Advertisement

ಕಾಶೀಶ್ವರನ ಸನ್ನಿಧಿಯಲ್ಲಿ ಅದ್ಧೂರಿ ಪೂಜೆ

06:36 AM Mar 05, 2019 | |

ಕೆ.ಆರ್‌.ಪುರ: ಮಹಾ ಶಿವರಾತ್ರಿ ಪ್ರಯುಕ್ತ ಹೊರಮಾವು ಗ್ರಾಮದಲ್ಲಿ ಕಾಶೀಶ್ವರ ದೇವಾಲಯದಲ್ಲಿ  51 ದೇವರ ಮೂರ್ತಿ ಪ್ರತಿಷ್ಠಾಪಿಸಿ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ವಿಶೇಷ ಪೂಜೆ ಹೋಮ ಹವನಗಳು ನಡೆದವು.

Advertisement

ಇತಿಹಾಸ ಪ್ರಸಿದ್ಧ ಹೊರಮಾವು ಕಾಶೀಶ್ವರ ದೇವಾಲಯದಲ್ಲಿ ಹತ್ತು ವರ್ಷಗಳಿಂದ ಶಿವರಾತ್ರಿ ಅಂಗವಾಗಿ ವೆಂಕಟೇಶ್ವರ ಸ್ವಾಮಿ, ಪಂಚಲಿಂಗೇಶ್ವರ, ಸಪಲಮ್ಮ, ರೇಣುಕಮ್ಮ, ಯಲಮ್ಮ ಅಣ್ಣಮ್ಮ, ಗಂಗಮ್ಮ ಸೇರಿದಂತೆ 51 ದೇವರುಗಳ ಮೂರ್ತಿಗಳನ್ನು  ಪ್ರತಿಷ್ಠಾಪಿಸಿ ವಿವಿಧ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ಬೆಳಗ್ಗೆ 6 ಗಂಟೆಯಿಂದ ಪುಣ್ಯಾಹ, ನವಗ್ರಹ ಪೂಜೆ, ನವಗ್ರಹ ಹೋಮ, ಗಣಪತಿ ಪೂಜೆ, ಗಣಪತಿ ಹೋಮ, ಪುಷ್ಪಾರ್ಚನೆ, ಸೂರ್ಯೋದಯ ಪೂಜೆ, ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ನೈವೇದ್ಯ, ಅಷ್ಟದ್ರವ್ಯಗಳಿಂದ ಅಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.

ಕಲ್ಕೆರೆ, ರಾಮಮೂರ್ತಿನಗರ ಜಯಂತಿನಗರ, ಅಕ್ಷಯನಗರ, ಬಂಜಾರ ಲೇಔಟ್‌, ಕನಕನಗರ ,ಕೆ.ಚೆನ್ನಸಂದ್ರ, ಕಲ್ಯಾಣನಗರ, ಬಾಣಸವಾಡಿ, ಹೆಣ್ಣೂರು ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತರು ದರ್ಶನ ಪಡೆದರು.ಈ ವೇಳೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next