Advertisement

ಪುಸ್ತಕಗಳನ್ನು ಮಾರಾಟ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ಕೈಗೊಳ್ಳಬೇಕು: ಹುಕ್ಕೇರಿ ಶ್ರೀ

05:08 PM May 28, 2022 | Team Udayavani |

ಪಣಜಿ: ಕರ್ನಾಟಕ ಸರ್ಕಾರವು ಡಿಜಿಟಲ್ ಗ್ರಂಥಾಲಯ ಮಾಡಿದೆ, ಆದರೆ ಇದರ ಜೊತೆಗೆ ಇರುವ ಪುಸ್ತಕಗಳು ಮಾರಾಟ ಮಾಡುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಬೇಕು ಎಂದು ಬೆಳಗಾವಿ ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ವಾಸ್ಕೋದ ಬೈನಾ ರವೀಂದ್ರ ಭವನದಲ್ಲಿ ಆಯೋಜಿಸಿದ್ದ “ಮಕ್ಕಳ ನೃತ್ಯೋತ್ಸವ” ಮತ್ತು ನಾಡಿನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಉದ್ಘಾಟನೆ ನೆರವೇರಿಸಿ, ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿ ಮಾತಾನಾಡಿದರು.

ನಮ್ಮ ಮಠದಿಂದ ಪ್ರಕಟವಾಗುವ ಪುಸ್ತಕ ನಮ್ಮ ವಚನದ ಐದನೇಯ ಮುದ್ರಣವಾಗಿದೆ. ಪುಸ್ತಕಕ್ಕಾಗಿಯೇ ನಮ್ಮ ಮಠ ಸುಮಾರು 28 ಲಕ್ಷ ರೂ.ಗಳನ್ನು ಖರ್ಚು ಮಾಡಿ ಪುಸ್ತಕಗಳನ್ನು ಹೊರತಂದಿದೆ. ಆದರೆ ಈ ಪುಸ್ತಕಗಳನ್ನು ಮಾರಾಟಕ್ಕಿಂತ ಹೆಚ್ಚಾಗಿ ಉಚಿತವಾಗಿ ವಿತರಣೆ ಮಾಡಿಯೇ ಖಾಲಿ ಮಾಡಲಾಗಿದೆ ಎಂದು ಹುಕ್ಕೇರಿ ಶ್ರೀಗಳು ಹೇಳಿದರು.

ಗೋವಾದಲ್ಲಿ ಕನ್ನಡ ಸಂಘಗಳಲ್ಲಿ ಅತೃಪ್ತಿ ಇರುವ ಮನಸ್ಸುಗಳನ್ನು ಕೂಡ ಕೆಲಸ ಮಾಡಬೇಕು. ಕಾರ್ಯಕ್ರಮ ಹಮ್ಮಿಕೊಳ್ಳುವುದರ ಜೊತೆಗೆ ಕಾರ್ಯಾಗಾರವನ್ನು ಮಾಡಬೇಕೆಂದು ಹೇಳಿದರು.

ಭಾರತವು ಸರ್ವ ಜನಾಂಗದ ಶಾಂತಿಯ ತೋಟ. ನನ್ನ ಮೂಲ ಮಂತ್ರ ದೇಶ ಮತ್ತು ಭಾಷೆ. ದೇಶಕ್ಕಾಗಿ ಭಾಷೆಗಾಗಿ ನಾನು ಮೈಕ್ ಕೊಟ್ಟರೂ ಬರ್ತಿನಿ, ಕಸಬರಿಗಿ ಕೊಟ್ಟರೂ ಬರ್ತಿನಿ. ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿ ಮಾಡಬೇಕು. ಕರ್ನಾಟಕದಲ್ಲಿರುವವರೆಲ್ಲರೂ ಕನ್ನಡಿಗರೇ. ಕನ್ನಡವನ್ನು ಉಳಿಸಿ ಬೆಳಸಬೇಕು. ಇದನ್ನು ಮೀರಿದರೆ ನಾನು ಕ್ಷಮಿಸುವುದಿಲ್ಲ ಎಂದು ಹೇಳಿದರು.

Advertisement

ಗೌರವ ಡಾಕ್ಟರೇಟ್ ಪಡೆದಿರುವ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ಹಾಗೂ ಪತ್ನಿ ನೀಲಮ್ಮ ಮೇಟಿ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಾಸ್ಕೊ ಮುರಗಾಂವ ಶಾಸಕ ಸಂಕಲ್ಪ ಅಮೋಣಕರ್, ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ. ಸಿದ್ಧಣ್ಣ ಮೇಟಿ, ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ ಕುಮಾರ ಹೊಸ್ಮನಿ, ಮಿಸ್ ಇಂಡಿಯಾ ವಿಜೇತೆ ಡಾ. ಪೂಜಾ ರಮೇಶ್, ಮಕ್ಕಳ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ದಿಲೀಪ ಭಜಂತ್ರಿ, ಮತ್ತಿತರರು ಉಪಸ್ಥಿತರಿದ್ದರು.

ಜನ್ಮಭೂಮಿ ಫೌಂಡೇಶನ್ ಮಾರುತಿ ಬಡಿಗೇರ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು, ಶೀಲಾ ಪ್ರದೀಪ ಮೇಸ್ತ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next