Advertisement

3 ಪಕ್ಷಕ್ಕೆ ಪ್ರತಿಷ್ಠೆಕಣವಾದ ಹುಳಿಯಾರು

03:14 PM Mar 22, 2021 | Team Udayavani |

ತುಮಕೂರು: ಕೊಬರಿ, ಹೆಸರು ಕಾಳು, ರಾಗಿ ಸೇರಿದಂತೆ ಇತರೆ ಕೃಷಿ ಪರಿಕರಗಳ ಪ್ರಮುಖ ವ್ಯಾಪಾರ ವಹಿವಾಟಿನಿಂದ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಚಿಕ್ಕನಾಯಕನಹಳ್ಳಿ ತಾಲೂಕಿನ ಪ್ರಮುಖ ಹೋಬಳಿಕೇಂದ್ರ ಹುಳಿಯಾರು ಪಟ್ಟಣದಲ್ಲಿ ಈಗ ರಾಜಕೀಯ ರಂಗೇರುತ್ತಿದೆ.

Advertisement

ಜಿಲ್ಲೆಯಲ್ಲಿ ಸುಡು ಬಿಸಿಲಿನ ಬೇಗೆ ತೀವ್ರವಾಗುತ್ತಿರುವಾಗ ಹುಳಿಯಾರು ಪಟ್ಟಣ ಪಂಚಾಯಿತಿ ಚುನಾವಣಾ ಕಾವೂ ಹೆಚ್ಚುತ್ತಿದೆ. ಮುಂದೆ ಬರಲಿರುವಜಿಪಂ, ತಾಪಂ ಚುನಾವಣೆಗೆ ಪಕ್ಷಗಳನ್ನು ಸಂಘಟಿಸಿ ಚುನಾವಣೆಗೆ ಸಜ್ಜಾಗುವ ವೇಳೆಯಲ್ಲಿ ಹುಳಿಯಾರು ಪಪಂ ಚುನಾವಣೆ ಬಂದಿರುವುದು ಆಡಳಿತ ರೂಢಬಿಜೆಪಿ, ಪ್ರತಿ ಪಕ್ಷ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಈಚುನಾವಣೆ ಮಹತ್ವ ಪಡೆದಿದೆ. ಆದರೆ, ರಾಷ್ಟ್ರೀಯಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಮುಖಂಡರಆಂತರೀಕ ಕಲಹ ಕಂಡು ಬಂದಿದ್ದು, ಬಿಜೆಪಿಯಲ್ಲಿ ಬಂಡಾಯದ ಕಹಳೆ ಮೊಳಗಿದೆ.

ಹುಳಿಯಾರು ಪಟ್ಟಣ ಪಂಚಾಯಿತಿಯಲ್ಲಿ 16 ಕ್ಷೇತ್ರಗಳಿದ್ದು ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದ್ದು ಅಂತಿಮವಾಗಿ ಕಣದಲ್ಲಿ ಕಾಂಗ್ರೆಸ್‌ ಪಕ್ಷದಿಂದ 16 ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಬಿಜೆಪಿಮತ್ತು ಜೆಡಿಎಸ್‌ನಲ್ಲಿ ತಲಾ 15 ಅಭ್ಯರ್ಥಿಗಳು ಕಣದಲ್ಲಿ ಇದ್ದು ಮಾ.29 ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಆರಂಭಗೊಂಡಿದೆ.

ಪ್ರಚಾರದ ಬಿರುಸು ಆರಂಭ: ಜೆಡಿಎಸ್‌ ಪರವಾಗಿಮಾಜಿ ಶಾಸಕ ಸಿ.ಬಿ.ಸುರೇಶ್‌ ಬಾಬು ಕ್ಷೇತ್ರದಲ್ಲಿಯೇಬೀಡು ಬಿಟ್ಟು ತಮ್ಮ ಪಕ್ಷದ ಅಭ್ಯರ್ಥಿಗಳನ್ನುಗೆಲ್ಲಿಸಬೇಕು ಎಂದು ಕಂಕಣ ತೊಟ್ಟು ಪ್ರಚಾರದಬಿರುಸು ಆರಂಭಿಸಿದ್ದಾರೆ. ಬಿಜೆಪಿ ಪರವಾಗಿ ಜಿಲ್ಲಾಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪುತ್ರ ಬಿಜೆಪಿಮುಖಂಡ ಡಾ.ಅಭಿಜ್ಞಾ ಮಾಧುಸ್ವಾಮಿ ಹುಳಿಯಾರುಪಟ್ಟಣದಲ್ಲಿ ಪ್ರಮುಖರನ್ನು ಭೇಟಿ ಮಾಡಿ ಚುನಾವಣಾಪ್ರಚಾರ ಆರಂಭಿಸಿದ್ದಾರೆ.

ಮಾಜಿ ಶಾಸಕ ಹಾಗೂಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಿರಿಯ ಬಿಜೆಪಿ ಮುಖಂಡರೂ ಹಾಗೂಹುಳಿಯಾರಿನವರೇ ಆದ ಕೆ.ಎಸ್‌.ಕಿರಣ್‌ ಕುಮಾರ್‌ ಬೆಂಬಲಿಗರಿಗೆ ಬಿಜೆಪಿ ಯಿಂದ ಟಿಕೆಟ್‌ ನೀಡದೇ ಇರುವುದು ಬಿಜೆಪಿ ಅಭ್ಯರ್ಥಿಗಳು ಬಂಡಾಯವಾಗಿ ನಿಲ್ಲಲು ಕಾಣರವಾಗಿದ್ದು,ಅವರ ಗೆಲುವಿಗೆ ಕೆ.ಎಸ್‌.ಕಿರಣ್‌ ಕುಮಾರ್‌ತಮ್ಮದೇ ಆದ ರೀತಿಯಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಸಮಿತಿಯಕಾರ್ಯಾಧ್ಯಕ್ಷ ಸಾಸಲು ಸತೀಶ್‌ ಪಕ್ಷದ ಟಿಕೆಟ್‌ನೀಡುವಲ್ಲಿ ಅವರನ್ನು ಕಡೆಗಣಿಸಿರುವ ಹಿನ್ನೆಲೆ ಚುನಾವಣೆಯಿಂದ ದೂರ ಉಳಿದಿದ್ದಾರೆ. ಚುನಾವಣೆ ರಾಜಕೀಯ ಚದುರಂಗದಾಟ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಬಂಡಾಯದ ಬಿರುಗಾಳಿಯ ನಡುವೆ ಯಾವ ಪಕ್ಷದ ಅಭ್ಯರ್ಥಿಗಳು ಹೆಚ್ಚು ಗೆಲ್ಲುತ್ತಾರೆ ಎನ್ನುವುದು ಕುತೂಹಲ ಮೂಡಿದೆ.

Advertisement

ಜೆಡಿಎಸ್‌ನಲ್ಲಿ ಬಂಡಾಯ ಇಲ್ಲ  :

ಹುಳಿಯಾರು ಪಟ್ಟಣ ಪಂಚಾಯಿತಿ ಚುನಾವಣೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಯವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ, ಬಿಜೆಪಿಯಲ್ಲಿ ಎರಡು ಬಣಗಳು ಮುಂದುವರಿದಿವೆ. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರು, ಬಿಜೆಪಿ ಹಿರಿಯ ಮುಖಂಡರು ಆದ ಕೆ.ಎಸ್‌.ಕಿರಣ್‌ ಕುಮಾರ್‌ ಬೆಂಬಲಿಗರ ನಡುವೆಯೇ ಚುನಾವಣಾ ಸೆಣಸಾಟ ಆರಂಭಗೊಂಡಿದೆ. ಇನ್ನು ಕಾಂಗ್ರೆಸ್‌ನಲ್ಲಿಯೂ ಅಸಮಧಾನ ಮೂಡಿದೆ. ಜಿಲ್ಲಾ ಕಾಂಗ್ರೆಸ್‌ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಸಾಸಲು ಸತೀಶ್‌ ಅವರನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್‌ ನಿಂದ ಟಿಕೆಟ್‌ ಕೊಡುವ ವಿಚಾರವಾಗಿ ಏನೂ ಚರ್ಚೆ ಮಾಡಿಲ್ಲ ಮುಂದಿನ ವಿಧಾನಸಭಾ ಚುನಾವಣೆ ಉದ್ದೇಶ ಇಟ್ಟು ಕೊಂಡು ಟಿ.ಬಿ.ಜಯಚಂದ್ರರ ಪ್ರಭಾವ ಹೆಚ್ಚು ನಡೆದಿದ್ದು, ಜಿಪಂ ಸದಸ್ಯ ವೈ.ಸಿ.ಸಿದ್ದರಾಮಣ್ಣ ಮೂಲಕ ಕಾಂಗ್ರೆಸ್‌ ಚುನಾವಣಾ ಪ್ರಕ್ರಿಯೆ ನಡೆಸುತ್ತಿರುವುದು ಸಾಸಲು ಸತೀಶ್‌ಚುನಾವಣೆಯಿಂದ ದೂರ ಇರಲು ಕಾರಣವಾಗಿದೆ. ಆದರೆ, ಜೆಡಿಎಸ್‌ನಲ್ಲಿ ಯಾವುದೇ ಬಂಡಾಯ ಇಲ್ಲ. ಮಾಜಿ ಶಾಸಕ ಸಿ.ಬಿ.ಸುರೇಶ್‌ ಬಾಬು ತಮ್ಮ ಪ್ರಚಾರವನ್ನು ಆರಂಭಿಸಿದ್ದಾರೆ.

ಪಪಂಗೆ 16 ಜನರು ನಮ್ಮ ಪಕ್ಷದಿಂದಸ್ಪರ್ಧಿಸಿದ್ದರು ಒಬ್ಬರ ನಾಮಪತ್ರತಿರಸ್ಕೃತಗೊಂಡಿತು.ಈಗ 15 ಅಭ್ಯರ್ಥಿಕಣದಲ್ಲಿ ಇದ್ದಾರೆ. 12ರಿಂದ 13 ಅಭ್ಯರ್ಥಿ ನಮ್ಮ ಜೆಡಿಎಸ್‌ ನಿಂದಗೆ ಲ್ಲುತ್ತಾರೆ ಎನ್ನುವ ವಿಶ್ವಾಸ ವಿದೆ. ಸಿ.ಬಿ.ಸುರೇಶ್‌ ಬಾಬು, ಮಾಜಿ ಶಾಸಕ

ಬಿಜೆಪಿಯಿಂದ ಹುಳಿಯಾರು ಪಪಂ ಚುನಾವಣೆಗೆ 15 ಅಭ್ಯರ್ಥಿ ಕಣದಲ್ಲಿ ಇದ್ದಾರೆ.ಅಭ್ಯರ್ಥಿಗಳನ್ನುಗೆಲ್ಲಿಸಲು ಈಗ ಪ್ರಚಾರ ಆರಂಭಿಸಿದ್ದೇವೆ. ಬಿಜೆಪಿಯಲ್ಲಿ ಬಂಡಾಯ ಇರುವ ಬಗ್ಗೆ ನಮಗೆ ಗೊತ್ತಿಲ್ಲ. ಡಾ.ಅಭಿಜ್ಞಾ, ಬಿಜೆಪಿ ಮುಖಂಡ

ಕಾಂಗ್ರೆಸ್‌ನಿಂದ ಹುಳಿಯಾರು ಪಪಂನ 16ಸ್ಥಾನಗಳಿಗೂ ಸ್ಪರ್ಧೆ ಮಾಡಲಾಗಿದೆ. ಎಲ್ಲಜಾತಿಗಳನ್ನು ಗಮನದಲ್ಲಿ ಇಟ್ಟು ಕೊಂಡು ಗೆಲುವುಸಾಧಿಸುವ ಅಭ್ಯರ್ಥಿಗೆ ಪಕ್ಷದ ಟಿಕೆಟ್‌ ನೀಡಿದ್ದೇವೆ.ನಮ್ಮಲ್ಲಿ ಯಾವುದೇ ಬಂಡಾಯ ಇಲ್ಲ. ವೈ.ಸಿ.ಸಿದ್ದರಾಮಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ.

ನಮ್ಮ ಬಿಜೆಪಿ ಪಕ್ಷದಲ್ಲಿ ಟಿಕೆಟ್‌ ನೀಡುವಲ್ಲಿ ನಮ್ಮ ಕಡೆಯಯಾರಿಗೂ ಟಿಕೆಟ್‌ನೀಡಿಲ್ಲ, ಆದ್ದರಿಂದ ಕೆಲವು ಕಾರ್ಯಕರ್ತರು ಬಂಡಾಯವಾಗಿ ನಿಂತಿದ್ದಾರೆ. ಎಂ.ಎಂಜಗದೀಶ್‌ ತಾಲೂಕು ಬಿಜೆಪಿ ಅಧ್ಯಕ್ಷ

ನಾನು ಹುಳಿಯಾರು ಪಪಂ ಚುನಾವಣೆ ಬಗ್ಗೆಏನೂ ಗಮನ ಹರಿಸಿಲ್ಲ, ನನಗೆ ಯಾವುದೇ ಜವಾಬ್ದಾರಿ ಪಕ್ಷ ನೀಡದ ಹಿನ್ನೆಲೆ ಸುಮ್ಮನಿದ್ದೇನೆ. ಪಕ್ಷದಿಂದ ಬಂಡಾಯ ಇರುವ ಬಗ್ಗೆ ನನಗೆ ಗೊತ್ತಿಲ್ಲ.ಮುಖಂಡರು ಹೇಳಿದಂತೆ ಕೆಲಸ ಮಾಡುತ್ತೇನೆ. – ಸಾಸಲು ಸತೀಶ್‌, ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ.

 

ಚಿ.ನಿ.ಪುರುಷೋತ್ತಮ್‌.

Advertisement

Udayavani is now on Telegram. Click here to join our channel and stay updated with the latest news.

Next