ಹೊಸದಿಲ್ಲಿ: ಕೋವಿಡ್ 19 ನಿಂದಾಗಿ ಆನ್‌ಲೈನ್ ತರಗತಿ ನಡೆಸುವುದು ಅನಿವಾರ್ಯವಾಗಿರುವ ಕಾರಣ ಶಾಲೆಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಂಗಳವಾರ ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವಾಲಯ ಮಾರ್ಗಸೂಚಿ ಹೊರಡಿಸಿದೆ.
ಮಕ್ಕಳು ದೀರ್ಘ ಸಮಯ ಸ್ಕ್ರೀನ್ ಮುಂದೆ ಕೂರಬೇಕಾಗುತ್ತದೆ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಸಚಿವಾಲಯವು ‘ಪ್ರಗ್ಯತಾ’ ಎಂಬ ಮಾರ್ಗಸೂಚಿ ಸಿದ್ಧಪಡಿಸಿದೆ.
ಜತೆಗೆ ಆನ್‌ಲೈನ್ ಅಥವಾ ಡಿಜಿಟಲ್ ಕಲಿಕೆಗಾಗಿ ಯೋಜನೆ, ಮನನ, ನಿರ್ವಹಣೆ, ಮಾರ್ಗದರ್ಶನ, ಚರ್ಚೆ, ನಿಯೋಜನೆ, ಜಾಡು ಮತ್ತು ಪ್ರಶಂಸೆ ಎಂಬ 8 ಹಂತಗಳ ಮಾರ್ಗದರ್ಶಿ ನೀಡಿದ್ದು, ಇವುಗಳನ್ನು ಬಳಸಿ ಆನ್‌ಲೈನ್ ಶಿಕ್ಷಣ ನೀಡುವಂತೆ ಸೂಚಿಸಿದೆ.
ಮಾರ್ಗಸೂಚಿಯಲ್ಲಿ ಏನಿದೆ?
– ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ 30 ನಿಮಿಷಗಳಿಗಿಂತ ಹೆಚ್ಚು ಕಾಲ ಆನ್‌ಲೈನ್ ಕ್ಲಾಸ್ ನಡೆಸುವಂತಿಲ್ಲ.
– 1ರಿಂದ 8ನೇ ತರಗತಿವರೆಗೆ 45 ನಿಮಿಷಗಳ ಅವಧಿಯ ಎರಡು ಆನ್‌ಲೈನ್ ಸೆಷನ್.
– 9ರಿಂದ 12ನೇ ತರಗತಿ ವರೆಗೆ 30-45 ನಿಮಿಷಗಳ ಅವಧಿಯ ನಾಲ್ಕು ಸೆಷನ್.