ಲಾಸ್ ಏಂಜಲೀಸ್: ಜನಪ್ರಿಯ ಮ್ಯಾಗಜಿನ್ ಪ್ಲೇಬಾಯ್ ಸಂಸ್ಥಾಪಕ ಹಗ್ ಎಂ. ಹಫ್ನರ್ ( 91 ವ.)ಬುಧವಾರ ತಡರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.
“ಹಗ್ ಹಫ್ನರ್ ವಯೋ ಸಹಜ ಸಾವು ಕಂಡಿದ್ದಾರೆ. ಇಲ್ಲಿನ ತಮ್ಮ ನಿವಾಸದಲ್ಲಿಯೇ ಕೊನೆಯುಸಿರೆಳೆದಿದ್ದಾರೆ’ ಎಂದು ಪ್ಲೇಬಾಯ್ ಆಡಳಿತ ಮಂಡಳಿ ತಿಳಿಸಿದೆ.
ನಿರಂತರ ಪೈಪ್ ಸ್ಮೋಕಿಂಗ್ ಮೂಲಕ ಮನೆಮಾತಾಗಿದ್ದ ಹೆಫ°ರ್, 1950ರ ದಶಕದಲ್ಲಿಯೇ ಲೈಂಗಿಕ ಕ್ರಾಂತಿಗೆ ಕಾರಣರಾಗಿದ್ದರು. ಗರ್ಭನಿರೋಧಕಗಳು ನಿಷೇಧವಾಗಿ ರುವ ಸಂದರ್ಭ, “ಗರ್ಭಿಣಿ’ ಎಂಬ ಪದ ಬಳಕೆಗೂ ಅವಕಾಶ ಕೊಡದ ಸ್ಥಿತಿ ಇದ್ದ ಸಂದರ್ಭ ದಲ್ಲಿಯೇ ಲೈಂಗಿಕತೆಯನ್ನು ಮುಖ್ಯವಾಹಿನಿಗೆ ತರುವಲ್ಲಿ ಕ್ರಾಂತಿಯನ್ನೇ ನಡೆಸಿದ್ದರು. ಮಲ್ಟಿಮೀಡಿಯಾ ಎಂಪೈರ್ ಕ್ಲಬ್ ಕಟ್ಟಿ ಬೆಳೆಸಿ ಮೆಚ್ಚುಗೆಗೂ ಪಾತ್ರರಾಗಿದ್ದರು.
ಮರ್ಲಿನ್ ಮನ್ರೊàರ ಬೆತ್ತಲೆ ಫೋಟೋವನ್ನು ಪ್ಲೇಬಾಯ್‌ನ ಮುಖಪುಟದಲ್ಲಿ ಪ್ರಕಟಿಸಿದ್ದ ಅವರು, 1953ರ “ಗರ್ಭಿಣಿ’ ಪದ ಬಳಕೆ ಬಗ್ಗೆ ನಿರ್ಬಂಧ ಇದ್ದ ಸಂದರ್ಭದಲ್ಲಿ ಪ್ಲೇಬಾಯ್ ಮ್ಯಾಗಜಿನ್‌ನಲ್ಲಿ “ಐ ಲವ್ ಲೂಸಿ’ ಎಂದು ಪ್ರಕಟಿಸಿದ್ದರು. ಬೆತ್ತಲಾಗಿರುವ ಹಾಗೂ ಹಸಿ-ಬಿಸಿ ಫೋಟೊಗಳನ್ನು ಬಳಸಿಕೊಳ್ಳುವುದರಲ್ಲಿ ಹೆಫ°ರ್ ಭಾರೀ ಕ್ರಾಂತಿಯನ್ನೇ ನಡೆಸಿದ್ದರು. “ಪ್ಲೇಬಾಯ್ ಸೆಕ್ಸ್ ಮ್ಯಾಗಜಿನ್ ಅಲ್ಲ, ಅದೊಂದು ಲೈಫ್ಸ್ಟೈಲ್ ಮ್ಯಾಗಜಿನ್. ನಾನು ಎಂದೂ ಸೆಕ್ಸ್ ಎನ್ನುವುದನ್ನು ಭಾರೀ ಮಡಿವಂತಿಕೆಯಿಂದ ಕಂಡೇ ಇಲ್ಲ. ಅದೂ ಕೂಡ ಜೀವನ ಕ್ರಿಯೆ ಎಂದೇ ಹೇಳುತ್ತೇನೆ’ ಎಂದು ಹಗ್ ಹೆಫ°ರ್ 2002ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.