Advertisement

ಹುಳಿಯಾರು ಗ್ರಂಥಾಲಯಕ್ಕೆ ಬೇಕು ಕಾಯಕಲ್ಪ

04:32 PM Oct 09, 2020 | Suhan S |

ಹುಳಿಯಾರು: ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಲು ಮೂಲ ಅಧಾರವೇ ಗ್ರಂಥಾಲಯ. ಪತ್ರಿಕೆಗಳು ಜೊತೆಗೆ ಕವನ,ಸಾಹಿತ್ಯ, ಸಾಂಸ್ಕೃತಿಕ ಪರಂಪರೆ ಪುಸ್ತಕಗಳ ಓದುಗರಿಗೆ ಗ್ರಂಥಾಲಯವಿದ್ರೂ ಶಿಥಿಲಾವಸ್ಥೆ, ಮೂಲಭೂತ ಸೌಲಭ್ಯವೇ ಇಲ್ಲ.

Advertisement

ಹುಳಿಯಾರಿನ ರಾಮಹಾಲ್‌ ಮುಂಭಾಗದ ಪಂಚಾಯ್ತಿಯ ಕಟ್ಟಡದಲ್ಲಿ 1970ರಲ್ಲಿ ಆರಂಭವಾದ ಸಾರ್ವಜನಿಕ ಗ್ರಂಥಾಲಯ, ನಂತರ ಹಳೆ ಕೋರ್ಟ್‌ಕಟ್ಟಡಕ್ಕೆ ಸ್ಥಳಾಂತರಗೊಂಡಿತು. 1993ರಲ್ಲಿ ಪೇಟೆಬೀದಿಯ ಪಂಚಾಯ್ತಿ ಆವರಣದಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯ ಚಟುವಟಿಕೆ ಆರಂಭಿಸಿತು. ಆದರೆ ಇಲ್ಲಿನಕಳಪೆ ಕಟ್ಟಡದ ಪರಿಣಾಮ 15 ವರ್ಷಕ್ಕಾಗಲೇ ಕಟ್ಟಡ ಶಿಥಿಲಾವಸ್ಥೆ ತಲುಪಿತು. ಮಳೆ ಬಂದ್ರೆ ಕಟ್ಟಡದ ಒಳಗೆಲ್ಲ ಮಳೆ ನೀರು ಪುಸ್ತಕಗಳು ತೊಯ್ದುಹಾಳಾದವು.ಈಬಗ್ಗೆ ಗ್ರಂಥಾಲಯಇಲಾಖೆಯ ಗಮನಕ್ಕೆ ತರಲಾಗಿ ಸರ್ಕಾರಿ ಶಾಲೆಯಕಟ್ಟಡಕ್ಕೆ ವರ್ಗಾಯಿಸಲಾಯಿತು.

ಪುಸ್ತಕ ಜೋಡಿಸಲು ಸ್ಥಳವೇ ಇಲ್ಲ: ಈ ಶಾಲೆಯ ಕೊಠಡಿ ತೀರಾ ಸಣ್ಣದಾಗಿದ್ದು ಇರುವ ಪುಸ್ತಕಗಳನ್ನು ಜೋಡಿಸಲಾಗದೆ ಅಲ್ಮೆರಾ ಮತ್ತು ಕಪಾಟುಗಳಲ್ಲಿ ಸೇರಿಕೊಳ್ಳುತ್ತಿವೆ. ಕೆಲವು ದುಬಾರಿ ಮೌಲ್ಯದ ಪುಸ್ತಕಗಳನ್ನು ಜೋಡಿಸಲು ಸ್ಥಳಾ‌ವಕಾಶ ಇಲ್ಲದೆ ಮೂಟೆ ಕಟ್ಟಿ ಇಡಲಾಗಿದೆ. ಅಲ್ಲದೆ ಪಪಂನಿಂದ ಇತ್ತೀಚೆಗಷ್ಟೆ 2 ಲಕ್ಷ ರೂ. ಮೌಲ್ಯದ ಪುಸ್ತಕ ಖರೀದಿಸಿದ್ದರೂ ಸ್ಥಳವಕಾಶ ಕೊರತೆಯಿಂದ ಪುಸ್ತಕಗಳನ್ನೇ ಪಡೆಯದೆ ಪಂಚಾಯ್ತಿಯಲ್ಲೇ ಇಡಲಾಗಿದೆ.

ಗ್ರಂಥಾಲಯಕ್ಕೆಬಾರದಜನತೆ: ಪರಿಣಾಮ ಲಕ್ಷಾಂತರ ರೂ.ಗಳ ಸಾವಿರಾರು ಪುಸ್ತಕಗಳಿದ್ದರೂ ಓದುಗರಿಗೆ ಲಭ್ಯವಾಗುತ್ತಿಲ್ಲ. ಜತೆಗೆ ಗ್ರಂಥಾಲಯದಲ್ಲಿ ಮಕ್ಕಳಿಗೆ ಓದಲು ಅಗತ್ಯವಿರುವ ಯಾವುದೇ ಪುಸ್ತಕಗಳು ಸಿಗುತ್ತಿಲ್ಲ. ಮೊದಮೊದಲು ವಿದ್ಯಾರ್ಥಿಗಳು ಹಾಗೂ ನಾಗರಿಕರು ಪ್ರತಿದಿನ ಪತ್ರಿಕೆಗಳು ಮತ್ತು ಅಗತ್ಯವಿರುವ ಪುಸ್ತಕಗಳನ್ನು ಅಭ್ಯಾಸ ಮಾಡಲು ಬಂದರಾದರೂಸ್ಥಳವಿಲ್ಲದ ಕಾರಣ, ಪುಸ್ತಕ ‌ ಸಿಗದ ಕಾರಣ ಸಾರ್ವಜನಿಕರು ಗ್ರಂಥಾಲಯಕ್ಕೆ ಹೋಗುವುದನ್ನೇ ಬಿಟ್ಟಿದ್ದಾರೆ.

ಸ್ವಂತ ಕಟ್ಟಡ ಬೇಕು: ಅಲ್ಲದೆಹಾಲಿ ಗ್ರಂಥಾಲಯವಿರುವ ಕೊಠಡಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗೆ ಸೇರಿದ್ದು ಪ್ರಸಕ್ತ ಸಾಲಿನಿಂದ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕಿರುವುದರಿಂದ ತಕಣ ಕೊಠಡಿ ತೆರವು ಮಾಡುವಂತೆ ಮುಖ್ಯ ಶಿಕ್ಷಕರು ಸೂಚಿಸಿದ್ದಾರೆ. ಸ್ವಂತ ಕಟ್ಟಡ ಶಿಥಿಲವಾಗಿದ್ದು ಈಗ ಎಲ್ಲಿಗೆ ಹೋಗುವುದೆನ್ನುವ ಅತಂತ್ರತೆ ಗ್ರಂಥಾಲಯಾಧಿಕಾರಿಗಳನ್ನು ಕಾಡುತ್ತಿದೆ. ಹಾಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತಗಮನ ಹರಿಸಿ ತಕ್ಷಣ ಗ್ರಂಥಾಲಯದ ಕಟ್ಟಡ ದುರಸ್ತಿಮಾಡಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಓದುಗರು ಆಗ್ರಹಿಸಿದ್ದಾರೆ.

Advertisement

ಗ್ರಂಥಾಲಯದಲ್ಲಿ ಓದುಗರಿಗೆ ಮೂಲ ಸೌಕರ್ಯಗಳು ಇಲ್ಲದೆ ಓದುಗರು ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಅಲ್ಲದೆ 20ಸಾವಿರ ಜನಸಂಖ್ಯೆಯ ಪಂಚಾಯ್ತಿಯ ಲೈಬ್ರರಿಯಲ್ಲಿಕೇವಲ 2 ದಿನಪತ್ರಿಕೆ ಮಾತ್ರ ಓದುಗರಿಗೆ ಲಭ್ಯವಾಗುತ್ತಿದೆ. ಹಾಗಾಗಿ ಸ್ವಂತಕಟ್ಟಡ ದುರಸ್ತಿ ಮಾಡಿ ನೂತನ ಪೀಠೊಪಕರಣಗಳನ್ನು ಒದಗಿಸಿ ನಿತ್ಯ ಐದಾರು ದಿನಪತ್ರಿಕೆಗಳ ಜೊತೆ ಇರುವ ಸಾವಿರಾರೂ ಸಾಹಿತ್ಯ ಪುಸ್ತಕಗಳು ಓದುಗರಿಗೆ ಲಭ್ಯವಾಗುವಂತೆ ಮಾಡಬೇಕು.ನಾಗರಾಜು, ಓದುಗ

ಹಾಲಿ ಇದ್ದ ಪುಸ್ತಕಗಳನ್ನು ಜೋಡಿಸಲಾಗದೆ ಗಂಟುಕಟ್ಟಿ ಇಟ್ಟಿ ದ್ದೇವೆ. ಈಗ ಪಪಂ ಯಿಂದ 2 ಲಕ್ಷ ರೂ ಮೌಲ್ಯದ ‌ 10 ಸಾವಿರ ಪುಸ್ತಕಗಳನ್ನು ಖರೀ ದಿಸಿದ್ದಾರೆ. ಜೋಡಿಸಲು ಸ್ಥಳವಕಾಶ ಇಲ್ಲದೆ ಸ್ವೀಕರಿಸದೆ ಪಂಚಾಯ್ತಿಯಲ್ಲೇ ಇಡಲಾಗಿದೆ. ಈಗ ಇರುವಕಟ್ಟಡ ತೆರವಿಗಾಗಲೇಸೂಚಿಸಿದ್ದು ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಅವರ ಸಲಹೆ ಸೂಚನೆಗಾಗಿ ಕಾಯುತ್ತಿದ್ದೇನೆ. ಗಿರೀಶ್‌, ಗ್ರಂಥಾಲಯಾಧಿಕಾರಿ, ಹುಳಿಯಾರು

ಗ್ರಂಥಾಲಯದ ಕಟ್ಟಡ ದುರಸ್ತಿಗೆ ಮುಂದಾದಾಗಕಟ್ಟಡಸಂಪೂರ್ಣ ಶಿಥಿಲಗೊಂಡಿದ್ದು ಡೆಮಾಲಿಷ್‌ ಮಾಡಿ ಹೊಸ ಕಟ್ಟಡಕಟ್ಟಬೇಕೆಂದು ಎಂಜಿನಿಯರ್‌ ವರದಿ ನೀಡಿದ್ದಾರೆ. ಆದರೆ ಪಪಂನಲ್ಲಿ ಹೊಸಕಟ್ಟಡ ನಿರ್ಮಾಣಕ್ಕೆ ಹಣದಕೊರತೆಯಿದೆ. ಗ್ರಂಥಾಲಯ ಇಲಾಖೆಯೇ ಹೊಸಕಟ್ಟಡ ನಿರ್ಮಾಣ ಮಾಡಬೇಕಿದ್ದು, ಅಲ್ಲಿಯವರೆಗೂ ಈ ಮೊದಲು ಇದ್ದ ಶಿಶುವಿಹಾರದ ಬಳಿಯ ಕಟ್ಟಡ ಅಥವಾ ಅಂಬೇಡ್ಕರ್‌ ಭವನಕ್ಕೆ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡುತ್ತೇವೆ. ಮಂಜುನಾಥ್‌, ಮುಖ್ಯಾಧಿಕಾರಿ, ಪಪಂ, ಹುಳಿಯಾರು

ಸರ್ಕಾರಿ ಶಾಲೆಯ ಪುಟ್ಟ ಕೊಠಡಿಯಲ್ಲಿ ಬೆರಳೆಣಿಕೆಯಷ್ಟು ಪುಸ್ತಕಗಳನ್ನಿಟ್ಟು ಗ್ರಂಥಾಲಯ ನಡೆಸಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡಿರುವ ನೂರಾರು ವಿದ್ಯಾರ್ಥಿಗಳು ಓದಲು ಬರುವವರಾದರೂ ಪುಸ್ತಕ ಸಿಗದೆ ಬರುವುದನ್ನೇ ಬಿಟ್ಟಿದ್ದಾರೆ. ಹಾಗಾಗಿ ಹುಳಿಯಾರಿನಂತ ದೊಡ್ಡ ಹೋಬಳಿಯ ಗ್ರಂಥಾಲಯ ದೊಡ್ಡಕಟ್ಟಡದಲ್ಲಿ ಲಕ್ಷಾಂತರ ಪುಸ್ತಗಳು ಓದುಗರಿಗೆ ಸಿಗುವಂತೆ ಮಾಡಬೇಕು. ವಿ.ಎಚ್‌.ಜಯಣ್ಣ, ಓದುಗ

 

ಎಚ್‌.ಬಿ.ಕಿರಣ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next