Advertisement

ದಾಸಿಮಯ್ಯ ವಚನ ಸಾರ್ವಕಾಲಿಕ

04:42 PM Apr 11, 2019 | Naveen |

ಹುಮನಾಬಾದ: ಆದ್ಯ ವಚನಕಾರ ದಾಸಿಮಯ್ಯನವರು ಹನ್ನೆರಡನೇ ಶತಮಾನದಲ್ಲಿ ಮೊಟ್ಟ ಮೊದಲು ಶರಣರ ಚಳವಳಿ ಕಟ್ಟುವ
ಮೂಲಕ ಮಾನವೀಯ ಮೌಲ್ಯ ಬಿತ್ತಿದ ಶ್ರೇಷ್ಠ ವಚನಕಾರ ಎಂದು ಸರ್ಕಾರಿ ಪದವಿ ಕಾಲೇಜು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಶಾಂತಕುಮಾರ ಬನಗುಂಡಿ ಹೇಳಿದರು.

Advertisement

ಮಹಾವಿದ್ಯಾಲಯದಲ್ಲಿ ಬುಧವಾರ ನಡೆದ ದೇವರ ದಾಸಿಮಯ್ಯ ಜಯಂತಿಯಲ್ಲಿ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ವರ್ಗ, ವರ್ಣ, ಲಿಂಗ ಅಸಮಾನತೆ ಹೋಗಲಾಡಿಸಿ ಸಮಾನತೆ ತಂದವರು. ಬಸವಣ್ಣ ಸೇರಿದಂತೆ ಇತರೆ ವಚನಕಾರರಿಗೆ ದಾಸಿಮಯ್ಯ ಪ್ರೇರಕ ಶಕ್ತಿ ಆಗಿದ್ದರು. ಅವರ ವಚನಗಳು ಸಮಾಜಕ್ಕೆ ಅತ್ಯಂತ ಅವಶ್ಯ ಎಂದರು.

ಕನ್ನಡ ಸ್ನಾತ್ತಕೋತ್ತರ ವಿಭಾಗದ ಸಂಯೋಜಕ ಡಾ| ಗವಿಸಿದ್ಧಪ್ಪ ಪಾಟೀಲ
ಮಾತನಾಡಿ, ದಾಸಿಮಯ್ಯ ಪ್ರಥಮ ಶರಣ. ನೇಕಾರರು, ಹಟಗಾರರು, ಜೇಡರು ಹಾಗೂ ದೇವಾಂಗ ಜನಾಂಗ ವೃತ್ತಿಯಿಂದ ನೇಕಾರಿಕೆ ಮಾಡಿಕೊಂಡು ಬಂದಿದ್ದಾರೆ. ಆ ಪರಂಪರೆ ಜೇಡರ ದಾಸಿಮಯ್ಯನಿಂದ ಫ.ಗು. ಹಳಕಟ್ಟಿ
ಮತ್ತು ಪ್ರಥಮ ಆಧುನಿಕ ವಚನಕಾರ ಆದಿಮಾತೆಪ್ಪನವರು ಈ ಜನಾಂಗದ ಪ್ರಮುಖ ಶರಣರಾಗಿದ್ದಾರೆ. ಅವರ ವಚನಗಳು ಸಾರ್ವಕಾಲಿಕ ಎಂದರು.

ಪ್ರಾಚಾರ್ಯ ಡಾ| ವೀರಣ್ಣ ತುಪ್ಪದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣರ ವಿಚಾರಗಳು ಅತ್ಯಂತ ಯೋಗ್ಯವಾಗಿವೆ. ನಡೆ-ನುಡಿಗಳೆರಡೂ ಒಂದೇಯಾಗಿದ್ದರಿಂದ ಅವರ ವಚನಗಳು ವಿಶ್ವ ಮೌಲ್ಯ ಪಡೆಯಲು ಸಾಧ್ಯವಾಯಿತು ಎಂದರು. ಡಾ| ಮಲ್ಲಿಕಾರ್ಜುನ ಬಾಳಿ, ಗ್ರಂಥಪಾಲಕ ಟಿ.ರಾಜಕುಮಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next