Advertisement

ಹುನಗುಂದ ಕೃಷಿ ಸಂಸ್ಕರಣಾ ಕಾರಿಡಾರ್‌

06:15 AM Jan 29, 2018 | Team Udayavani |

ಹುನಗುಂದ(ಬಾಗಲಕೋಟೆ): ಅತಿ ದೊಡ್ಡ ಸೂಕ್ಷ್ಮ ಹನಿ ನೀರಾವರಿ ಯೋಜನೆಯ ಯಶಸ್ವಿ ಅನುಷ್ಠಾನದ ಮೂಲಕ ವಿಶ್ವದ ಗಮನಸೆಳೆದಿರುವ ಹುನಗುಂದ, ಈಗ ಉತ್ತರ ಕರ್ನಾಟಕದ “ಕೃಷಿ ಸಂಸ್ಕರಣಾ ಕಾರಿಡಾರ್‌’ ಆಗಿ ಪರಿವರ್ತನೆ ಆಗಲಿದೆ.

Advertisement

ಸಂಸ್ಕರಣಾ ಘಟಕಗಳು, ನೇರ ಮಾರುಕಟ್ಟೆ, ಕೃಷಿಗೆ ಸಂಬಂಧಿಸಿದ ಕೈಗಾರಿಕೆಗಳು ಸೇರಿ ಬರದ ನಾಡಿನ ಸಮಗ್ರ ಕೃಷಿ ಬೆಳವಣಿಗೆಗೆ ಇದು ಮುನ್ನುಡಿ ಬರೆಯಲಿದೆ.

ಈ ನಿಟ್ಟಿನಲ್ಲಿ ಸರ್ಕಾರ 15 ಕಂಪೆನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಬೀಜ ಬಿತ್ತನೆಯಿಂದ ಹಿಡಿದು ಮಾರುಕಟ್ಟೆ ಹಂತದವರೆಗೂ ಸಮಗ್ರ ಕೃಷಿ ನಿರ್ವಹಣೆ ಇದರಡಿ ಆಗಲಿದೆ. ಇದು ರೈತರ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹುನಗುಂದ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ ಭಾಗದಲ್ಲಿ ಈ ಕಾರಿಡಾರ್‌ ನಿರ್ಮಾಣವಾಗಲಿದೆ ಎಂದರು.

13 ಲಕ್ಷ ಎಕರೆ ವಿಸ್ತರಣೆ: ವಿಶ್ವದ ಅತಿ ದೊಡ್ಡ ಸೂಕ್ಷ್ಮ ಹನಿ ನೀರಾವರಿ ಯೋಜನೆ ಯಶಸ್ವಿ ಬೆನ್ನಲ್ಲೇ ಮುಂದಿನ 5 ವರ್ಷಗಳಲ್ಲಿ 13 ಲಕ್ಷ ಎಕರೆ ಪ್ರದೇಶದಲ್ಲಿ ಸೂಕ್ಷ್ಮಹನಿ ನೀರಾವರಿಯನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ. ಇದರಿಂದ ಒಟ್ಟಾರೆ ರಾಜ್ಯದ ಮಳೆಯಾಶ್ರಿತ ಪ್ರದೇಶದಲ್ಲಿ ಸುಮಾರು ಶೇ.20ರಷ್ಟು ಸೂಕ್ಷ್ಮ ಹನಿ ನೀರಾವರಿಯ ವ್ಯಾಪ್ತಿಗೊಳಪಡಲಿದೆ. ಈ ಪೈಕಿ ಈಗಾಗಲೇ ವಿವಿಧ ಹಂತಗಳಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

Advertisement

“ಆದರೆ, ಕೇವಲ ರಾಜ್ಯ ಸರ್ಕಾರದಿಂದ ಎಲ್ಲಡೆ ಸೂಕ್ಷ್ಮ ಹನಿನೀರಾವರಿ ಯೋಜನೆ ಅಸಾಧ್ಯದ ಮಾತು. ಕೇಂದ್ರ ಸರ್ಕಾರ ಕನಿಷ್ಠ ಶೇ.50ರಷ್ಟು ಸಬ್ಸಿಡಿ ನೀಡಬೇಕು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಹೇಳುತ್ತಾರೆ’.

ಈ ಪೈಕಿ ಭದ್ರಾ ಮೇಲ್ದಂಡೆಯಲ್ಲೇ 5.50 ಲಕ್ಷ ಎಕರೆ ಪ್ರದೇಶವನ್ನು ಸೂಕ್ಷ್ಮ ಹನಿ ನೀರಾವರಿಗೆ ಪರಿವರ್ತಿಸಲಾಗುವುದು. ಉಳಿದಂತೆ ಸಿಂಗಟಾಲೂರಿನಲ್ಲಿ 2.5 ಲಕ್ಷ, ಕೊಪ್ಪಳ 2.8 ಲಕ್ಷ, ಮಳವಳ್ಳಿಯಲ್ಲಿ 75 ಸಾವಿರ, ತರೀಕೆರೆ 50 ಸಾವಿರ ಎಕರೆಯಲ್ಲಿ ವಿಸ್ತರಿಸಲಾಗುವುದು. ಖಾಸಗಿ ಸಹಭಾಗಿತ್ವದಲ್ಲೂ ಇದನ್ನು ಅನುಷ್ಠಾನಗೊಳಿಸಲು
ಚಿಂತನೆ ನಡೆದಿದೆ ಎಂದರು.

ಲಭ್ಯ ನೀರಲ್ಲಿ ದುಪ್ಪಟ್ಟು ನೀರಾವರಿ: ಹುನಗುಂದ ತಾಲೂಕಿನ ರಾಮಥಾಳ (ಮರೋಳ)ದಲ್ಲಿ ಈಗಾಗಲೇ ಪ್ರಾಯೋಗಿಕವಾಗಿ 60 ಸಾವಿರ ಎಕರೆಯಲ್ಲಿ ಸೂಕ್ಷ್ಮ ಹನಿ ನೀರಾವರಿ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ. ಇದರಿಂದ ಹುನಗುಂದ ತಾಲೂಕಿನ ಒಟ್ಟು 55 ಹಳ್ಳಿಗಳ ಸುಮಾರು 15 ಸಾವಿರ ರೈತರಿಗೆ ಅನುಕೂಲವಾಗಲಿದೆ ಎಂದರು. ಸೂಕ್ಷ್ಮ ಹನಿ ನೀರಾವರಿ ಪದಟಛಿತಿಯಲ್ಲಿ 23 ಬೆಳೆ ಬೆಳೆಯಬಹುದು. ಇಳುವರಿ ಕೂಡ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next