Advertisement

ರಾಂಚಿಯಲ್ಲಿ ನಡೆಯಲಿದೆ ಬೃಹತ್‌ ಯೋಗ ಶಿಬಿರ

09:11 AM Jun 22, 2019 | Team Udayavani |

ವಿಶ್ವಾದ್ಯಂತ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮ ಮನೆಮಾಡಲಿದೆ. ಜಾರ್ಖಂಡ್‌ನ‌ ರಾಂಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬೃಹತ್‌ ಯೋಗ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ.

Advertisement

ಇಲ್ಲಿನ ಪ್ರಭಾತ್‌ ತಾರಾ ಮೈದಾನದಲ್ಲಿ ಈ ಯೋಗ ಶಿಬಿರ ನಡೆಯಲಿದ್ದು, ಗುರುವಾರ ರಾತ್ರಿಯೇ ಪ್ರಧಾನಿ ಮೋದಿ ರಾಂಚಿಗೆ ತಲುಪಿ ದ್ದಾರೆ. ಇದು 5ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಾಗಿದ್ದು, ಈ ವರ್ಷ “ಯೋಗ ಫಾರ್‌ ಹಾರ್ಟ್‌'(ಹೃದಯಕ್ಕಾಗಿ ಯೋಗ) ಎಂಬ ಸ್ಲೋಗನ್‌ ನೀಡಲಾಗಿದೆ.

ಸಿಎಂ ರಘುಬರ್‌ ದಾಸ್‌, ರಾಜ್ಯಪಾಲರಾದ ದ್ರೌಪತಿ ಮುರ್ಮು, ಆಯುಷ್‌ ಖಾತೆ ಸಹಾಯಕ ಸಚಿವ ಶ್ರೀಪಾದ್‌ ನಾಯ್ಕ, ಜಾರ್ಖಂಡ್‌ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ ಮತ್ತಿತರರು ಭಾಗವಹಿಸಲಿದ್ದಾರೆ.

ಯೋಗ ಕಾರ್ಯಕ್ರಮ
– ರಾಂಚಿಯ ಪ್ರಭಾತ್‌ ತಾರಾ ಗ್ರೌಂಡ್‌
- 6.00 AM
–  40,000 ಮಂದಿ ಭಾಗಿ

ಏನೇನು ವ್ಯವಸ್ಥೆಗಳು?
– ಗುರುವಾರ ರಾತ್ರಿಯಿಂದಲೇ ಉಚಿತ ಬಸ್‌ ಸೇವೆ ಆರಂಭ
– ಮುಂಜಾವು 3 ಗಂಟೆಗೇ ಮೈದಾನದ ಗೇಟ್‌ ತೆರೆಯಲಾಗುತ್ತದೆ
– 400 ತಾತ್ಕಾಲಿಕ ಶೌಚಾಲಯಗಳ ನಿರ್ಮಾಣ
– 200 ಕುಡಿಯುವ ನೀರಿನ ಕಿಯೋಸ್ಕ್ಗಳು
– 8 ವೈದ್ಯಕೀಯ ತಂಡಗಳು, 21 ಆ್ಯಂಬುಲೆನ್ಸ್‌ಗಳು
– 100 ಸಿಸಿಟಿವಿ ಕ್ಯಾಮೆರಾಗಳು
– ಕಾರ್ಯಕ್ರಮದ ನೇರ ಪ್ರಸಾರ ಕ್ಕಾಗಿ 28 ಡಿಸ್‌ಪ್ಲೇ ಪರದೆಗಳು

Advertisement
Advertisement

Udayavani is now on Telegram. Click here to join our channel and stay updated with the latest news.

Next