Advertisement

ಫೆ. 15 ಕ್ಕೆ ಕೊರಟಗೆರೆಯಲ್ಲಿ ಬೃಹತ್ ಉದ್ಯೋಗ ಮೇಳ; ನೂರಕ್ಕೂ ಹೆಚ್ಚು ಕಂಪನಿಗಳು ಭಾಗಿ

08:02 PM Feb 12, 2023 | Team Udayavani |

ಕೊರಟಗೆರೆ:  ಸಿದ್ದಾರ್ಥ ಸಂಸ್ಥೆ, ರಾಷ್ಟೀಯ ವೃತ್ತಿ ಸೇವೆ ಯೋಜನೆಯಡಿಯಲ್ಲಿ ಕೈಗಾರಿಕಾ ತರಭೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೊಗ ವಿನಿಮಯ ಕಚೇರಿ ಮತ್ತು ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಫೆ. 15 ರಂದು ಉದ್ಯೋಗ ಮೇಳ ನಡೆಯಲಿದೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಫೆ. 15 ರಂದು ನಡೆಯುವ ಉದ್ಯೋಗ ಮೇಳದ ಪೋಸ್ಟರ್ ಮತ್ತು ಕರಪತ್ರಗಳನ್ನು ಬಿಡುಗಡೆ ಮಾಡಿದರು. ಉದ್ಯೋಗ ಮೇಳದಲ್ಲಿ ಸಮಾರು ನೂರಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳು ಪಾಲ್ಗೊಳ್ಳಲಿದ್ದು ಪದವಿ, ಐಟಿಐ, ದಿಪ್ಲೋಮೋ ಮಾಡಿರುವಂತಹ ಎಲ್ಲಾ ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದರು.

ಪೀಣ್ಯ ಇಂಡಸ್ಟ್ರಿಸ್ ಅಸೋಸಿಯೇಷನ್ ನ  ಮಾಜಿ ಅಧ್ಯಕ್ಷ ಡಿ.ಟಿ ವೆಂಕಟೇಶ್ ಮಾತನಾಡಿ, ಪ್ರತಿಯೊಬ್ಬರಿಗೂ ಉದ್ಯೋಗದ ಮತ್ತು ಉತ್ತಮ ಭವಿಷ್ಯದ ಕನಸು ಇರುತ್ತದೆ. ಇದಕ್ಕೆ ಪೂರಕವೆಂಬಂತೆ ಉತ್ತಮ ರೀತಿಯಲ್ಲಿ ತಯಾರಿಯನ್ನು ಮಾಡಿಕೊಂಡು ಅತ್ಯುತ್ತಮ ಹುದ್ದೆಯನ್ನು ಅಲಂಕರಿಸ ಬಹುದಾಗದಿದ್ದು ಇದಕ್ಕೆ ಉದ್ಯೋಗ ಮೇಳಗಳು ಸಹಕಾರಿಯಾಗಲಿದ್ದು ಎಲ್ಲಾ ವಿದ್ಯಾರ್ಥಿಗಳು ತಪ್ಪದೇ ಈ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ತಿಪ್ಪೆಸ್ವಾಮಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಕುಮಾರ್, ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ಉಪನ್ಯಾಸಕರಾದ ಗಿರಿಧರ್, ಚೇತನ್, ಶ್ರೀಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎಸ್ ರವಿಕಿರಣ್, ತುಮಕೂರು ಚೇಂಬರ್ ಆಫ್ ಫಾರ್ಮಸಿ ಮಾಜಿ ಅಧ್ಯಕ್ಷ ಸುಜ್ಞಾನಿ ಹಿರೇಮಠ, ನಿರ್ದೇಶಕ ಬಸವರಾಜ ಹಿರೇಮಠ, ರವಿಶಂಕರ್, ನಿವೃತ್ತ ತಹಶೀಲ್ದಾರ್ ಎಂ.ವಿ ಹನುಮಂತಯ್ಯ, ರಿಕ್ತ ಟೆಕ್ನೊ ಸೊಲ್ಯೂಷನ್ನಿನ ನಿರ್ದೇಶಕ ರವಿಶಂಕರ್, ಟ್ರಿವಿಡ್ಟನ್ಸ್ ಕಂಪನಿಯ ಯೋಜನಾಧಿಕಾರಿ ಪವನ್ ಕುಮಾರ್, ಯುಕ್ತ ಫೌಂಡೇಶನ್ ವ್ಯವಸ್ಥಾಪಕ ನಿರ್ದೇಶಕ ದಿಲೀಪ್, ಕಾಲೇಜಿನ ಉಪನ್ಯಾಸಕರು, ಹಳೇ ವಿದ್ಯಾರ್ಥಿಗಳು ಇದ್ದರು.
ಶಾಸಕ ಡಾ.ಜಿ ಪರಮೇಶ್ವರ ಆಶಯದಂತೆ ರಾಜ್ಯ ಹಾಗೂ ಅಂತರ್ ರಾಜ್ಯದ ೧೦೦ಕ್ಕೂ ಹೆಚ್ಚು ಕಂಪನಿಗಳು  ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ವಿದ್ಯಾರ್ಥಿಗಳು ಹಾಗೂ ನಿರುದ್ಯೋಗ ಯುವಕ ಯುವತಿಯರು ಭಾಗವಹಿಸಬಹುದಾಗಿದೆ. ಉದ್ಯೋಗ ಮೇಳದಲ್ಲಿ ಬೆಂಗಳೂರು ಮತ್ತು ತುಮಕೂರಿನ ಹೆಸರಾಂತ ಕಂಪನಿಗಳು ಭಾಗವಹಿಸಲಿದ್ದು, ಆಸಕ್ತ ಎಸ್‌ಎಸ್‌ಎಲ್‌ಸಿ, ಪಿಯುಸಿ, ಯಾವುದೇ ಪದವಿ, ಬಿ.ಇ., ಎಂಸಿಎ, ಎಂಬಿಎ ಹಾಗೂ ಇನ್ನಿತರ ಸ್ನಾತಕೋತ್ತರ ಪದವಿ ಮತ್ತು ಐಟಿಐ, ಡಿಪ್ಲೋಮಾ ಪಾಸಾದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಇದು ಜನಪ್ರಿಯ ಶಾಸಕ ಪರಮೇಶ್ವರ ರವರ ಆಶಯವಾಗಿದ್ದು, ತಾಲ್ಲೂಕಿನ ಅರ್ಹ ಯುವ ಜನತೆ ಭಾಗವಹಿಸಿ ಇದರ ಸದುಪಯೋಗಪಡೆದುಕೊಳ್ಳಲು ವಿನಂತಿಸುತ್ತೇನೆ. – ಮುರುಳೀಧರ ಹಾಲಪ್ಪ, ಕೌಶಲ್ಯ ಅಭಿವೃದ್ಧಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next