Advertisement

ಹುಮನಾಬಾದ: ಮನೆ ಕಟ್ಟಲು ಸಿಗುತ್ತಿಲ್ಲ ಪರವಾನಗೆ

01:08 PM Feb 06, 2021 | Team Udayavani |

ಹುಮನಾಬಾದ: ಲಕ್ಷಾಂತರ ರೂ. ನೀಡಿ ಹಳೇ ಬಡಾವಣೆಗಳಲ್ಲಿ ಖರೀದಿಸಿದ ನಿವೇಶನದಲ್ಲಿ ಹೊಸ ಮನೆ ಕಟ್ಟಲು ಇಲ್ಲಿನ ಪುರಸಭೆ ಪರವಾನಗಿ ನೀಡುತ್ತಿಲ್ಲ. ಇದರಿಂದ ಪಟ್ಟಣದ ನಿವಾಸಿಗಳು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದಲ್ಲಿ ಪುರಸಭೆಯಿಂದ ಅಧಿಕೃತಗೊಂಡ ಬಡಾವಣೆಗಳು ಇವೆ. ಆ ಬಡಾವಣೆಗಳಲ್ಲಿ ಮನೆ ನಿರ್ಮಾಣಕ್ಕೆ ಈಗ ಪರವಾನಗಿ ದೊರೆಯುತ್ತಿಲ್ಲ. ನಗರಾಭಿವೃದ್ಧಿ ಇಲಾಖೆಯಿಂದ ಪರವಾನಗಿ ಪಡೆಯದ ಹಿನ್ನೆಲೆಯಲ್ಲಿ ಪುರಸಭೆ ತಂತ್ರಾಂಶದಲ್ಲಿ ಆ ದಾಖಲೆಗಳು ತೆಗೆದುಕೊಳ್ಳುತ್ತಿಲ್ಲ. ನಗರಾಭಿವೃದ್ಧಿ ಇಲಾಖೆಯಿಂದ ಪರವಾನಗಿ ಪಡೆದ ಬಡಾವಣೆಗಳಲ್ಲಿ ಪರವಾನಗಿ ದೊರೆಯುತ್ತಿವೆ ಎಂದು ಹೇಳುತ್ತಾರೆ ಪುರಸಭೆ ಸಿಬ್ಬಂದಿ.

Advertisement

ಸಾರ್ವಜನಿಕರ ದೂರು: ಲಕ್ಷಾಂತರ ರೂ. ಖರ್ಚು ಮಾಡಿ ಖರೀದಿಸಿದ ನಿವೇಶನಕ್ಕೆ ಸ್ವಂತ ಹೆಸರಿಗೆ ಮಾಡಿಕೊಳ್ಳಲು, ಮುಟೇಶನ್‌ ಸೇರಿದಂತೆ ಇತರೆ ತೆರಿಗೆಗಳು ಪುರಸಭೆಗೆ ಪಾವತಿಸಲಾಗಿದೆ. ಪರವಾನಗಿದೊರೆಯುವುದಿಲ್ಲ ಎಂದಾದರೆ  ಯಾವ ಕಾರಣಕ್ಕೆ ವಿವಿಧ ತೆರಿಗೆಗಳು ಪುರಸಭೆ ಪಡೆದಿದೆ. ಅಲ್ಲದೆ, ಎಲ್ಲಾ ದಾಖಲೆಗಳು ಕೂಡ ಇದ್ದರು ಯಾವ ಕಾರಣಕ್ಕೆ ಪರವಾನಗಿ ನೀಡುತ್ತಿಲ್ಲ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರಿಸುತ್ತಿರುವ ಅ ಧಿಕಾರಿಗಳು, ಪುರಸಭೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಈ ವಿಷಯ ಸರ್ಕಾರ ಮಟ್ಟದಲ್ಲಿದ್ದು, ಸರ್ಕಾರವೇ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಬೇಕಾದರೆ ಮೇಲಧಿ ಕಾರಿಗಳಿಗೆ ಮನವಿ ಸಲ್ಲಿಸಿ ಎಂದು ಹೇಳುತ್ತಿದ್ದಾರೆ.

116 ಕಟ್ಟಡ ಕಾಮಗಾರಿ ಸ್ಥಗಿತ: ಕಳೆದ ತಿಂಗಳು ಪುರಸಭೆಯಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಶಾಸಕ ರಾಜಶೇಖರ ಪಾಟೀಲ ಸೇರಿದಂತೆ ಪುರಸಭೆ ಸದಸ್ಯರು ಪಟ್ಟಣದಲ್ಲಿನ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಬ್ರೇಕ್‌ ಹಾಕಬೇಕು ಎಂದು ತೀರ್ಮಾನಿಸಿ ಠರಾವು ಪಾಸ್‌ ಮಾಡಿದರು. ಈ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪರವಾನಗಿ ರಹಿತ ಕಟ್ಟಡ ಕಾಮಗಾರಿಗಳನ್ನು ಪುರಸಭೆ ಸಿಬ್ಬಂದಿ ಸ್ಥಗಿತಗೊಳಿಸುವ ಕಾರ್ಯ ನಡೆಸಿದ್ದಾರೆ. ಈವರೆಗೆ 116 ಕಟ್ಟಡ ಕಾಮಗಾರಿಯ ಕೆಲಸ ಬಂದ್‌ ಮಾಡಿಸಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:ಎಸ್‌ಟಿ ಘೋಷಣೆ ಸಿಎಂನಿಂದ ಸಾಧ್ಯವಿಲ್ಲ: ಈಶ್ವರಪ್ಪ

ಕಟ್ಟಡ ಮಾಲೀಕರ ಆಕ್ರೋಶ: ಪುರಸಭೆ ವಿರುದ್ಧ ಕಟ್ಟಡ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಟ್ಟಡ ಪರವಾನಗಿ ಇಲ್ಲದೆ ಮನೆ ಕಟ್ಟಲು ಯಾರು ಬಯಸೋದಿಲ್ಲ. ಪುರಸಭೆಯಲ್ಲಿ ಸೂಕ್ತ ಸಮಯಕ್ಕೆ ಪರವಾನಗಿ ನೀಡುತ್ತಿಲ್ಲ. ಪರವಾನಗಿಗಾಗಿ ಅರ್ಜಿ ಸಲ್ಲಿಸಿದ ಕೆಲವರ ಅರ್ಜಿಗಳು ತಿರಸ್ಕಾರಗೊಂಡಿವೆ. ಪ್ರಭಾವಿಗಳು ಸರ್ಕಾರಿ ಭೂಮಿಯಲ್ಲಿ ಕಟ್ಟಡ ಕಾಮಗಾರಿ ನಡೆಸಿದರು ಪರವಾಗಿಲ್ಲ. ಆ ಕಡೆ ಪುರಸಭೆ ಅಧಿ  ಕಾರಿಗಳು ನೋಡೊದಿಲ್ಲ. ಆದರೆ, ಬಡವರನ್ನು ಮಾತ್ರ ಬಿಡುವುದಿಲ್ಲ. ಎಲ್ಲರೂ ಬಡವರ ಹಿಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೆಸರು ಹೇಳದ ಕಟ್ಟಡ ಮಾಲೀಕರು ಅಳಲು ತೋಡಿಕೊಂಡರು.

Advertisement

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next