Advertisement

London; ಪ್ಯಾಲೆಸ್ತೀನ್ ಪರ ಬೃಹತ್ ಪ್ರತಿಭಟನಾ ಮೆರವಣಿಗೆ

05:59 PM Nov 26, 2023 | Vishnudas Patil |

ಲಂಡನ್‌: ಸೆಂಟ್ರಲ್ ಲಂಡನ್‌ನಲ್ಲಿ ಶನಿವಾರ ಪ್ಯಾಲೆಸ್ತೀನ್ ಪರ ಹತ್ತು ಸಾವಿರಕ್ಕೂ ಹೆಚ್ಚು ಜನರು ಬೀದಿಗಿಳಿದು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಕನಿಷ್ಠ 18 ಜನರನ್ನು ಬಂಧಿಸಿದ್ದಾರೆ.

Advertisement

ಪ್ರತಿಭಟನಾಕಾರರು ಗಾಜಾದಲ್ಲಿ ಶಾಶ್ವತ ಕದನ ವಿರಾಮಕ್ಕೆ ಒತ್ತಾಯಿಸಿದ್ದಾರೆ. ಮೆಟ್ರೋಪಾಲಿಟನ್ ಪೋಲಿಸ್ ಪ್ರಕಾರ, ಅಧಿಕಾರಿಗಳು ಜನಾಂಗೀಯ ದ್ವೇಷವನ್ನು ಪ್ರಚೋದಿಸುವ ಶಂಕೆಯ ಮೇಲೆ ಕೆಲವರನ್ನು ಬಂಧಿಸಿದ್ದಾರೆ.

ನಾಝಿ ಚಿಹ್ನೆಗಳನ್ನು ಹೊಂದಿರುವ ಫಲಕವನ್ನು ಹೊತ್ತಿದ್ದು, ಸ್ಟಾರ್ ಆಫ್ ಡೇವಿಡ್ ಒಳಗೆ ಸ್ವಸ್ತಿಕವನ್ನು ಒಳಗೊಂಡ ಸಾಹಿತ್ಯವನ್ನುವಿತರಿಸಿದ್ದಕ್ಕಾಗಿ ಇತರ ನಾಲ್ವರನ್ನು, ಹಮಾಸ್ ನಂತೆಯೇ ಬಿಳಿ ಅರೇಬಿಕ್ ಲಿಪಿಯೊಂದಿಗೆ ಹಸಿರು ಹೆಡ್‌ಬ್ಯಾಂಡ್‌ಗಳನ್ನು ಧರಿಸಿದ್ದಕ್ಕಾಗಿ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 7 ರಿಂದ 49 ದಿನಗಳ ಯುದ್ಧದ ನಂತರ ನಾಲ್ಕು ದಿನಗಳ ಕದನ ವಿರಾಮದ ಎರಡನೇ ದಿನದಂದು ಪ್ರತಿಭಟನೆಗಳು ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next