ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ನಡೆ ಯುತ್ತಿರುವ ದತ್ತ ಜಯಂತಿ ಉತ್ಸವದ ಅಂಗ ವಾಗಿ ನಗರದಲ್ಲಿ ಬುಧವಾರ ದತ್ತಮಾಲಾ ಧಾರಿಗಳು ಬೃಹತ್ ಶೋಭಾಯಾತ್ರೆ ನಡೆಸಿದರು.
ನಗರದ ಕಾಮಧೇನು ಗಣಪತಿ ದೇವಾಲಯದಿಂದ ಆರಂಭವಾದ ಶೋಭಾಯಾತ್ರೆಗೆ ಸಚಿವ ಸಿ.ಟಿ.ರವಿ, ಭಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ, ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಶಿವಶಂಕರ್, ಜಿಲ್ಲಾ ಕಾರ್ಯದರ್ಶಿ ಯೋಗೀಶ್‌ರಾಜ್ ಅರಸ್ ಚಾಲನೆ ನೀಡಿದರು.
ಬಳಿಕ ಕೆಇಬಿ ವೃತ್ತದ ಮೂಲಕ ಮೆರವಣಿಗೆಯಲ್ಲಿ ತೆರಳಿದ ಮಾಲಾಧಾರಿಗಳು, ಬಸವನಹಳ್ಳಿ ಮುಖ್ಯ ರಸ್ತೆಯಿಂದ ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ವೃತ್ತಕ್ಕೆ ಆಗಮಿಸಿದರು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.
ಶೋಭಾಯಾತ್ರೆಯಲ್ಲಿ ದತ್ತ ವಿಗ್ರಹ, ಚಂಡೆ, ವೀರಭದ್ರ ಕುಣಿತ, ಡೊಳ್ಳು ಕುಣಿತ, ಕೀಲು ಕುದುರೆ, ಕರಡಿ ಕುಣಿತ, ಕೋಲು ಕುಣಿತ, ವಾದ್ಯಗೋಷ್ಠಿಗಳಿದ್ದರೆ ವಿಶೇಷವಾಗಿ ಗ್ರಾಮೀಣ ಪ್ರದೇಶದ ದೇವರ ಅಡ್ಡೆಗಳನ್ನು ತರಲಾಗಿತ್ತು. ವಾದ್ಯಗೋಷ್ಠಿಗೆ ತಕ್ಕಂತೆ ಮಾಲಾಧಾರಿಗಳು ನೃತ್ಯ ಮಾಡುತ್ತಿದ್ದರು. ಮತ್ತೆ ಕೆಲವು ಯುವಕರು ಬೃಹತ್ ಕೇಸರಿ ಧ್ವಜ ಮತ್ತು ಭಗವಾ ಧ್ವಜಗಳನ್ನು ಹಿಡಿದು ಕೊಂಡು ಸಂಚರಿಸುತ್ತಿದ್ದುದು ಕಂಡು ಬಂತು.ಮಾಡಿದರು.
ದತ್ತಪೀಠ ವಿವಾದವನ್ನು ಅಯೋಧ್ಯೆ ಮಾದರಿಯಲ್ಲಿ ಬಗೆಹರಿಸಲಾಗುವುದು. ದತ್ತಪೀಠ ಹೋರಾಟ ನ್ಯಾಯಯುತ ಹಾಗೂ ತತ್ವಬದ್ಧ ಹೋರಾಟವಾಗಿದೆ. ಈ ಬಾರಿ ವಿವಾದವನ್ನು ಬಗೆಹರಿಸುವ ಸಂಕಲ್ಪ ಮಾಡಿದ್ದೇನೆ. ಅಲ್ಲದೇ, ದತ್ತಮಾಲಾಧಾರಿಯಾಗಿ ಭಿûಾಟನೆ ಮಾಡಿದ್ದೇನೆ. ವಿವಾದ ಬಗೆಹರಿಸುವ ವಿಶ್ವಾಸವಿದೆ.
-ಸಿ.ಟಿ.ರವಿ, ಸಚಿವ