Advertisement

ವಿಶ್ವಕಪ್‌ ವಿಜೇತ ಲೋರಿಸ್‌ಗೆ 65 ಸಾವಿರ ಡಾಲರ್‌ ದಂಡ

06:05 AM Sep 13, 2018 | Team Udayavani |

ಲಂಡನ್‌: ಸೆಂಟ್ರಲ್‌ ಲಂಡನ್‌ನಲ್ಲಿ ಕುಡಿದು ವಾಹನ ಚಲಾಯಿಸಿದ ಕಾರಣಕ್ಕಾಗಿ ಫ್ರಾನ್ಸ್‌ನ ಫ‌ುಟ್ಬಾಲ್‌ ವಿಶ್ವಕಪ್‌ ವಿಜೇತ ನಾಯಕ ಹುಗೊ ಲೋರಿಸ್‌ ಅವರಿಗೆ 65 ಸಾವಿರ ಡಾಲರ್‌ ದಂಡ ವಿಧಿಸಲಾಗಿದೆ. ಜೈಲು ಶಿಕ್ಷೆ ತಪ್ಪಿಸಿಕೊಂಡ ಅವರು 20 ತಿಂಗಳ ಕಾಲ ಚಾಲನಾ ಪರವಾನಿಗೆ ನಿಷೇಧ ಪಡೆದಿದ್ದಾರೆ.

Advertisement

ಅವರ ವರ್ತನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದ್ದರು. ಆದರೆ ಅವರು ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡ ಕಾರಣ ಜೈಲು ಶಿಕ್ಷೆಯ ಬದಲು 20 ತಿಂಗಳ ಕಾಲ ಚಾಲನಾ ಪರವಾನಿಗೆ ನಿಷೇಧ ಹಾಗೂ 65 ಸಾವಿರ ಡಾಲರ್‌ ದಂಡ ವಿಧಿಸಲಾಗಿದೆ.

ಕುಡಿದು ಕಾರು ಚಲಾಯಿಸಿದ್ದ ಲೋರಿಸ್‌ ಪಾರ್ಕಿಂಗ್‌ ಮಾಡಿದ ಕಾರುಗಳಿಗೆ ಢಿಕ್ಕಿ ಮಾಡುವವರಿದ್ದರಲ್ಲದೇ ರೆಡ್‌ ಲೈಟ್‌ ಇದ್ದರೂ ವಾಹನ ಚಲಾಯಿಸಿದ್ದರು. ತತ್‌ಕ್ಷಣ ಅವರನ್ನು ಬಂಧಿಸಿದ್ದ ಪೊಲೀಸರು ಆರು ತಾಸು ಬಂಧನದಲ್ಲಿ ಇರಿಸಿದ್ದರು. ಆಬಳಿಕ ಬರಿಗಾಲಲ್ಲಿ ಮನೆಗೆ ತೆರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next