Advertisement

Human Trafficking: ಮಾನವ ಕಳ್ಳ ಸಾಗಣೆ; 12 ಬಾಂಗ್ಲಾ ಪ್ರಜೆಗಳ ವಿರುದ್ಧ ಚಾರ್ಜ್‌ಶೀಟ್‌ 

11:05 AM Feb 07, 2024 | Team Udayavani |

ಬೆಂಗಳೂರು: ಭಾರತ-ಬಾಂಗ್ಲಾದೇಶ ಗಡಿ ಭಾಗದ ಮೂಲಕ ಬೃಹತ್‌ ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ 12 ಮಂದಿ ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಪಟ್ಟಿ ಸಲ್ಲಿಸಿದೆ.

Advertisement

ಬಾಂಗ್ಲಾದೇಶ ಮೂಲದ ಎಂ.ಡಿ. ಫೀರ್ದೌಸ್ ಬಾಪಾರಿ, ಮೊಹಮ್ಮದ್‌ ಒಲಿ ಉಲ್ಲಾ, ಅಮೋಲ್‌ ದಾಸ್‌, ಮಸೂದ್‌ ಸರ್ದಾರ್‌, ಸೊಹಾಗ್‌ ಗಾಜಿ, ಸುಮನ್‌ ಶೇಕ್‌, ಬೆಳ್ಳಾಲ್, ಮಿರಾಝುಲ್‌ ಇಸ್ಲಾಂ, ಜಾರ್ಕಿ ಖಾನ್‌, ಬಾದಲ್‌ ಹೌಲಾದಾರ್‌, ಕಬೀರ್‌ ತಾಲೂಕ್‌ದಾರ್‌, ಘರಾಮಿ ಮೊಹಮ್ಮದ್‌ ಬಶೀರ್‌ ಹುಸೇನ್‌, ಸೌದಿ ಜಾಕೀರ್‌ ಎಂಬುವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ‌ಆರೋಪಿಗಳು ದಾಖಲೆ ಇಲ್ಲದೇ ಭಾರತವನ್ನು ಪ್ರವೇಶಿಸಿದ್ದರು ಎಂದು ಎನ್‌ಐಎ ತಿಳಿಸಿದೆ. ಆರೋಪಿಗಳು ಪಶ್ಚಿಮ ಬಂಗಾಳದ ಬೆನಾಪೋಲ್‌ ಮತ್ತು ಜಶೋರ್‌ನಲ್ಲಿರುವ ಭಾರತ-ಬಾಂಗ್ಲಾ ಗಡಿ ಭಾಗದ ಮೂಲಕ ಮತ್ತು ತ್ರಿಪುರ ಬಳಿಯ ಅಖೌರ್‌ ಮೂಲಕ ಗಡಿ ಭಾಗದಲ್ಲಿ ಕಾರ್ಯನಿರ್ವಹಿಸುವ ಕೆಲ ವ್ಯಕ್ತಿಗಳ ಸಹಾಯದಿಂದ ಒಳ ನುಸುಳಿದ್ದರು. 12 ಮಂದಿ ಪೈಕಿ 8 ಮಂದಿ ಹೊರತು ಪಡಿಸಿ ಇತರೆ ಆರೋಪಿಗಳು ಅಕ್ರಮ ಕಳ್ಳ ಸಾಗಣೆಯಲ್ಲಿ ತೊಡಗಿದ್ದಾರೆ. ಅಲ್ಲದೆ, ತನಿಖೆ ವೇಳೆ 22 ಮಂದಿಗೆ ಉದ್ಯೋಗ ಹಾಗೂ ಇತರೆ ಆಮಿಷವೊಡ್ಡಿ ಭಾರತಕ್ಕೆ ಕಳುಹಿಸಲಾಗಿದೆ.

ಈ ಸಂತ್ರಸ್ತರು ಗಡಿದಾಟಲು ಮಾರ್ಗದುದ್ದಕ್ಕೂ ಹಣ ಪಾವತಿಸಿದ್ದಾರೆ. ಬಳಿಕ ಬೆಂಗಳೂರಿಗೆ ಬಂದಾಗ ತ್ಯಾಜ್ಯಾ ವಿಂಗಡಣೆಯಲ್ಲಿ ಕೆಲಸ ಮಾಡಿದ್ದಾರೆ. ಈ ವೇಳೆ ಯಾರಾದರೂ ಪ್ರತಿರೋಧ ವ್ಯಕ್ತಪಡಿಸಿದರೆ, ಅಕ್ರಮ ವಲಸಿಗರೆಂದು ಜೈಲಿಗೆ ಕಳುಹಿಸುವುದಾಗಿ ದಂಧೆಕೋರರು ಬೆದರಿಕೆ ಹಾಕಿದ್ದಾರೆ. ಇನ್ನು 12 ಜನರ ಪೈಕಿ ತಲೆಮರೆಸಿಕೊಂಡಿದ್ದ ಮೊಹಮ್ಮದ್‌ ಸಹಜ್ಜಾಲ್‌ ಹಲ್ವಾರ್‌ ಮತ್ತು ಇದ್ರಿಶ್‌ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿದ್ದ ಸ್ಥಳಗಳನ್ನು ಎನ್‌ಐಎ ಈ ಹಿಂದೆ ನಡೆಸಿದ ಶೋಧನೆಯಲ್ಲಿ 61 ಆಧಾರ್‌ ಕಾರ್ಡ್‌ಗಳು ಮತ್ತು ಇತರೆ ಭಾರತೀಯ ಗುರುತಿನ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಎನ್‌ಐಎ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next