ಹುಳಿಯಾರು: ಹಂದನಕೆರೆ ಹೋಬಳಿ ನರುವಗಲ್ಲು ಬಳಿ ಈಚೆಗೆ ಸುರಿದ ಮಳೆಯಿಂದಾಗಿ ರಸ್ತೆ ಮಧ್ಯೆ ಅಲ್ಲಲ್ಲಿ ಭೂಕುಸಿತವಾಗಿದ್ದು, ಇನ್ನೂ ದುರಸ್ತಿಗೆ ಮುಂದಾಗಿಲ್ಲ. ಇದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗಿದೆ. ನರುವಗಲ್ಲಿನಿಂದ ಹುಳಿಯಾರು- ತಿಪಟೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಅಲುವಾಗಿ ಗೊಲ್ಲರಹಟ್ಟಿ ಮಾರ್ಗವಾಗಿ ಗೋಪಾಲ
ಪುರಕ್ಕೆ ಇತ್ತೀಚೆಗಷ್ಟೆ ರಸ್ತೆ ಮಾಡಲಾಗಿತ್ತು. ರಸ್ತೆ ಮಾಡುವಾಗ ಸೇತುವೆ ಮಾಡುವ ಜಾಗದಲ್ಲಿ ಸೇತುವೆ ಮಾಡದೆ ನಿರ್ಲಕ್ಷಿಸಲಾಗಿತ್ತು. ಅಲ್ಲದೆ ರಸ್ತೆಗೆ ಹೊಸ ಮಣ್ಣು ಹೊಡೆಸಿದಾಗ ಬಿಗಿಯಾಗಿ ಮಣ್ಣು ಕೂರುವಂತೆ ರೋಡ್ ರೋಲರ್ ಓಡಿಸದೆ ಏಕಾಏಕಿ ಡಾಂಬರ್ ಹಾಕಲಾಯಿತು.
ಸ್ಥಳೀಯರು ವಿರೋಧಿಸಿದರೂ ಸ್ಪಂದಿಸದೆ ರಸ್ತೆ ಕಾಮಗಾರಿ ಮಾಡಿ ಮುಗಿಸಿದ್ದಾರೆ. ಪರಿಣಾಮ ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ರಸ್ತೆ ಯಲ್ಲಿ ಅಲ್ಲಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿದೆ. ಎರಡೂ ಕಡೆಯಲ್ಲಂತೂ ರಸ್ತೆ 2 ಭಾಗವಾಗಿತ್ತು. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ದುರಸ್ತಿ ಮಾಡುವುದಿರಲಿ ಕನಿಷ್ಠ ಪಕ್ಷ ಸ್ಥಳ ಪರಿಶೀಲಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ರಸ್ತೆಯಲ್ಲಿ ವಾಹನ ಸವಾರರು ಓಡಾಡಲು ಭಯ ಪಡುವಂತಾಗಿದೆ.
ಇತ್ತೀಚೆಗೆ ಹಾಲಿನ ವಾಹನ ವೊಂದು ಉರುಳಿ ಬಿದ್ದಿತ್ತು. ಈ ರಸ್ತೆ ಮೂಲಕ ಗೊಲ್ಲರಹಟ್ಟಿ ಸೇರಿ ಅನೇಕ ಹಳ್ಳಿಗಳ ಜನರು ತಿಪಟೂರು ರಸ್ತೆಗೂ, ಚಿ.ನಾ.ಹಳ್ಳಿ ರಸ್ತೆಗೂ ಓಡಾಡುತ್ತಾರೆ. ಶಾಲಾ- ಕಾಲೇಜಿಗೆ ನಿತ್ಯ ವಿದ್ಯಾರ್ಥಿಗಳು, ತಿಂಗಳಿಗೊಮ್ಮೆ ಪಡಿತರ ತರಲು ಮಹಿಳೆಯರು ಓಡಾಡುತ್ತಾರೆ. ಆದರೆ ಎಲ್ಲೆಂದರಲ್ಲಿ ಭೂಕುಸಿತ ವಾಗುತ್ತಿರುವುದರಿಂದ ಯಾವ ವಾಹನ ಗಳೂ ಸಂಚರಿಸದಿರುವುದರಿಂದ ಜನರು ನಡೆದ ುಕೊಂಡು ಹೋಗುವುದು ಅನಿವಾರ್ಯ. ಅಧಿಕಾರಿಗಳು ಇನ್ನಾದರೂ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.