Advertisement
ನಗರದ ಹೊಟೇಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ಆಯೋಜಿಸಿದ್ದ ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
Related Articles
Advertisement
ಚುನಾವಣೆ ಎಂದರೆ ಕಲೆ ಇದ್ದಂತೆ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೇತೃತ್ವದಲ್ಲಿ ಸ್ಕ್ಯಾನಿಂಗ್ ಕಮಿಟಿ ಆಗಬೇಕು. ಜಿ.ಪಂ. ಸದಸ್ಯರು ಮಾಜಿ ಸದಸ್ಯರಿಗೆ ಕನಿಷ್ಠ ನೂರು ಮತ ತರಿಸುವ ಜವಾಬ್ದಾರಿ ನೀಡಬೇಕು. ಚುನಾವಣೆ ಎಂದರೆ ಒಂದು ಕಲೆ ಇದ್ದಂತೆ. ಪ್ರಕಾಶ ಹುಕ್ಕೇರಿ ಸಾಕಷ್ಟು ಚುನಾವಣೆ ಮಾಡಿದ್ದಾರೆ. ಚುನಾವಣೆಗೆ ನಿಲ್ಲಲು ಆಸಕ್ತಿ ಬೇಕು, ಪ್ರಕಾಶ್ ಹುಕ್ಕೇರಿ ಬಳಿ ಇದೆ. ಸೀರಿಯಸ್ ಆಗಿ ಎಲ್ಲ ಕಾರ್ಯಕರ್ತರು ಚುನಾವಣೆ ಮಾಡಬೇಕು. ಚನ್ನರಾಜ ಹಟ್ಟಿಹೊಳಿ ಗೆಲುವಲ್ಲಿ ಕಾರ್ಯಕರ್ತರ ಪಾಲು ಹೆಚ್ಚು, ಮುಖಂಡರ ಪಾಲು ಕಡಿಮೆ. ಇದೂ ಕಾರ್ಯಕರ್ತರ ಚುನಾವಣೆ ಆಗಿದೆ ಎಂದರು.
ಮಾಜಿ ಸಚಿವ ಎ ಬಿ.ಪಾಟೀಲ್, ಶಾಸಕರಾದ ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಮಾಜಿ ಶಾಸಕರಾದ ರಮೇಶ ಕುಡಚಿ, ಕಾಕಾಸಾಹೇಬ ಪಾಟೀಲ, ಫಿರೋಜ ಸೇಠ, ನಗರ ಅಧ್ಯಕ್ಷ ರಾಜು ಸೇಠ, ಕೆಪಿಸಿಸಿ ಕಾರ್ಯದರ್ಶಿ ಸುನೀಲ ಹನಮಣ್ಣವರ, ಲಕ್ಷ್ಮಣರಾವ್ ಚಿಂಗಳೆ, ವಿನಯ ನಾವಲಗಟ್ಟಿ, ಅರವಿಂದ ದಳವಾಯಿ, ಪ್ರದೀಪ ಎಂ.ಜೆ., ವಿಶ್ವಾಸ ವೈದ್ಯ, ಪಂಚನಗೌಡ ದ್ಯಾಮನಗೌಡ, ಮಹಾವೀರ ಮೋಹಿತೆ, ಗಜಾನನ ಮಂಗಸೂಳಿ ಇತರರಿದ್ದರು.
18ನೇ ವಯಸ್ಸಿನಲ್ಲೇ ಮೀಸೆ ತಿರುವಿದ್ದೇನೆ: ಹುಕ್ಕೇರಿ ಚುನಾವಣೆ ಸ್ಪರ್ಧಿಸುವುದು ಹೊಸದಲ್ಲ. ಐದು ಬಾರಿ ಶಾಸಕನಾಗಿ, ಸಂಸದ, ಎಂಎಲ್‌ಸಿ ಆಗಿದ್ದೇನೆ. 18ನೇ ವಯಸ್ಸಿನಲ್ಲೇ ಮೀಸೆ ತಿರುವಿದ್ದೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರು ಸಚಿವ ಉಮೇಶ ಕತ್ತಿಗೆ ಟಾಂಗ್ ನೀಡಿದರು. ಈ ಸಲ ಗೆದ್ದು ಬಂದರೆ ಶಿಕ್ಷಕರ ಪರವಾಗಿ ಕೆಲಸ ಮಾಡುತ್ತೇನೆ. ಈ ಬಾರಿ ಅಷ್ಟೇ ಅಲ್ಲ, ಬಹಳ ಸಲ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಮಾಡಲಿ, ಚುನಾವಣೆ ಗೆಲುವಿನ ಮೂಲಕ ಉತ್ತರ ನೀಡುತ್ತೇನೆ ಎಂದರು.
ಕಾಂಗ್ರೆಸ್‌ನಲ್ಲೂ ಭಿನ್ನಮತದ ಹೊಗೆ? ವಾಯವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ಹೊಟೇಲ್‌ನಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿಯೂ ಭಿನ್ನಮತದ ಹೊಗೆ ಕಂಡು ಬಂದಿದ್ದು, ಸಭೆಗೆ ಶಾಸಕಿಯರಾದ ಲಕ್ಷ್ಮೀ ಹೆಬ್ಟಾಳಕರ ಹಾಗೂ ಡಾ. ಅಂಜಲಿ ನಿಂಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗೈರು ಉಳಿದಿದ್ದರು. ಶಾಸಕಿ ಹೆಬ್ಟಾಳಕರ ಅವರು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದು ಬರಲಾಗಿಲ್ಲ ಎಂದು ಹೆಬ್ಟಾಳಕರ ಪುತ್ರ ಮೃಣಾಲ್ ಹೆಬ್ಟಾಳಕರ ತಿಳಿಸಿದರು. ನಿಂಬಾಳಕರ ಹಾಗೂ ಹಟ್ಟಿಹೊಳಿ ಬೆಂಗಳೂರಿನಲ್ಲಿ ಇರುವುದಾಗಿ ಮಾಹಿತಿ ಸಿಕ್ಕಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸತೀಶ ಜಾರಕಿಹೊಳಿ, ಎಲ್ಲರೂ ಬರುತ್ತಾರೆ. ಅವರಿಗೂ ಅವರದ್ದೇ ಆದ ಕೆಲಸಗಳು ಇರುತ್ತವೆ. ಮದುವೆ, ಗೃಹ ಪ್ರವೇಶ ಈ ರೀತಿ ಕಾರ್ಯಕ್ರಮ ಇರುತ್ತವೆ. ಅವರು ಬರದೇ ಇದ್ದರೂ ನಮ್ಮ ಪಕ್ಷದ ಪರವಾಗಿ ಇರುತ್ತಾರೆ ಎಂದರು.
ಕೇಂದ್ರ ಸರ್ಕಾರ 30 ರೂಪಾಯಿ ತೈಲ ಬೆಲೆ ಏರಿಕೆ ಮಾಡಿದೆ. ಈಗ ಏಕಾಏಕಿ 9 ರೂ. ಇಳಿಕೆ ಮಾಡಿದೆ. ಪ್ರತಿ ದಿನವೂ 20 ರಿಂದ 30 ಪೈಸೆ ಏರಿಕೆ ಮಾಡಿದ್ದು ಕಂಡು ಬರುವುದಿಲ್ಲ. ಜನರಿಗೆ ತೋರಿಸಲು, ದಿಶಾ ಭೂಲ್ ಮಾಡಲು ಬಿಜೆಪಿಯ ನಾಟಕವಿದು. ಮುಂದಿನ 2-3 ತಿಂಗಳಲ್ಲಿ ಮತ್ತೆ ಏರಿಕೆ ಮಾಡುತ್ತದೆ. –ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷರು