Advertisement
ಪಟ್ಟಣದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೆಲವು ಕಡೆಗಳಲ್ಲಿ ಕಡಿಮೆ ವಿದ್ಯುತ್ ಬಳಸುತ್ತಿದ್ದರೂ ಕೂಡ ಹೆಚ್ಚು ಬಿಲ್ ನೀಡಲಾಗುತ್ತಿದೆ ಎಂದು ಪಿಡಿಒಗಳು ಹೇಳುತ್ತಿದ್ದಾರೆ. ಅಲ್ಲದೆ, ಕುಡಿಯುವ ನೀರಿಗಾಗಿ ಕಡಿಮೆ ಮೋಟಾರ್‌ಗಳನ್ನು ಬಳಸುತ್ತಿದ್ದರೂ ಕೂಡ ಹೆಚ್ಚು ಸಂಖ್ಯೆ ತೊರಿಸಲಾಗುತ್ತಿದ್ದು, ಯಾವ ಕಾರಣಕ್ಕೆ ಹೆಚ್ಚು ಬಿಲ್ ಬರುತ್ತಿದೆ ಎಂದು ಮಾಹಿತಿ ಕೇಳಿದರು.
Related Articles
Advertisement
ಎಲ್‌ಇಡಿ ಬಗ್ಗೆ ಮಾಹಿತಿ ನೀಡಿ: ಗ್ರಾಮೀಣ ಭಾಗದ ರಸ್ತೆಗಳಲ್ಲಿ ಹಾಕಿರುವ ವಿದ್ಯುತ್ ದೀಪಗಳ ಕುರಿತು ಎಲ್ಲ ಗ್ರಾಮ ಪಂಚಾಯತ ಅ ಧಿಕಾರಿಗಳು ಜೆಸ್ಕಾಂ ಇಲಾಖೆಗೆ ಪತ್ರ ಬರೆದು ಮಾಹಿತಿ ನೀಡಿದರೆ ವಿದ್ಯುತ್ ಬಿಲ್ ಕಡಿಮೆ ಮಾಡಲಾಗುವುದು, ಅಲ್ಲದೆ, ಎಲ್ ಇಡಿ ಬಳಸುವರಿಗೆ ಯುನಿಟ್‌ಗೆ ಒಂದು ರೂ. ಕಡಿಮೆ ಆಗಲಿದೆ. ಆದರೆ, ಎಲ್ಲ ಕಡೆಗಳಲ್ಲಿ ಎಲ್ ಇಡಿ ದೀಪಗಳನ್ನು ಬಳಸುತ್ತಿಲ್ಲ. ಕೆಲವುಗಡೆಗಳಲ್ಲಿ ಹಳೆ ಮಾದರಿಯ ದೀಪಗಳನ್ನು ಬಳಸುತ್ತಿದ್ದಾರೆ. ಪಂಚಾಯತ ಕಡೆಯಿಂದ ಹೊಸ ದೀಪ ಹಾಳಾದ ಕೂಡಲೆ ಜನರು ಖುದ್ದು ಬದಲಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಈ ಮಧ್ಯೆ ಮಾಣಿಕನಗರ ಪಿಡಿಒ ಹಣಮಂತ ಮಾತನಾಡಿ, ಗ್ರಾಮೀಣ ಭಾದಲ್ಲಿ ದೀಪ ಹಾಕಿಕೊಳ್ಳುವ ದಾನಿಗಳು ಇಲ್ಲ. ಯಾವಕಡೆ ಸಮಸ್ಯೆ ಇರುತ್ತದೆ ಅಲ್ಲಿ ಪಂಚಾಯತ ಕಡೆಯಿಂದನೆ ದೀಪ ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಖಾತೆಗೆ ಬಂದಷ್ಟು ನೀಡಬೇಕೆ?: ಈ ಮಧ್ಯೆ ಉಡಬಾಳ ಪಿಡಿಒ ಮಾತನಾಡಿ, ವಿದ್ಯುತ್ ಇಲಾಖೆಯವರು ಕಚೇರಿಗೆ ಬಂದು ವಿದ್ಯುತ್ ಬಿಲ್ ಪಾವತಿಗಾಗಿ ಖಾತೆಗೆ ಬಂದ ಹಣ ನೀಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಖಾತೆಗೆ ಬಂದ ವಿದ್ಯುತ್ ಅನುದಾನ ಪೂರ್ಣ ಪ್ರಮಾಣದ ಹಣ ನೀಡಬೇಕೆ ಎಂದು ಪ್ರಶ್ನಿಸಿದರು. ಕಡಿಮೆ ವಿದ್ಯುತ್ ಬಿಲ್ ಬಂದರೂ ಕೂಡ ಪೂರ್ಣ ಹಣ ಯಾವ ಕಾರಣಕ್ಕೆ ನೀಡಬೇಕು ಎಂದು ವಿಚಾರಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಬಿಲ್ ಪಾವತಿಗಾಗಿ ಬಂದ ಅನುದಾನ ನೀಡುವುದರಲ್ಲಿ ಯಾವ ಸಮಸ್ಯೆ ಇದೆ? ಹೆಚ್ಚಿನ ಹಣ ಪಾವತಿ ಆದರೆ, ಅದು ಮುಂದಿನ ಬಿಲ್‌ನಲ್ಲಿ ಕಡಿಮೆಯಾಗುತ್ತದೆ ಎಂದು ವಿವರಿಸಿದರು. ವ್ಯವಸ್ಥಾಪಕಿ ಸವಿತಾ ಮಾತನಾಡಿ, ಪ್ರತಿವರ್ಷ ವಿದ್ಯುತ್ ಬಿಲ್ ಬೇಡಿಕೆ ಹೆಚ್ಚಾಗುತ್ತಿದೆ. ಲಕ್ಷಗಳಲ್ಲಿ ಬರುತ್ತಿದ್ದ ಬೇಡಿಕೆ ಇದೀಗ ಕೋಟಿಗಳಲ್ಲಿ ಬರುತ್ತಿದ್ದು, ಕಳೆದ ಐದುವರ್ಷಗಳ ವಿವರಣೆ ನೀಡಿ ಎಂದು ಹೇಳಿದರು.