Advertisement
ಪಟ್ಟಣದ ತಿರುಮಲಾ ವಾಣಿಜ್ಯ ಸಂಕಿರ್ಣದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವಾನಂದ ಮಂಠಾಳ್ಕರ್ ಅವರ 54ನೇ ಜನ್ಮದಿನ ನಿಮಿತ್ತ ಗೆಳೆಯರ ಬಳಗದ ಪದಾಧಿಕಾರಿಗಳು ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಪತ್ರಕರ್ತ ದುರ್ಯೋಧನ ಹೂಗಾರ ಮಾತನಾಡಿ, ಸಾರ್ವಜನಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಒಂದು ಲೇಖನ ಪ್ರಕಟವಾದ ಮಾತ್ರಕ್ಕೆ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸದೇ, ನಂತರದ ಬೆಳವಣಿಗೆಗಳನ್ನು ಬೆನ್ನಟ್ಟಿದಾಗಲೇ ವಿಶೇಷ ಲೇಖನ ಪ್ರಕಟಿಸಿದ್ದಕ್ಕೂ ಸಾರ್ಥಕವಾಗುತ್ತದೆ. ಅಂಥ ಪ್ರಯತ್ನ ಈ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅಂಥ ಪ್ರಯತ್ನ ಈ ಭಾಗದ ವರದಿಗಾರರಿಂದ ಆಗಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.
ಬಹುಭಾಷಾ ವರದಿಗಾರ ಸಂಜಯ್ ದಂತಕಾಳೆ ಮಾತನಾಡಿ, ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಗಳು ಪತ್ರಕರ್ತರನ್ನು ಕೆಲಸ ಇರುವವರೆಗೆ ಮಾತ್ರ ಗೌರವಿಸಿ, ನಂತರ ಕೈ ಚೆಲ್ಲುವ ಮನೋಭಾವ ಬಿಡಬೇಕು. ಆ ಕಾರಣಕ್ಕಾಗಿ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು ಹಾಗೂ ಪತ್ರಕರ್ತರ ಮಧ್ಯದ ಬಾಂಧವ್ಯ ಕುಸಿಯುತ್ತಿದೆ ಎಂದರು.
ಪತ್ರಕರ್ತ ಅರವಿಂದ ಪಾಟೀಲ, ರಮೇಶರೆಡ್ಡಿ ಉಸ್ತೇಲಿ, ರಾಜಪ್ಪ ಪೂಜಾರಿ, ತಾಲೂಕು ಪಂಚಾಯಿತಿ ಸದಸ್ಯ ಶ್ರೀಮಂತ ಪಾಟೀಲ, ಪ್ರಶಾಂತ ಹೊಸಮನಿ, ವೆಂಕಟೇಶ ಜಾಧವ್, ದಿಲೀಪಕುಮಾರ ಮೇತ್ರೆ ಮತ್ತಿತರರು ಮಾತನಾಡಿ, ಎರಡು ದಶಕಗಳಿಂದ ಪತ್ರಿಕಾ ದಿನ ಆಚರಿಸುತ್ತಿರುವ ಶಿವಾನಂದ ಮಂಠಾಳ್ಕರ್ ಕಾರ್ಯವನ್ನು ಶ್ಲಾಘಿಸಿದರು.
ಜನ್ಮದಿನ ನಿಮಿತ್ತ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವಾನಂದ ಮಂಠಾಳ್ಕರ್ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಪತ್ರಕರ್ತರ ಸ್ಥಾನ ಅತ್ಯಂತ ಶ್ರೇಷ್ಠವಾದದ್ದು. ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದಾಗ ಕೇವಲವಾಗಿ ಮಾತನಾಡದೇ ಧನಾತ್ಮಕವಾಗಿ ಸ್ವೀಕರಿಸಿ, ಗೌರವಿಸಬೇಕು. ತಮ್ಮನ್ನು ತಾವು ಸಂಪೂರ್ಣವಾಗಿ ಸಮಾಜಕ್ಕೆ ಸಮರ್ಪಿಸಿಕೊಂಡ ಅವರ ಸೇವೆ ಗೌರವಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದರು.
ಗೆಳೆಯರ ಬಳಗದ ಅಧ್ಯಕ್ಷ ಝೆರೆಪ್ಪ ಮಣಗಿರೆ, ಗೌರವಾಧ್ಯಕ್ಷ ಡಿ.ಸಿ.ಬಿರಾದಾರ, ಕಾರ್ಯದರ್ಶಿ ಪ್ರಭಾಕರ ನಾಗರಾಳೆ, ಪ್ರಕಾಶ ತಾಳಮಡಗಿ, ಶಿವಾರೆಡ್ಡಿ ಸೇಡೊಳ, ಅಣ್ಣಾರಾವ್ ಪುರುಶೋತ್ತಮ, ವಿಠ್ಠಲ್ ಮೈಕೆ, ಸಂಗಪ್ಪ ಪಾಂಚಾಳ, ರಾಜೇಶ ಮಂಠಾಳ್ಕರ್, ರಾಜು ಭಂಡಾರಿ, ಸೂರ್ಯಕಾಂತ ಮಠಪತಿ ಮತ್ತಿತರರು ಇದ್ದರು.