Advertisement

ಸ್ಥಳೀಯ ಮೀನಿಗೆ ಹೆಚ್ಚಿದ ಬೇಡಿಕೆ-ಖರೀದಿ ಜೋರು

01:18 PM Oct 25, 2019 | Naveen |

ಶಶಿಕಾಂತ ಕೆ.ಭಗೋಜಿ
ಹುಮನಾಬಾದ: ಬಸ್‌ ನಿಲ್ದಾಣ ಮುಂಭಾಗದ ಓಣಿಯೊಂದರಲ್ಲಿ ಕಳೆದ ಹಲವು ದಶಕಗಳಿಂದ ಅತ್ಯಲ್ಪ ಪ್ರಮಾಣ ಮಾರಾಟವಾಗುತ್ತಿದ್ದ ಮೀನು ಕಳೆದ ತಿಂಗಳಿಂದ ಸೇವಿಸುವವರ ಬೇಡಿಕೆ ಹೆಚ್ಚಾಗಿದೆ. ಜತೆಯಲ್ಲಿ ಅವುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳ ಸಂಖ್ಯೆ ಸಹ ಹಿಂದೆಂದಿಗಿಂತ ಈಗ ಅಧಿಕವಾಗಿದೆ.

Advertisement

ಪಟ್ಟಣದ ಬಸ್‌ ನಿಲ್ದಾಣ ಮುಂಭಾಗದ ಓಣಿ ಮೂಲಕ ಕೋಳಿವಾಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಒಬ್ಬಿಬ್ಬರು ಮೀನು ವ್ಯಾಪಾರಿಗಳು ರವಿವಾರ ಮತ್ತು ಬುಧವಾರ ಸಂತೆಯಂದು 40ರಿಂದ50 ಕೆಜಿ ಮಾತ್ರ ಮಾರಾಟ ಮಾಡುತ್ತಿದ್ದರು. ಅದರೆ ಅಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣವಾದ ಹಿನ್ನೆಲೆಯಲ್ಲಿ ಸ್ಥಳದ ಅಭಾವ ಕಾರಣ ಕಳೆದ ಕೆಲವು ತಿಂಗಳಿಂದ ಮೀನಿನ ವ್ಯಾಪಾರ ಸ್ಥಗಿತಗೊಂಡಿತ್ತು.

ಕೋಳಿವಾಡಾ ಮಾರ್ಗದಲ್ಲಿ ವ್ಯಾಪಾರ ಸ್ಥಗಿತಗೊಂಡ ನಂತರ ಕಳೆದ ಎರಡು ತಿಂಗಳಿಂದ ಇಲ್ಲಿನ ಮುಖ್ಯರಸ್ತೆ ಹೊಂದಿಕೊಂಡ ಕೋರ್ಟ್‌ ಮುಂಭಾಗದ ರಸ್ತೆಯಲ್ಲಿ 4-5 ಕೆಜಿ ತೂಕದ ಮೀನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಾಗಿನಿಂದ ವ್ಯಾಪಾರಿಗಳ ಸಂಖ್ಯೆ ಹಿಂದಿಗಿಂತ ನಾಲ್ಕಾರು ಪಟ್ಟು ಹೆಚ್ಚಾಗಿದೆ. ನಿತ್ಯ ಏನಿಲ್ಲ ಅಂದರೂ 4-5 ಕ್ವಿಂಟಲ್‌ ಮೀನು ಮಾರಾಟವಾಗುತ್ತಿದೆ.

ಈ ಭಾಗದ ಸಿಹಿ ನೀರನಲ್ಲಿ ಲಭ್ಯವಗುವ ಮರೇಲ್‌, ಭಾಮ್‌, ರಾವ್‌, ಪಠನ್‌ ಅಪರೂಪಕ್ಕೆ ಕ್ಯಾಟ್‌ಫಿಶ್‌ ಸಹ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಅತ್ಯಂತ ರುಚಿಕರ ಎಂದೇ ಹೇಳಲಾಗುವ ಮರೇಲ್‌ 1ರಿಂದ 2 ಕೆಜಿ, ಮರೇಲ್‌- 2ರಿಂದ 3 ಕೆಜಿ, ರಾವ್‌-1ರಿಂದ 10 ಕೆಜಿ, ಪಠನ್‌-1ರಿಂದ 5 ಕೆಜಿ ತೂಕದ್ದಾಗಿರುತ್ತವೆ.

ಅತ್ಯಂತ ರುಚಿಕರ ಮೀನು ಭಾಮ್‌ ಪ್ರತಿ ಕೆಜಿಗೆ 250-300 ರೂ., ಮರೇಲ್‌ -200-250 ರೂ., ರಾವ್‌- 100ರಿಂದ 150 ರೂ., ಪಠನ್‌-100-150 ರೂ. ದರವಿದೆ. ಇನ್ನೂ ಕ್ಯಾಟ್‌ಫಿ ಶ್‌ ಪ್ರತಿ ಕೆಜಿಗೆ 100 ರೂ ಇದೆ. ಈ ಎಲ್ಲವುಗಳ ಪೈಕಿ ಭಾಮ್‌ಗೆ ಅತಿ ಹೆಚ್ಚಿನ ಬೇಡಿಕೆ ಇದೆ. ನಿಷೇಧ ಇರುವ ಹಿನ್ನೆಲೆಯಲ್ಲಿ ಕ್ಯಾಟ್‌ಫಿ ಶ್‌ ಮಾರುಕಟ್ಟೆಗೆ
ಬರುವುದು ವಿರಳ. ತಾಲೂಕಿನ ಕಾರಂಜಾ ಜಲಾಶಯ ವ್ಯಾಪ್ತಿಗೆ
ಒಳಪಡುವ ಖೇಣಿ ರಂಜೋಳ, ಡಾಕುಳಗಿ, ಕಲಬುರಗಿ ತಾಲೂಕು ಕುರಿಕೋಟಾ, ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚೆನ್ನೂರ, ಚಿಮ್ಮಂಚೋಡ ಮೊದಲಾಡ ಕಡೆ ಈ ಮೀನು ಲಭ್ಯವಿರುತ್ತವೆ.

Advertisement

ಹುಮನಾಬಾದ, ಖೇಣಿ ರಂಜೋಳ, ಹಳ್ಳಿಖೇಡ(ಬಿ), ಚಿಟಗುಪ್ಪ, ಉಡಬಾಳ ಊರುಗಳಲ್ಲಿರುವ ಹೆಳವ ಸಮುದಾಯದ ಮಲ್ಲಪ್ಪ, ಮಾಳವ್ವ ಇನ್ನೂ ಅನೇಕರು ಪ್ರತಿನಿತ್ಯ ಬಂದರೆ ಸಂತೆ ಇರುವ ರವಿವಾರ ಮತ್ತು ಸಮುದ್ರ ತಟದಲ್ಲಿ ನೆಲೆಸುವ ಜನರು ಈ ಮೀನು ಬಯಸುತ್ತಾರೆ. ಈ ಭಾಗದ ಮೀನುಗಾರರು ವಾರಕ್ಕೆ ಎರಡುಮೂರು
ಬಾರಿ ಟ್ರಕ್‌ ಗಟ್ಟಲೇ ಅನ್ಯ ರಾಜ್ಯಗಳಿಗೆ ಸಾಗಿಸುತ್ತಾರೆ ಎನ್ನುವ ಮಾಹಿತಿ ಇದೆ.

ಇಡೀ ದೇಹದ ಜತೆಗೆ ದೃಷ್ಠಿದೊಷ ನಿವಾರಣೆಗೆ ಉತ್ತಮ ಎನ್ನುವ ಕಾರಣಕ್ಕಾಗಿ ಇದನ್ನು ಸೇವಿಸುವವರ ಸಂಖ್ಯೆ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ. ಕುರಿ, ಕೋಳಿ ಮಾಂಸದ ಜತೆಗೆ ಈಗ ಮೀನು ನಿತ್ಯದ ಮಾರಾಟ ಆಹಾರ ಪದ್ಧತಿಯಾಗಿ ಪರಿವರ್ತನೆ ಆಗಿರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next