ಹುಮನಾಬಾದ: ಸ್ವಾತಂತ್ರ್ಯ ದಿನಾಚರಣೆ ಶುಭ ದಿನದಂದು ಮಾಜಿ ಸೈನಿಕರ ಸನ್ಮಾನ ಜೊತೆಗೆ ರಕ್ತದಾನ ಶಿಬಿರ ಆಯೋಜಿಸಿರುವ ಆಸ್ಪತ್ರೆಯ ವೈದ್ಯಾಧಿಕಾರಿಗಳ ಕಾರ್ಯ ಪ್ರಶಂಸನೀಯ. ಈ ಆಸ್ಪತ್ರೆ ವೈದ್ಯರ ಕಾರ್ಯ ಇಡೀ ಜಿಲ್ಲೆಗೆ ಮಾದರಿ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 73ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ವೈದ್ಯರು ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ನೀಡುವ ಸಂಬಳಕ್ಕೆ ಬದ್ಧರಾಗಿ ಕರ್ತವ್ಯ ನಿರ್ವಹಿಸುವವರೆ ವಿರಳ ಆಗಿರುವ ಈ ಸಂದರ್ಭಧಲ್ಲಿ ತಮ್ಮ ವೃತ್ತಿ ಜೊತೆಗೆ ಜನೋಪಯೋಗಿ ಚಟುವಟಿಕೆ ನಡೆಸಿದ್ದು ಆರೋಗ್ಯಕರ ಬೆಳವಣಿಗೆ. ವ್ಯವಸ್ಥೆ ಮಾಡಿರುವ ಆಸ್ಪತ್ರೆಯ ಮುಖ್ಯ ಆರೋಗ್ಯ ಅಧಿಕಾರಿ ಡಾ|ನಾಗನಾಥ ಹುಲ್ಸೂರೆ, ತಾಲೂಕು ಆರೋಗ್ಯ ಅಧಿಕಾರಿ ಅಶೋಕ ಮೈಲಾರೆ, ತಜ್ಞ ವೈದ್ಯರಾದ ಡಾ|ಬಸವಂತರಾವ ಗುಮ್ಮೇದ್, ಡಾ|ದಿಲೀಪ ಡೋಂಗ್ರೆ, ಡಾ|ಚೈತ್ರಾನಂದ, ಡಾ|ಪ್ರವೀಣ, ಸ್ತ್ರೀರೋಗ ತಜ್ಞೆ ಡಾ|ಸಂಗೀತಾ ಅಗಡಿ ಹಾಗೂ ಇತರ ವೈದ್ಯರ ಕಾರ್ಯ ಮೆಚ್ಚಲೇಬೇಕು ಎಂದರು.
ಕೇಂದ್ರ ಸರ್ಕಾರದ 370 ಕಾಯ್ದೆ ತಿದ್ದುಪಡಿ ನಿರ್ಧಾರದಿಂದ ಕಾಶ್ಮೀರದ ಜನತೆ ನೆಮ್ಮದಿಯಿಂದ ಜೀವಿಸುತ್ತಿದ್ದಾರೆ. ಸೇನಾಸೇವೆ ಜೀವನದಲ್ಲಿ ಅತ್ಯಂತ ನೆಮ್ಮದಿ ನೀಡಿದೆ. ಹೇಗೋ ಹುಟ್ಟಿ, ಹೇಗೋ ಸಾವನ್ನಪ್ಪು ಬದಲು ದೇಶದ ರಕ್ಷಣೆಗಾಗಿ ಶ್ರಮಿಸುತ್ತಿದ್ದೇವೆ ಎಂಬ ಹೆಮ್ಮೆ ಇದೆ ಎಂದು ಮಾಜಿ ಯೋಧರಾದ ಮಧುಕರ್ ಲೋಕನ್ನವರ್, ವೈಜಿನಾಥ ಚಂದನಹಳ್ಳಿ, ಬಾಬುರಾವ ಸೂರ್ಯವಂಶಿ, ವಿಜಯರಾಜ ರಾಜೇಶ್ವರ, ಜಾನ್ ಲೋಬೊ ಅನಿಸಿಕೆ ವ್ಯಕ್ತಪಡಿಸಿದರು.
ಆಸ್ಪತ್ರೆ ಮುಖ್ಯ ಆರೋಗ್ಯ ಅಧಿಕಾರಿ ಡಾ|ನಾಗನಾಥ ಹುಲ್ಸೂರೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಯೋಧರ ಸೇವೆ ಸ್ಮರಿಸಿದರು. ಆಸ್ಪತ್ರೆ ಸಮಸ್ತ ಸಿಬ್ಬಂದಿ ಸಹಕಾರದಿಂದ ರಕ್ತದಾನ ಶಿಬಿರ ಆಯೋಜನೆ ಸಾಧ್ಯವಾಯಿತು ಎಂದರು.
ಈ ವೇಳೆ 60 ಜನ ರಕ್ತದಾನ ಮಾಡಿದರು. ತಾಲೂಕು ಆರೋಗ್ಯ ಅಧಿಕಾರಿ, ಡಾ|ಅಶೋಕ ಮೈಲಾರಿ, ಡಾ|ಬಸವಂತರಾವ್ ಗುಮ್ಮೇದ, ಡಾ|ಸಂಗೀತಾ ಹುಲಸೂರೆ, ಡಾ|ದಿಲೀಪ ಡೊಂಗ್ರೆ, ಡಾ|ಚೈತ್ರಾನಂದ ಚಿಮಕೊಡೆ, ಡಾ|ಪ್ರವೀಣಕುಮಾರ ಕಡಲೆ, ಡಾ|ವಿಶ್ವ ಸೈನೀರ್, ಡಾ|ಅರ್ಚನಾ, ಡಾ|ನುಫೇಲ್ ಸಿಬ್ಬಂದಿಗಳಾದ ಶಿವರಾಜ, ಬಾಬುರೆಡ್ಡಿ, ಪ್ರಕಾಶ, ಶ್ರೀಶೈಲ, ಮಹಾರಾಜ, ಬಸಲಿಂಗಯ್ಯ, ಭಗವಂತ್ರಾಯ, ಸುನೀಲ, ಚಂದ್ರಕಾಂತ, ಆಸ್ಪತ್ರೆಯ ಶುಶ್ರೂಷಕರು, ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರು, ಗ್ರೂಪ್ ಡಿ ನೌಕರರು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಲೂಕು ಆರೋಗ್ಯಾಧಿಕಾರಿ ಡಾ|ಅಶೋಕ ಮೈಲಾರಿ ಅಧ್ಯಕ್ಷತೆ ವಹಿಸಿದ್ದರು, ತೀರ್ಥಪ್ಪ ಭೀಮಶೆಟ್ಟಿ ಪ್ರಾರ್ಥಿಸಿದರು, ಮಲ್ಲಿಕಾರ್ಜುನ ಸಂಗಮಕರ ಸ್ವಾಗತಿಸಿದರು. ಶಿವಕುಮಾರ ಕಂಪ್ಲಿ ನಿರೂಪಿಸಿದರು. ಭಗವಂತರಾವ್ ವಂದಿಸಿದರು.