Advertisement

ವೇದ-ಶಾಸ್ತ್ರಗಳಿಗಿಂತ ವಚನ ಸಾಹಿತ್ಯವೇ ಶ್ರೇಷ್ಠ: ಅನ್ನಪೂರ್ಣ

03:47 PM May 12, 2019 | Team Udayavani |

ಹುಮನಾಬಾದ: ವೇದ, ಶಾಸ್ತ್ರಗಳಿಗಿಂತ ವಚನ ಸಾಹಿತ್ಯ ಶ್ರೇಷ್ಟ ಎಂದು ಬೀದರ್‌ ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ಹೇಳಿದರು.

Advertisement

ಪಟ್ಟಣದ ಗೃಹ ನಿರ್ಮಾಣ ಮಂಡಳಿಯ ಬಯಲು ರಂಗಮಂದಿರದಲ್ಲಿ ಡಾ| ಎಸ್‌.ಆರ್‌.ಮಠಪತಿ ಅವರ ಆತಿಥ್ಯದಲ್ಲಿ ಏರ್ಪಡಿಸಿದ್ದ 197ನೇ ಬಸವಜ್ಯೋತಿ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಆವರು ಆಶೀರ್ವಚನ ನೀಡಿದರು.

ನಾವ್ಯಾರೂ ಅನ್ಯರನ್ನು ತಿದ್ದುವ ಅಗತ್ಯವಿಲ್ಲ. ತಮ್ಮನ್ನು ತಾವು ಅರಿತು ನಡೆದರೆ ತಾವೇ ದೇವರಾಗುತ್ತಾರೆ. ಮಹಾತ್ಮ ಗೌತಮ ಬುದ್ಧ ಮತ್ತು ಮಹಾತ್ಮ ಬಸವೇಶ್ವರು ಅಂತರಂಗ ಶುದ್ಧಿಗಾಗಿ ಹೋರಾಟ ನಡೆಸಿದರೆ, ಡಾ|ಅಂಬೇಡ್ಕರ್‌ ಅವರು ಬಹಿರಂಗ ಶುದ್ಧಿಗಾಗಿ ಹೋರಾಟ ನಡೆಸಿದರು ಎಂದು ಹೇಳಿದರು.

ದ್ವಿಗುಣಗೊಳ್ಳುತ್ತದೆ ಎಂಬ ಅಪನಂಬಿಕೆಯಿಂದ ಅಕ್ಷಯ ಚತುರ್ಥಿಯಂದು ಬಂಗಾರ ಖರೀದಿಸುವವರಿಗೆ ನಮ್ಮಲ್ಲೇನು ಕೊರತೆ ಇಲ್ಲ. ಖರೀದಿಸಿದ್ದೆಲ್ಲವೂ ದ್ವಿಗುಣ ಆಗುವ ಹಾಗಿದ್ದರೆ ಎಲ್ಲರೂ ಅದನ್ನೇ ಮಾಡುತ್ತಿದ್ದರು. ಮತ್ತೂಂದೆಡೆ ಓದಿದವರು ಅನುಭಾವಿಗಳು ಓದದವರು ಪಿಶಾಚಿಗಳೆಂದು ಹೇಳಲಾಗಿದೆ ಎಂದರು.

ಅರಿತವರು ಆಚರಿಸುವ ಮೂಲಕ ಸಾರ್ಥಕ ಜೀವನ ಸಾಗಿಸುತ್ತಾರೆ. ಉಪದೇಶಕ್ಕಿಂತ ಸ‌ರಳವಾಗಿ ಈ ದೇಶದಲ್ಲಿ ಬೇರೇನೂ ಸಿಗುವುದಿಲ್ಲ. ಇಷ್ಟಲಿಂಗ ಪೂಜೆ ಹಾಗೂ ಬಸವತತ್ವ ಆಲಿಕೆಯಿಂದ ಮನುಷ್ಯನ ದೇಹದ ಬಿಳಿ ರಕ್ತಕಣಗಳು ವೃದ್ಧಿಯಾಗುತ್ತವೆ ಎಂದು ಹೇಳಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಪ್ರಧಾನ ಕಾರ್ಯದರ್ಶಿ ಡಾ|ಬಸವರಾಜ ಬಲ್ಲೂರ ವಿಶೇಷ ಉಪನ್ಯಾಸ ನೀಡಿ, ನೆಲ-ಜಲ-ಜನ ತ್ರಿಜೀವಾಳ ಪೋಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ವಚನ ಸಾಹಿತ್ಯವನ್ನು ಹಚ್ಚಿಕೊಂಡವರಿಗೆ ಅದು ಹಚ್ಚಿಕೊಳ್ಳುತ್ತದೆ. ತನ್ಮೂಲಕ ಅಂತರಂಗ ಶುದ್ಧೀಕರಿಸುತ್ತದೆ ಎಂದರು.

ಶ್ರೀಗುರು ಬಸವೇಶ್ವರ ಲಿಂಗಾಯತ ಅಭಿವೃದ್ಧಿ ಸಂಘದ ಅಧ್ಯಕ್ಷ ಡಾ|ಸಿದ್ದಲಿಂಗಪ್ಪ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಮಡಿವಾಳಯ್ಯಸ್ವಾಮಿ ಅಧ್ಯಕ್ಷತೆ ವಹಿಸಿ, ವಚನ ಪಠಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕೋಶಾಧ್ಯಕ್ಷ ಟಿ.ಎಂ.ಮಚ್ಚೆ ವೇದಿಕೆಯಲ್ಲಿದ್ದರು.

ಸಾಹಿತಿಗಳಾದ ಡಾ|ಎಸ್‌ಎಸ್‌.ಯಾಳವಾರ, ಎಂ.ಜಿ.ಹವಾಲ್ದಾರ್‌, ಶ್ರೀಕಾಂತ ಸೂಗಿ ಗಣ್ಯರಾದ ಶರದ್‌ ನಾರಾಯಣಪೇಟಕರ್‌, ಭೀಮಣ್ಣ ದೇವಣಿ, ಶಂಕರ ಮುಗಳಿ, ಮಲ್ಲಿಕಾರ್ಜುನ ರಟಕಲೆ, ಪುರಸಭೆ ಮಾಜಿ ಉಪಾಧ್ಯಕ್ಷೆ ಪಾರ್ವತಿ ಶೇರಿಕಾರ ಇದ್ದರು.

ಶೋಭಾ ಔರಾದೆ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಡಾ|ಎಸ್‌.ಆರ್‌.ಮಠಪತಿ ಸ್ವಾಗತಿಸಿದರು. ಬಸವಸೇವಾ ಪ್ರತಿಷ್ಠಾನದ ಅಧ್ಯಕ್ಷ ಚನ್ನಬಸಪ್ಪ ವಡ್ಡನಕೇರಿ ಪ್ರಾಸ್ತಾವಿಕ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಮಲ್ಲಿಕಾರ್ಜುನ ಸಂಗಮಕರ್‌ ನಿರೂಪಿಸಿದರು. ಸಚ್ಚಿದಾನಂದ ಮಠಪತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next