Advertisement

ಸಮ್ಮೇಳನ ಸರ್ವಾಧ್ಯಕ್ಷರಾಗಿ ಹೊಡಮನಿ ಆಯ್ಕೆ

04:08 PM Jan 20, 2020 | Team Udayavani |

ಹುಮನಾಬಾದ: ಹಳ್ಳಿಖೇಡ(ಬಿ) ಪಟ್ಟಣದಲ್ಲಿ ಜ.29ರಂದು ನಡೆಯಲ್ಲಿರುವ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಎಸ್‌.ಎಸ್‌. ಹೊಡಮನಿ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ಹಳ್ಳಿಖೇಡ(ಬಿ) ಪಟ್ಟಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿರುವ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಸಚ್ಚಿತಾನಂದ ಮಠಪತಿ ತಿಳಿಸಿದ್ದಾರೆ.

ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ. ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾಗಿ ಪಟ್ಟಣದ ಧನರಾಜ ತಾಡಂಪಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಸಚ್ಚಿದಾನಂದ ಮಠಪತಿ, ಉಪಾಧ್ಯಕ್ಷರಾಗಿ ಗುಂಡಯ್ಯ ತೀರ್ಥ, ನಾಗರಾಜ ಹಿಬಾರೆ, ಮುಕ್ರಮ ಪಟೇಲ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಹಣಕಾಸು ಸಮಿತಿಗೆ ನಾಗರಾಜ ಸಿರಮುಂಡಿ, ಆಹಾರ ಸಮಿತಿಗೆ ಮಲ್ಲಿಕಾರ್ಜುನ ಹಚ್ಚೆ, ಸ್ಮರಣ ಸಂಚಿಕೆ ಸಮಿತಿಗೆ ಚಾಮರಾಜ ಸಿರಮುಂಡಿ, ಮಹಿಳಾ ಸಮಿತಿಗೆ ಪ್ರೇಮಿಳಾ, ಮಹಾದೇವಿ ಶೀಲವಂತ, ಮೆರವಣಿಗೆ ಸಮಿತಿಗೆ ರಮೇಶ ತಿಬಶೆಟ್ಟಿ, ವೇದಿಕೆ ಸಮಿತಿಗೆ ಮಡೆಪ್ಪಾ ಕುಂಬಾರ, ವೇದಿಕೆ ಅಲಂಕಾರ ಸಮಿತಿಗೆ ಮಲ್ಲಿಕಾರ್ಜುನ ವಳಂಕಿ, ಪ್ರಚಾರ ಸಮಿತಿಗೆ ರಾಜಣ್ಣಾ ಕುಂಬಾರ, ಸಾಂಸ್ಕೃತಿಕ ಸಮಿತಿಗೆ ಸಂಗಮೇಶ ಪಾಟೀಲ, ನಗರ ಅಲಂಕಾರ ಸಮಿತಿಗೆ ಮಲ್ಲಪ್ಪಾ ಜಗಜೀವಣಗಿ ಅವರನ್ನು ನೇಮಕ ಮಾಡಲಾಗಿದೆ.

ಸಮ್ಮೇಳನದ ಮೆರವಣಿಗೆಯಲ್ಲಿ ನಾಡಿನ ಖ್ಯಾತ ಜಾನಪದ ಕಲಾ ತಂಡಗಳನ್ನು ಆಹ್ವಾನಿಸಲು ಹಾಗೂ ಸಮ್ಮೇಳನದ ಉದ್ಘಾಟನೆಗೆ ನಾಡಿನ ಹೆಸರಾಂತ ಸಾಹಿತಗಳನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು. ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ನಮ್ಮ ಭಾಗದ ಯುವ ವಿದ್ಯಾರ್ಥಿಗಳಿಗೆ ಪ್ರೇರಣಾ ನುಡಿಗಳನ್ನು ನೀಡಲು ಬೆಂಗಳೂರಿನ ಜಂಟಿ ಪೊಲೀಸ್‌ ಆಯುಕ್ತರಾದ ಐಪಿಎಸ್‌ ಸಂದೀಪ ಪಾಟೀಲ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮ್ಮೇಳನ ಸರ್ವಾಧ್ಯಕ್ಷರ ಪರಿಚಯ: 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿರುವ ಎಸ್‌. ಎಸ್‌. ಹೊಡಮನಿ ಅವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದಾರೆ. ಹಳ್ಳಿಖೇಡ(ಬಿ) ಡಾ| ಬಿ.ಆರ್‌.ಅಂಬೇಡ್ಕರ್‌ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಅನೇಕ ಜಿಲ್ಲಾ ಹಾಗೂ ತಾಲೂಕಾ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಇವರ ಸುಮಾರು 4 ಕೃತಿಗಳು ಹೊರಬಂದಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೆಯಾದ ವಿಶಿಷ್ಟ ಕೊಡುಗೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next