ಹುಮನಾಬಾದ: ಪಟ್ಟಣದ ಪ್ರವಾಸಿ ಮಂದಿರದಿಂದ ಕಲ್ಬುರ್ಗಿ ಮಾರ್ಗದ ಗಾದಾ ಪಂಚ ಮುಂಭಾಗದ ರಾಜ್ಯ ಹೆದ್ದಾರಿ ಮಧ್ಯ ಮಳೆ ನೀರು ಸಂಗ್ರಹಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
Advertisement
ರಾಷ್ಟ್ರೀಯ ಹೆದ್ದಾರಿ ಇರುವ ಹಿನ್ನೆಲೆಯಲ್ಲಿ ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಿಂದ ಪ್ರತಿನಿತ್ಯ ಕಲ್ಬುರ್ಗಿ ಮುಂಬೈ, ಹೈದರಾಬಾದ್ ಸೇರಿದಂತೆ ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಇರುವ ಏಕೈಕ ಸಂಪರ್ಕ ಮಾರ್ಗ ಇದಾಗಿದೆ. ಪ್ರತಿ ವರ್ಷ ಮಳೆಗಾಲ ಅವಧಿಯಲ್ಲಿ ವಾಹನ ಸಂಚಾರಿಗಳು ಈ ಸಮಸ್ಯೆ ಎದುರಿಸಬೇಕಾದ ಅನಿವಾರ್ಯತೆ ಇದೆ.
Related Articles
Advertisement
ಸಮಸ್ಯೆ ಇರುವುದು ಸತ್ಯ. ತಾತ್ಕಾಲಿಕವಾಗಿ ಅನೇಕ ಬಾರಿ ಕೈಗೊಂಡರೂ ಮತ್ತೆ ಯಥಾಸ್ಥಿತಿಗೆ ತಲುಪಿತ್ತದೆ. ಆ ವಿಷಯ ಗಂಭೀರ ಪರಿಗಣಿಸಿರುವ ಶಾಸಕ ರಾಜಶೇಖರ ಪಾಟೀಲ ಅವರು ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರವಾಸಿ ಮಂದಿರದಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ಬೈಪಾಸ್ ವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಸಂಬಂಧ ಎಚ್.ಕೆ.ಆರ್.ಡಿ.ಬಿಯಿಂದ ರೂ.3.5ಕೋಟಿ ಬಿಡುಗಡೆಗೊಳಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಬಳಿಕ ಕಾಮಗಾರಿ ಶೀಘ್ರ ಆರಂಭಗೊಳ್ಳದೆ.•ಅಪ್ಸರಮಿಯ್ಯ,
ಪುರಸಭೆ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಗಾದಾ ಪೆಟ್ರೊಲ್ ಬಂಕ್ ಮುಂಭಾಗದ ರಸ್ತೆ ಮೇಲೆ ಮಳೆ ನೀರು ಸಂಗ್ರಹಗೊಂಡಾಗಲೊಮ್ಮೆ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಆ ಮೂಲಕ ತೆರಳುವಾಗ ರಸ್ತೆ ಮಧ್ಯದ ಗುಂಡಿ ಗೊತ್ತಾಗದೇ ಅದೂ ರಾತ್ರಿ ಹೊತ್ತು ಬೈಕ್ ಸಮೇತ ನೀರಲ್ಲಿ ಬಿದ್ದಿದ್ದೇನೆ. ಆ ವೇಳೆ ಭಾರಿ ವಾಹನ ಹಾಯ್ದರೆ ತೊಂದರೆಯಾಗುತ್ತಿತ್ತು. ಸಂಬಂಧಪಟ್ಟವರು ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಬೇಕು.
•ಆಜಮ್ ಮತೀನ್
ಜೆಡಿಎಸ್ ನಗರ ಘಟಕ ಅಧ್ಯಕ್ಷ