ಹುಳಿಯಾರು: ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 243ರ ಕಾಮಗಾರಿ 1 ವರ್ಷದಿಂದ ನಡೆಯುತ್ತಿದೆ. ನೀಲನಕ್ಷೆ ತಿರುಚಿರುವುದು, ಚರಂಡಿ ಸ್ಲ್ಯಾಬ್ ಕಳಪೆ, ಮಂದಗತಿ ಕಾಮಗಾರಿ, ರಸ್ತೆಗೆ ನೀರು ಹಾಕದಿರುವುದು ಹೀಗೇ ಹಲವು ದೂರುಗಳು ಕಾಮಗಾರಿ ಆರಂಭವಾದ ದಿನದಿಂದ ಗುತ್ತಿಗೆದಾರರ ಮೇಲೆ ಒಂದಿಲ್ಲೊಂದು ಕೇಳಿಬರುತ್ತಲೇ ಇತ್ತು. ಈಗ ಹೊಸದಾಗಿ ಕೆರೆಯ ಕಾಲುವೆ ಮುಚ್ಚಿರುವ ಆರೋಪ ಕೇಳಿಬಂದಿದೆ.
Advertisement
ಕಾಮಗಾರಿ ಮಾಡುವಾಗ ಹಳೆಯ ಡಾಂಬರ್ ರಸ್ತೆ ಕಿತ್ತು ಅದನ್ನು ಹುಳಿಯಾರು ಕೆರೆಗೆ ನೀರು ಹರಿಯುವ ಕಾಲುವೆಗೆ ಸುರಿದಿದ್ದು, ಇದರಿಂದ ಭವಿಷ್ಯದಲ್ಲಿ ತೊಂದರೆಯಾಗಲಿದೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ಹೇಮೆ ನೀರು ಹರಿಯುವ ಕಾಲುವೆ: ಚಿಕ್ಕನಾಯಕನ ಹಳ್ಳಿ ತಾಲೂಕಿಗೆ ಮಂಜೂರಾಗಿರುವ ಹೇಮೆ ನೀರು ಹರಿಸುವ ಯೋಜನೆಯಲ್ಲಿ ತಿಮ್ಲಾಪುರ ಕೆರೆಯೂ ಸೇರಿದೆ. ಅಲ್ಲದೆ ಪಾವಗಡ ತಾಲೂಕಿಗೆ ಹೋಗುವ ಭದ್ರ ನೀರೂ ತಿಮ್ಲಾಪುರ ಕೆರೆ ಮೂಲಕ ಬೋರನಕಣಿವೆ ಜಲಾಶಯಕ್ಕೆ ಹೋಗುತ್ತದೆ. ಹಾಗಾಗಿ ಹೇಮೆ ಮತ್ತು ಭದ್ರ ಯೋಜನೆಯಿಂದ ತಿಮ್ಲಾಪುರ ಕೆರೆ ತುಂಬು ವುದು ಖಚಿತ ಎನ್ನಲಾಗಿದೆ. ತಿಮ್ಲಾಪುರ ಕೆರೆ ತುಂಬಿದರೆ ಹುಳಿಯಾರು ಕೆರೆಗೆ ನೀರು ಹರಿಯುತ್ತದೆ.
ಸ್ಥಳೀಯರ ಆಕ್ರೋಶ: ಹೇಮಾವತಿ ಕಾಮಗಾರಿ ಸಾಸಲು ಗ್ರಾಮದ ಬಳಿ ಶರವೇಗದಲ್ಲಿ ನಡೆಯುತ್ತಿದ್ದು, ಈ ಕಾಮಗಾರಿ ಮುಗಿದ ತಕ್ಷಣ ಹುಳಿ ಯಾರು ಒಣ ಕಾಲುವೆ ಒತ್ತುವರಿ ತೆರವು ಮಾಡಿ ಕಾಲುವೆ ಸ್ವಚ್ಛ ಮಾಡಿಸುವ ಚಿಂತನೆ ಸ್ಥಳೀಯರಲ್ಲಿತ್ತು. ಅಷ್ಟರಲ್ಲಾಗಲೇ ಗುತ್ತಿಗೆದಾರರು ಕಾಲುವೆ ಮುಚ್ಚಿ ದ್ದಾರೆ. ಕಾಮಗಾರಿ ಆರಂಭದಲ್ಲಿ ಒಣಕಾಲುವೆಗೆ ಗುತ್ತಿಗೆದರರು ಸೇತುವೆ ನಿರ್ಮಿಸಿದ್ದಾರೆ. ಆದರೂ ಸೇತುವೆ ಪಕ್ಕ ತ್ಯಾಜ್ಯ ಸುರಿದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.