Advertisement

ಡಿಸಿ ಕಚೇರಿ ಮುತ್ತಿಗೆಗೆ ರೈತ ಸಂಘ ನಿರ್ಧಾರ

03:02 PM Apr 14, 2019 | Naveen |

ಹುಮನಾಬಾದ: ಕಬ್ಬಿನ ಬಾಕಿ ಪಾವತಿಸುವುದು ಒಳಗೊಂಡಂತೆ ಐದಕ್ಕೂ ಅ ಧಿಕ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಏ.18ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.

Advertisement

ಪಟ್ಟಣದ ಭವಾನಿ ದೇವಸ್ಥಾನದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಾವತಿಸದೇ ಬಾಕಿ ಉಳಿದುಕೊಂಡ ಕಬ್ಬಿನ ಹಣ, ತೊಗರಿ ಬೆಂಬಲ
ಬೆಲೆ, ಬರ ಪರಿಹಾರ, ಬೆಳೆ ವಿಮೆ, ದನ ಕರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು ಒಳಗೊಂಡಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನಡೆಸಲಾಗುವ ಜಿಲ್ಲಾ
ಧಿಕಾರಿ ಕಚೇರಿಗೆ ಮುತ್ತಿಗೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸಾವಿರಕ್ಕೂ ಅ ಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಮೇವು ಖರೀದಿ ಗುತ್ತಿಗೆದಾರರಿಗೆ ವಹಿಸಿಕೊಡುವುದರಿಂದ ಸರ್ಕಾರದ ಹಣ ಅಧಿಕಾರಿ ಮತ್ತು ಗುತ್ತಿಗೆದಾರರ ಜೇಬಿಗೆ ಭರ್ತಿ
ಆಗುತ್ತಿದೆ. ಆದ್ದರಿಂದ ಈ ಬಾರಿ ನೇರವಾಗಿ ರೈತರ ಖಾತೆಗೆ ಜಮಾ ಆಗವಂತೆ ನೋಡಿಕೊಳ್ಳಲು ಮುತ್ತಿಗೆ ಸಂದರ್ಭಧಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ರೈತರ ಪಾಲಿನ ಭಯೋತ್ಪಾದಕ: ಚಂದ್ರಶೇಖರ ಜಮಖಂಡಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರತಿ ಟನ್‌ ಕಬ್ಬಿಗೆ 2,200 ರೂ. ಪಾವತಿಸಲಾಗುವುದು ಎಂದು
ಹೇಳಿ ಈಶ್ವರ ಖಂಡ್ರೆ ಮೋಸ ಮಾಡಿದ್ದಾರೆ. ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ವಾರ್ಷಿಕ ಮಹಾಸಭೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳದಿರುವ ಕುರಿತು ಪ್ರಶ್ನಿಸಿದಾಗ ರೈತರನ್ನೇ
ಬೆದರಿಸಿದ್ದಾರೆ. ಖಂಡ್ರೆ ಒಂದು ರೀತಿಯಲ್ಲಿ ರೈತರ ಪಾಲಿಗೆ ಭಯೋತ್ಪಾದಕರಾಗಿದ್ದಾರೆ. ಅಂಥವರಿಗೆ ಜಿಲ್ಲೆಯ ರೈತರು ಹಾಲಿ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.ಸಂಘದ ಜಿಲ್ಲಾ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದೆಲ್ಲರೂ
ಹಾಗೆ ಮಾಡಬೇಕೆಂದು ಧ್ವನಿಗೂಡಿಸಿದರು.

ತಾರಕಕ್ಕೇರಿದ ವಾಗ್ವಾದ: ಈ ಮಧ್ಯ ಸಂಘದ ಬಸವಕಲ್ಯಾಣ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಜಮಖಂಡಿ ಮಾತನಾಡಿ, ಸಂಘದ ಜಿಲ್ಲಾ ಘಟಕ ಅಧ್ಯಕ್ಷರು ಸಂಘವನ್ನು ತಮ್ಮ
ಖಾಸಗಿ ಎಂದು ಭಾವಿಸಿ, ತಮಗೆ ಬೇಕಾದವರಿಗೆ ಮಾತ್ರ ಸೂಕ್ತ ಸ್ಥಾನಮಾನ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

ಸಂಘದ ಎಲ್ಲ ತಾಲೂಕು ಘಟಕಗಳು ಒಂದೆಡೆಯಾದರೆ ಭಾಲ್ಕಿ ಮೂಲದವರಾದ ಜಿಲ್ಲಾ ಘಟಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಸರ್ಕಾರದಲ್ಲಿ ಅಧಿಕಾರದಲ್ಲಿರುವವರ ಕುರಿತು ಚಕಾರ ಎತ್ತದೆ ಮೌನಕ್ಕೆ ಶರಣಾಗುವ ನಮ್ಮೆಲ್ಲರನ್ನು ಮೌನವಾಗಿ ಕೊಲ್ಲುತ್ತಿದ್ದಾರೆ. ಇಂಥ ಅಧ್ಯಕ್ಷರಿಂದ ರೈತರ ಸಮಸ್ಯೆ ಬಗೆಹರಿಯುವುದು ದೂರದ ಮಾತು, ಮತ್ತಷ್ಟು ಉಲ್ಬಣಗೊಳ್ಳುತ್ತವೆ. ಮೊದಲು ಅವರನ್ನು ಹುದ್ದೆಯಿಂದ ಉಚ್ಛಾಟಿಸುವಂತೆ ಆಗ್ರಹಿಸಿದರು. ಪರಸ್ಪರ ನಡೆದ ವಾಗ್ವಾದ ಕೈಕೈ
ಮಿಲಾಯಿಸುವ ಹಂತಕ್ಕೆ ತಲುಪಿದಾಗ ಸಂಘದ ಹುಮನಾಬಾದ ತಾಲೂಕು ಅಧ್ಯಕ್ಷ ಸತೀಶ ನನ್ನೂರೆ ಪರಿಸ್ಥಿತಿ ಶಾಂತಗೊಳಿಸಿದರು.

ರಾಜ್ಯ ಉಪಾಧ್ಯಕ್ಷ ಖಾಸೀಂ ಅಲಿ, ಔರಾದ ತಾಲೂಕು ಅಧ್ಯಕ್ಷ ಶ್ರೀಮಂತರಾವ್‌ ಬಿರಾದಾರ, ಸಿದ್ರಾಮಪ್ಪ ಬಾಲಕುಂದೆ, ಸಿದ್ದಣ್ಣ ಭೂಶೆಟ್ಟಿ, ಗುರುಲಿಂಗಪ್ಪ ಮೇಲ್ದೊಡ್ಡಿ, ವಿಶ್ವನಾಥರಾವ್‌ ಚಿಲಶೆಟ್ಟಿ, ಕರಬಸಪ್ಪ ಮಲಶೆಟ್ಟಿ, ಟಿಮೇತ್ರೆ, ಜಗನ್ನಾಥ ಪಾಂಚಾಳ, ವೈಜಪ್ಪ ನಿಡೋದೆ, ಅಣ್ಣಾರಾವ್‌ ಚಿಕ್ಕಪಾಟೀಲ, ಚನ್ನಬಸಪ್ಪ ಹುಚ್ಚೆ, ಎಂ.ಡಿ.ಖಾಜಾ ಮೈನೋದ್ದೀನ್‌, ರಿಯಾಜ್‌
ಪಟೇಲ ಇದ್ದರು.

ನನ್ನ ಅಧಿಕಾರ ಅವಧಿಯಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಸಂಘದ ಜಿಲ್ಲಾ ಅಧ್ಯಕ್ಷನಾಗಿ ನಾನೇ ಮುಂದುವರಿಯಬೇಕೆಂಬ ಹುಚ್ಚು ಖಂಡಿತಾ ನನಗಿಲ್ಲ, ಏ.18ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಬಳಿಕ ಎಲ್ಲ ತಾಲೂಕು ಘಟಕಗಳಿಗೆ ನೂತನ ಅಧ್ಯಕ್ಷರನ್ನು ನಿಯೋಜಿಸಿದ ನಂತರ ಖುದ್ದು ನಾನೇ ನಿಂತು ಜಿಲ್ಲಾ ಘಟಕಕ್ಕೆ ಹೊಸ ಅಧ್ಯಕ್ಷರನ್ನು ನಿಯೋಜಿಸುತ್ತೇನೆ.
ಮಲ್ಲಿಕಾರ್ಜುನ ಸ್ವಾಮಿ,
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next