Advertisement

Titan: ಟೈಟಾನ್‌ನಲ್ಲಿ ಸಾವನ್ನಪ್ಪಿದ ಮನುಷ್ಯರ ಅವಶೇಷ ಪತ್ತೆ?

10:16 PM Jun 29, 2023 | Team Udayavani |

ಪೋರ್ಟ್‌ಲ್ಯಾಂಡ್‌ : ಉತ್ತರ ಅಟ್ಲಾಂಟಿಕ್‌ ಸಾಗರದಲ್ಲಿ ಮುಳುಗಿ ಹೋಗಿರುವ ಟೈಟಾನಿಕ್‌ ಹಡಗಿನ ಅವಶೇಷಗಳನ್ನು ನೋಡಲು ಹೋಗಿದ್ದ ಅದೇ ಹೆಸರಿನ ಸಬ್‌ಮರ್ಸಿಬಿಲ್‌ (ಜಲಾಂತರ್ಗಾಮಿ)ನ ಅವಶೇಷಗಳನ್ನು ಅಮೆರಿಕದ ಸೇಂಟ್‌ ಜಾನ್ಸ್‌ ಪೋರ್ಟ್‌ನಲ್ಲಿರುವ ನ್ಯೂಫೌಂಡ್‌ಲ್ಯಾಂಡ್‌ಗೆ ತರಲಾಗಿದೆ.

Advertisement

ಅದರಲ್ಲಿ ಅಸುನೀಗಿದ ಐವರ ದೇಹದ ಭಾಗಗಳೂ ಇವೆ ಎಂದು ಹೇಳಲಾಗಿದೆ. ಟೈಟಾನ್‌ ಒಳಗೊಳಗೇ ಸ್ಫೋಟಿಸಿದ್ದೇಕೆ ಎಂದು ತಿಳಿಯಲು ಇದೊಂದು ಮಹತ್ವದ ಸಾಕ್ಷಿಯಾಗಿದೆ. ಈ ಬೆಳವಣಿಗೆಯಿಂದ ನನಗೆ ಬಹಳ ಸಂತೋಷವಾಗಿದೆ. ಇದಕ್ಕೆ ನೆರವು ನೀಡಿದ ಎಲ್ಲ ದೇಶಗಳಿಗೆ, ಸಂಸ್ಥೆಗಳಿಗೆ ಧನ್ಯವಾದ ಎಂದು ಕ್ಯಾ.ಜೇಸನ್‌ ನೀಬಾವರ್‌ ಹೇಳಿದ್ದಾರೆ. 1912ರಲ್ಲಿ ಟೈಟಾನಿಕ್‌ ಹಡಗು ಮುಳುಗಿ ಹೋಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next