ಸಂದರ್ಭದಲ್ಲಿ ಎಂ.ಡಿ. ನಜಿಬೋದ್ದೀನ್‌ ಅಧ್ಯಕ್ಷರಾಗಿದ್ದರು. ಆ ನಂತರ 2006-07ನೇ ಸಾಲಿನಲ್ಲಿ ಮೀರಾಜುದ್ದಿನ್‌ ಎನ್‌.ಪಟೇಲ ಅವರೇ ಶಾಸಕರಾಗಿದ್ದ ವೇಳೆ 11ಸದಸ್ಯ ಬಲ ಹೊಂದಿದ್ದ ಜೆಡಿಎಸ್‌ ಅಧಿಕಾರ ಗದ್ದುಗೆ ಹಿಡಿದಿತ್ತು. ಆಗ ಕಾಂಗ್ರೆಸ್‌ 10 ಮತ್ತು ಬಿಜೆಪಿ ಸದಸ್ಯರನ್ನು ಹೊಂದಿತ್ತು. ಆದರೆ ಕಳೆದ ಅವಧಿಯಲ್ಲಿ ಬಿಜೆಪಿ ಖಾತೆ ತೆರೆಯಲಿಲ್ಲ.

ಪುರಸಭೆಗೆ ಗೌಡರ ಎಂಟ್ರಿ: ಈ ಮಧ್ಯ ಕಳೆದ ಎರಡು ಅವಧಿಯಿಂದ ವೀರಣ್ಣ ಎಚ್.ಪಾಟೀಲ ಅವರು ಜಿಪಂ ಚುನಾವಣೆ ಸ್ಪರ್ಧಿಸಿದ್ದರಿಂದ ಪುರಸಭೆ ಚುನಾವಣೆ ಸ್ಪರ್ಧೆಯಿಂದ ಪಾಟೀಲ ಪರಿವಾರ ಸಂಪೂರ್ಣವಾಗಿ ದೂರ ಉಳಿದಿದ್ದರಿಂದ ಮತ್ತೆ ಯಾರು ಎಂಟ್ರಿ ಕೊಟ್ಟಿರಲಿಲ್ಲ. ಆದರೆ ಈ ಬಾರಿ ಗೌಡರ ಪರಿವಾರ ಯಾರಾದರೂ ಒಬ್ಬರು ಚುನಾವಣೆಗೆ ಸ್ಪರ್ಧಿಸಿದರೆ ಅಚ್ಚರಿಪಡಬೇಕಿಲ್ಲ. ಮಂದಿನ ದಿನಗಳೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲಿವೆ.

ತಮ್ಮದು ರಾಷ್ಟ್ರೀಯ ಪಕ್ಷ. ರಾಜ್ಯ ರಾಜಕಾರಣದಲ್ಲಿ ನಡೆದಿರುವುದು ಅನಿವಾರ್ಯ ಬೆಳವಣಿಗೆ. ಬಯಸಿ ಮಾಡಿದ್ದಲ್ಲ. ಆದರೆ ಪುರಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಗಳ ಜತೆಗೆ ಮೈತ್ರಿ ಇಲ್ಲದೇ ಸ್ವತಂತ್ರವಾಗಿ ಸ್ಪರ್ಧಿಸುವುದು ಮಾತ್ರವಲ್ಲ ಅಧಿಕಾರ ಗದ್ದುಗೆ ನಮ್ಮ ವಶಕ್ಕೆ ತೆಗೆದುಕೊಳ್ಳುವುದು ಖಚಿತ.
•ಅಪ್ಸರಮಿಯ್ನಾ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

Advertisement

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಮೈತ್ರಿ ಬೇಡ ಎಂದಿದ್ದಾರೆ. ಹೀಗಾಗಿ ಹುಮನಾಬಾದ ಪಟ್ಟಣದ 27 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸುವುದಲ್ಲದೇ ಅಧಿಕಾರದ ಗದ್ದುಗೆಯನ್ನು ನಾವೇ ಹಿಡಿಯುತ್ತೇವೆ.
ಮಹೇಶ ಅಗಡಿ, ಜೆಡಿಎಸ್‌ ತಾಲೂಕು ಘಟಕ ಅಧ್ಯಕ್ಷರು

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಜನಪರ ಯೋಜನೆಗಳ‌ನ್ನು ಭಾರತ ಮಾತ್ರವಲ್ಲದೇ ವಿಶ್ವದ ಅದೆಷ್ಟೋ ರಾಷ್ಟ್ರಗಳು ಶ್ಲಾಘಿಸಿವೆ. ದೇಶದ ಪ್ರತಿಯೊಬ್ಬ ಯುವಕರ ನಾಲಿಗೆ ಮತ್ತು ಮನಸ್ಸಿನಲ್ಲಿ ಮೋದಿ ಬಿಟ್ಟರೆ ಬೇರೆ ಹೆಸರೆ ಕೇಳಿಸುತ್ತಿಲ್ಲ. ಹಿಂದೆ ಕಾರಣಾಂತರ ನಮ್ಮ ಅಭ್ಯರ್ಥಿಗಳು ಗೆದ್ದಿರಲಿಲ್ಲ. ಈ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿ ಅಧಿಕಾರ ಚುಕ್ಕಾಣಿ ಹಿಡಿಯುತ್ತೇವೆ.
ವಿಶ್ವನಾಥ ಪಾಟೀಲ ಮಾಡ್ಗುಳ, ಬಿಜೆಪಿ ತಾಲೂಕು ಅಧ್ಯಕ್ಷ

ಶಶಿಕಾಂತ ಕೆ. ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next