Advertisement

Kamala Harris ಭಾರತೀಯ ಮೂಲದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ WWE ಕುಸ್ತಿಪಟು

03:43 PM Aug 21, 2024 | Team Udayavani |

ನ್ಯೂಯಾರ್ಕ್: ಯುಎಸ್ ಉಪಾಧ್ಯಕ್ಷೆ ಮತ್ತು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್(Kamala Harris)ಅವರ ಭಾರತೀಯ ಮೂಲದ ಕುರಿತು WWE ಕುಸ್ತಿಪಟು ಹಲ್ಕ್ ಹೊಗನ್(Hulk Hogan) ಲೇವಡಿ ಮಾಡಿದ್ದಾರೆ.

Advertisement

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಬೆಂಬಲಿಗರಾಗಿರುವ ಹಲ್ಕ್ ಹೊಗನ್, ಯುಎಸ್ ನ ಓಹಿಯೋದಲ್ಲಿನ ಥರ್ಸ್ಟಿ ಕೌಬಾಯ್ ಬಾರ್‌ನಲ್ಲಿ ನಡೆದ ಬಿಯರ್ ಬ್ರ್ಯಾಂಡ್ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ನಿಂದನೆ ಮಾಡಿದ್ದಾರೆ.

ಹೊಗನ್ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು,ಕಮಲಾ ಊಸರವಳ್ಳಿಯೇ? ಅವಳು ಭಾರತೀಯಳೇ? ನಾನು ಕಮಲಾ ಮೇಲೆ ಕಾಲು ಬೀಳಿಸಬೇಕೆ?”ಎಂದು ಹೇಳಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಸಾಕಷ್ಟು ಆಕ್ರೋಶ ವ್ಯಕ್ತವಾದ ಬಳಿಕ ಪ್ರತಿಕ್ರಿಯಿಸಿದ ಹೊಗನ್ “ಅದು ನಾನು ಮಾತನಾಡಿದ್ದಲ್ಲ. ಬಿಯರ್ ಮಾತನಾಡುತ್ತಿತ್ತು” ಎಂದು ಹೇಳಿರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ.

ಮಿಲ್ವಾಕೀಯಲ್ಲಿ ನಡೆದ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಹೊಗನ್ ಅವರು ವೇದಿಕೆಯಲ್ಲಿ ಉಗ್ರ ಭಾಷಣವನ್ನು ಮಾಡುವಾಗ ನಾಟಕೀಯವಾಗಿ ತನ್ನ ಶರ್ಟ್ ಅನ್ನು ಹರಿದುಕೊಂಡಿದ್ದರು.

ಕಮಲಾ ಹ್ಯಾರಿಸ್ ಅವರ ತಾಯಿ ಭಾರತೀಯ ಮೂಲದ ಅಮೆರಿಕನ್ ಮತ್ತು ತಂದೆ ಜಮೈಕಾ ಮೂಲದ ಅಮೆರಿಕನ್ ಆಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.