ಹುಳಿಯಾರು: ಕಳೆದೊಂದು ವರ್ಷದಿಂದ ಹುಳಿಯಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿದ್ದು, ಜೊತೆಗೆ ಚರಂಡಿ ಕಾಮಗಾರಿ ಎರಡೂ ಬದಿಯಲ್ಲಿ ನಡೆಯುತ್ತಿರುವುದರಿಂದ ತ್ಯಾಜ್ಯದ ನೀರು ಹರಿದು ಹೋಗುವುದೆಲ್ಲಿ ಎಂಬುದು ಯಕ್ಷಪ್ರಶ್ನೆ ಎದುರಾಗಿದೆ.
ರಾಷ್ಟ್ರೀಯ ಹೆದ್ದಾರಿ 234ರ ಕಾಮಗಾರಿ ಪಟ್ಟಣದಲ್ಲಿ ಬಹುತೇಕ ಪೂರ್ಣಗೊಂಡಿದ್ದು, ಹೆದ್ದಾರಿ ಬದಿ ನಿರ್ಮಿಸಲಾಗಿರುವ ಚರಂಡಿ ಸಾಕಷ್ಟು ಕಡೆ ಅಪೂರ್ಣವಾಗಿದೆ. ಜೋರು ಮಳೆ ಬಂದಲ್ಲಿ ನೀರು ಹರಿದು ಹೋಗದೆ ಸಾಕಷ್ಟು ಸಮಸ್ಯೆ ಎದುರಾಗಲಿದೆ.
ಯೋಜನೆ ಪ್ರಕಾರ ಚರಂಡಿ ಕಾಮಗಾರಿ ನಡೆದಿದ್ದರೂ ಒಂದೆಡೆ ತಗ್ಗು ಮತ್ತೂಂದೆಡೆ ಎತ್ತರವಾಗಿ ಚರಂಡಿ ನಿರ್ಮಾಣವಾಗಿದ್ದು, ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವುದು ಅನುಮಾನ ಹಾಗೂ ಹರಿದರೂ ನೀರು ಎಲ್ಲಿಗೆ ಸೇರಲಿದೆ ಎಂಬುದು ತಿಳಿಯದಾಗಿದೆ.
ಹೊಂಡ ನಿರ್ಮಾಣ: ರಾಮಗೋಪಾಲ್ ಸರ್ಕಲ್ ಬಳಿ ಹಳೆಯ ಎಬಿಎಂ ಬ್ಯಾಂಕ್ ಬಳಿ ಚರಂಡಿ ಕಾಮಗಾರಿ ಅಪೂರ್ಣವಾಗಿದ್ದು, ಬಾಲಾಜಿ ಟಾಕೀಸ್ ಹಾಗೂ ಎಪಿಎಂಸಿ ಕಡೆಯಿಂದಲೂ ನೀರು ಹರಿದು ಬರುವಂತೆ ಮಾಡಿರುವುದರಿಂದ ದೊಡ್ಡ ಹೊಂಡವೇ ನಿರ್ಮಾಣವಾಗಿದೆ. ಕಳೆದ 20 ದಿನಗಳಿಂದ ಬರುತ್ತಿರುವ ಮಳೆಗೆ ಹೊಂಡದಲ್ಲಿ ನೀರು ತುಂಬಿದ್ದು, ಕಳೆದ ತಿಂಗಳ ಹಿಂದಷ್ಟೆ ವ್ಯಕ್ತಿಯೊಬ್ಬರು ಬಿದ್ದು ಮೃತಪಟ್ಟಿರುವ ಘಟನೆಯೂ ನಡೆದಿದೆ.
ಹೀಗಿದ್ದಾಗಿಯೂ ಹೊಂಡದಲ್ಲಿರುವ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡುವಲ್ಲಿ ಹೆದ್ದಾರಿ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸಿದ್ದಾರೆ. ತ್ಯಾಜ್ಯ ಶೇಖರಣೆ: ಎಪಿಎಂಸಿ ಭಾಗದಿಂದ ಪಟ್ಟಣದ ಹೊರ ಭಾಗಕ್ಕೆ ಹರಿದು ಹೋಗಬೇಕಿದ್ದ ಚರಂಡಿ ನೀರು ಮುಂದಕ್ಕೆ ಸಾಗುವ ಬದಲಿಗೆ ರಾಮ ಗೋಪಾಲ್ ಸರ್ಕಲ್ ಕಡೆ ಹರಿದು ಹೋಗುವಂತೆ ಚರಂಡಿ ನಿರ್ಮಿಸಿದ್ದು, ಇದರಿಂದ ಕೊಳಚೆ ನೀರು ಪಟ್ಟಣದ ಒಳಭಾಗದಲ್ಲಿ ಶೇಖರಣೆಯಾಗಿ ಸಮಸ್ಯೆಗೆ ಕಾರಣವಾಗಿದೆ.
ತಡೆಯಾಜ್ಞೆ: ಸದರಿ ನಿವೇಶನದ ಮಾಲೀಕ ಸಿದ್ದಲಿಂಗ ಸ್ವಾಮಿ ಆರೋಪಿಸಿದ್ದಾರೆ. ಈ ಬಗ್ಗೆ ಹೆದ್ದಾರಿ ಎಂಜಿನಿಯರ್ ಅವರನ್ನು ನಿರಂತರವಾಗಿ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಕೇಳುತ್ತಿದ್ದರೂ ಯಾರೂ ಇತ್ತ ಗಮನ ಹರಿಸಿಲ್ಲ. ಇದರಿಂದ ಬೇಸತ್ತು ನ್ಯಾಯಾಲಯದ ಮೆಟ್ಟಿಲೇರಿ ಚರಂಡಿ ನೀರು ಜಮೀನು ಕಡೆಗೆ ಬಿಡದಂತೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ.
ಹೊಂಡದಲ್ಲಿ ಶೇರಣೆಯಾಗಿರುವ ನೀರು ಖಾಸಗಿ ಜಮೀನಿಗೆ ಬಿಡುವ ಉದ್ದೇಶ ಹೊಂದಿದ್ದ ಗುತ್ತಿಗೆ ದಾರರು ಮುಂದೇನು ಮಾಡಬೇಕೆಂದು ತಿಳಿಯದೆ ಕೆಲಸ ಸ್ಥಗಿತಗೊಳಿಸಿದ್ದಾರೆ.