Advertisement

ಮಕ್ಕಳ ಕೌಶಲ್ಯ ಹೊರಹಾಕಲು ವಸ್ತು ಪ್ರದರ್ಶನ ಅವಶ್ಯ

04:52 PM Feb 20, 2020 | Naveen |

ಹುಮನಾಬಾದ: ಪಟ್ಟಣದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆ ಎಂದು ಜನರು ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಭಗತಸಿಂಗ್‌ ಶಾಲೆ ಮಕ್ಕಳು ಪ್ರತಿ ವರ್ಷ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಸಾಹಸ, ಜ್ಞಾನದ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಸಂಸ್ಥೆ ಮುಖಂಡ ಅಂಕುಶ ಗೋಖಲೆ ಹೇಳಿದರು.

Advertisement

ಪಟ್ಟಣದ ಭಗತಸಿಂಗ್‌ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಶಾಲಾ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಜ್ಞಾನ, ಚಿತ್ರಕಲೆ, ಇತಿಹಾಸ, ಕರಕುಶಲ ಮುಂತಾದ ವಿಭಾಗಗಳ ಕುರಿತು ವಿದ್ಯಾರ್ಥಿಗಳು ತಯಾರಿಸಿದ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿನ ಕೌಶಲ್ಯ ಹೊರಹಾಕುವ ನಿಟ್ಟಿನಲ್ಲಿ ಮಕ್ಕಳ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಮಕ್ಕಳೇ ಖುದ್ದು ವಸ್ತುಗಳನ್ನು ತಯಾರಿಸಿಕೊಂಡು ಬಂದು ಅವುಗಳ ವಿವರಣೆ ನಿಡುತ್ತಿದ್ದಾರೆ. ಅಲ್ಲದೆ, ಕನ್ನಡ ಮಾಧ್ಯಮದ ಮಕ್ಕಳು ಗ್ರಾಮೀಣ ಭಾಗದ ಜೀವನಶೈಲಿ ಕುರಿತು ಏರ್ಪಡಿಸಿದ್ದ ಪರಿಕಲ್ಪನೆ ನೋಡುಗರ ಗಮನ ಸೆಳೆಯುತ್ತಿದೆ ಎಂದರು.

ಗಮನ ಸೆಳೆದ ಪ್ರದರ್ಶನ: ರಾಷ್ಟ್ರ ನಿರ್ಮಾಣಕ್ಕೆ ವಿಜ್ಞಾನ, ತಂತ್ರಜ್ಞಾನ ಮತ್ತು ಗಣಿತ ಎಂಬ ಮುಖ್ಯ ವಿಷಯದಡಿ ಆರೋಗ್ಯ ಮತ್ತು ಯೋಗಕ್ಷೇಮ, ಸಂಪನ್ಮೂಲ ನಿರ್ವಹಣೆ ಮತ್ತು ಆಹಾರ ಭದ್ರತೆ, ತ್ಯಾಜ್ಯ ನಿರ್ವಹಣೆ ಹಾಗೂ ಮಳೆ ನೀರು ಸಂರಕ್ಷಣೆ, ಸಾರಿಗೆ ಮತ್ತು ಸಂಪರ್ಕ, ಡಿಜಿಟಲ್‌ ಮತ್ತು ತಂತ್ರಜ್ಞಾನ ಪರಿಹಾರಗಳು ಹಾಗೂ ಗಣಿತ ಶಾಸ್ತ್ರದಿಂದ ವಿನ್ಯಾಸಗೊಳಿಸುವಿಕೆ ಎಂಬ ಉಪ ವಿಷಯಗಳ ಕುರಿತು ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ವಿಜ್ಞಾನ ಮಾದರಿ ಸಿದ್ಧಪಡಿಸಿ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದರು.

ಹಳ್ಳಿಯ ಸೊಗಡು ಪರಿಕಲ್ಪನೆಯಲ್ಲಿ ಕನ್ನಡ ವಿಭಾಗದ ವಿದ್ಯಾರ್ಥಿಗಳು ನಡೆಸಿದ ಪ್ರದರ್ಶನ, ವಸ್ತು ಪ್ರದರ್ಶನಕ್ಕೆ ಬಂದ ಎಲ್ಲ ಜನರಿಗೆ ಇಷ್ಟವಾಯಿತು. ವಿದ್ಯಾರ್ಥಿಗಳ ಗ್ರಾಮೀಣ ಭಾಗದಲ್ಲಿ ಮಾತನಾಡುವ ಪರಿ ಎಲ್ಲರನ್ನೂ ನಗಿಸುವಂತೆ ಮಾಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next