ಲಿಂಗಸುಗೂರು: ಅಧಿಕಾರಿಗಳು ಸಭೆಗೆ ಗೈರಾಗಿದ್ದರಿಂದ ಶಾಸಕ ಡಿ.ಎಸ್.ಹೂಲಗೇರಿ ಆಕ್ರೋಶ ವ್ಯಕ್ತಪಡಿಸಿ ಕೆಡಿಪಿ ಸಭೆಮುಂದೂಡಿದ ಪ್ರಸಂಗ ಶನಿವಾರ ನಡೆಯಿತು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಡಿ.ಎಸ್.ಹೂಲಗೇರಿ ನೇತೃತ್ವದಲ್ಲಿ ಶನಿವಾರ ತ್ತೈಮಾಸಿಕಕೆಡಿಪಿ ಸಭೆ ನಡೆಯಿತು. ಸಭೆಗೆ ಪ್ರಮುಖ ಇಲಾಖೆ ಅಧಿಕಾರಿಗಳುಗೈರು ಹಾಜರಾಗಿದ್ದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದಶಾಸಕರು, ಗೈರಾದ ಅಧಿ ಕಾರಿಗಳಿಗೆ ನೋಟಿಸ್ ನೀಡಿನಂತರ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದುತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿಸ್ವಾಮಿಗೆ ಸೂಚಿಸಿದರು.
ತಾಲೂಕಿನಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳು ಸಮಪರ್ಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ ಜಿಲ್ಲಾ ಪಂಚಾಯಿತಿ ಎಇಇ ಶ್ರೀಮಂತ ಮಿಣಜಿಗಿ ಕಳೆದ ಸಭೆಯಲ್ಲಿ 15 ದಿನಗಳ ಒಳಗಾಗಿ ನೀರು ಒದಗಿಸುವುದಾಗಿಹೇಳಿದ್ದರು. ಆದರೆ 3 ತಿಂಗಳಾದರೂ ನೀರುಬಂದಿಲ್ಲ. ಕೇಳಿದರೆ ಸಬೂಬುಗಳನ್ನು ಹೇಳುತ್ತಿರಲ್ಲ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಪಾಟೀಲ ರೇಗಿದರು.ಈ ವೇಳೆ ಉತ್ತರಿಸಲು ತಡವರಿಸಿದ ಅ ಧಿಕಾರಿ ಇನ್ನೂ 15ದಿನಗಳ ಒಳಗೆ ಶುದ್ದ ಕುಡಿಯುವ ನೀರಿನ ಘಟಕದಿಂದ ನೀರು ಪೂರೈಸಲಾಗುವುದು ಎಂದು ಹೇಳಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವನಗೌಡ ಕಂಬಳಿ, ತಿಂಗಳೊಳಗೆ ಶುದ್ಧ ಕುಡಿಯುವ ನೀರಿನ ಘಟಕಗಳ ನೀರು ಪೂರೈಸುವಂತೆ ಸೂಚಿಸಿದರು. ಇದೇ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ| ರುದ್ರಗೌಡ ಪಾಟೀಲ ಅವರಿಗೆ ಆಸ್ಪತ್ರೆಗಳಲ್ಲಿನ ಸಮಸ್ಯೆಗಳ ಕುರಿತು ಶಾಸಕರು ಮಾಹಿತಿ ಪಡೆದರು. ನಾಗರಾಳಸೇರಿದಂತೆ ಇತರ ಆರೋಗ್ಯ ಕೇಂದ್ರಗಳ ಕುರಿತು ಸ್ಥಿತಿಗತಿ ವಿಚಾರಿಸಿದರು.ಶಿಕ್ಷಣ ಇಲಾಖೆ ಪ್ರಗತಿ ವರಿದಿಯನ್ನು ಅಕ್ಷರ ದಾಸೋಹದ ಅಧಿಕಾರಿ ಚಂದ್ರಶೇಖರ ಕುಂಬಾರ ಅನುಪಾಲನಾ ವರದಿ ಓದಲು ಮುಂದಾದರು. ಇದಕ್ಕೆ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಆದರೆ ಸಭೆಗೆ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆನಾನಾ ಇಲಾಖೆ ಅಧಿಕಾರಿಗಳು ಗೈರಾಗಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದ ಶಾಸಕರು ಸಭೆ ಮಂದೂಡುವಂತೆಸೂಚಿಸಿದರು. ಜಿಪಂ ಸದಸ್ಯೆ ರೇಣುಕಾ ಚಂದ್ರಶೇಖರ, ತಹಶೀಲ್ದಾರಚಾಮರಾಜ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.